ಗಣರಾಜ್ಯೋತ್ಸವ ಮುಗಿದು 24 ಗಂಟೆಗಳಾದರೂ ಧ್ವಜವನ್ನು ತೆರವುಗೊಳಿಸದ ಶಿಕ್ಷಕ.

ಜನೆವರಿ 26 ರಂದು 74ನೇ ಗಣರಾಜ್ಯೋತ್ಸವದ ಅಂಗವಾಗಿ ನಿನ್ನೆ ದಿನ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಟ್ಟಡಗಳ ಮೇಲೆ ಧ್ವಜಾರೋಹಣ ಮಾಡಲಾಗಿತ್ತು. ಆದರೆ ಇಲ್ಲೊಬ್ಬ ಶಿಕ್ಷಕ ಎರಡು ದಿನಗಳಾದರೂ ಧ್ವಜವನ್ನು ತೆರವುಗೊಳಿಸದೇ ಕರ್ತವ್ಯ ಲೋಪ ಎಸಗಿದ ಆರೋಪದ ಕೇಳಿ ಬಂದಿದೆ. ಸುರಪುರ ತಾಲ್ಲೂಕಿನ ಕೇ. ತಳ್ಳಳ್ಳಿ ಗ್ರಾಮದ ಹೊರವಲಯದಲ್ಲಿರುವ ವಲಯದಲ್ಲಿರುವ ಬೆಂಚಿ ಶಾಲೆಯಲ್ಲಿ ಎರಡು ದಿನಗಳಾದರೂ ರಾಷ್ಟ್ರ ಧ್ವಜ ಹಾರಾಡುತ್ತಿದೆ ಇದನ್ನು ಕಂಡ ದೇಶಾಭಿಮಾನಿಗಳು ವಿಡಿಯೊ ವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಶಾಲಾ ಶಿಕ್ಷಕ ಬಿ. ಹುಸೇನಪ್ಪ ಬಾರಿಕರರವರು ಕರ್ತವಲೋಪ ಮೆರೆದು ರಾಷ್ಟ್ರಧ್ವಜಕ್ಕೆ ಅಗೌರತ್ವರಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಶಿಕ್ಷಕನನ್ನು ಸಸ್ಪೆಂಡ್ ಮಾಡುವಂತೆ ಆಗ್ರಹಿಸಿದ್ದಾರೆ.ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಂಚಿ ಕೆ. ತಳ್ಳಳ್ಳಿ ಶಾಲೆಯ ಶಿಕ್ಷಕ ಬಿ. ಹುಸೇನಪ್ಪ ರವರು ಈ ಹಿಂದೆಯೂ ಕೂಡ ಡಾ. ಎಪಿಜೆ ಅಬ್ದುಲ್ ಕಲಾಂ ರವರು ದೈವಧೀನರಾದಾಗ ಧ್ವಜವನ್ನು ಹಾರಿಸದೇ ಅಗೌರವ ವನ್ನು ತೋರಿದ್ದರು, ಈ ತರಹದ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಅಧಿಕಾರಿಗಳು ಮತ್ತು ಸ್ಥಳೀಯರು ಕೂಡಿ ತಿಳುವಳಿಕೆ ನೀಡಿದ್ದರು. ಆದರೆ ಶಿಕ್ಷಕರ ತಾನು ಆಡಿದ್ದೆ ಆಟ ಮಾಡಿದ್ದೇ ಪಾಠ ಅಂತ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ.. ಪಾಲಕರು ಶಿಕ್ಷಕನಿಗೆ ಏನಾದರೂ ಕೇಳಲು ಹೋದರೆ ಒದೆಯುತ್ತೇನೆ ಹಾಗೂ ಕೇಸ್ ಮಾಡುತ್ತೇನೆ ಎಂದು ಅವಾಜ್ ಹಾಕಿದ್ದಾನೆ ಎಂದು ಮಕ್ಕಳ ಪಾಲಕರು ಆರೋಪಿಸಿದ್ದಾರೆ. ಶಿಕ್ಷಕ ಬಿ. ಹುಸೇನಪ್ಪ ಶಾಲೆಗೆ ಹಾಜರಾಗದೆ ಏಳರಿಂದ ಎಂಟು ಮಕ್ಕಳಿರುವ ಶಾಲೆಯಲ್ಲಿ ತನಗೆ ಒಬ್ಬ ಅತಿಥಿ ಶಿಕ್ಷಕನನ್ನು ನೇಮಿಸಿಕೊಂಡು ತನಗೆ ಇಷ್ಟಬಂದಂತೆ ವರ್ತಿಸುತ್ತಿದ್ದಾನೆ. ದಿನನಿತ್ಯ ತನ್ನ ಮೊಬೈಲ್ ನಲ್ಲಿ 108 ಸ್ಟೇಟಸ್ ಗಳನ್ನು ಹಾಕುತ್ತಾ ಕರ್ತವ್ಯಕ್ಕೆ ದ್ರೋಹ ಎಸಗಿದ್ದಾರೆ, ಅಧಿಕಾರಿಗಳು ಕೂಡಲೇ ಕರ್ತವ್ಯ ಲೋಪ ಏಸಗಿದ ಈ ಶಿಕ್ಷಕನನ್ನು ಸಸ್ಪೆಂಡ್ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸ್ ವಾಹನ ಢಿಕ್ಕಿ-ಅಮೆರಿಕಾದಲ್ಲಿ ಭಾರತ ಮೂಲದ ಯುವತಿ ಮೃತ್ಯು.

Fri Jan 27 , 2023
ಅಮೆರಿಕಾ, ಜ.27. ಸಿಯಾಟಲ್ ಪೊಲೀಸ್ ಗಸ್ತು ವಾಹನ ಢಿಕ್ಕಿ ಹೊಡೆದು ಭಾರತ ಮೂಲದ 23 ವರ್ಷದ ಯುವತಿ ಮೃತಪಟ್ಟ ಘಟನೆ ಅಮೆರಿಕದ ಸೌತ್ ಲೇಕ್ ಯೂನಿಯನ್‌ನಲ್ಲಿ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಜಾಹ್ನವಿ ಕಂದುಲಾ ಮೃತ ಯುವತಿ ಎನ್ನಲಾಗಿದೆ. ಈಕೆ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ವಿದ್ಯಾರ್ಥಿನಿಯಾಗಿದ್ದಳು ಎಂದು ವರದಿಯಾಗಿದೆ. ಸಂತ್ರಸ್ತೆ ಗಂಭೀರ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು […]

Advertisement

Wordpress Social Share Plugin powered by Ultimatelysocial