‘Boycott RRR’: ದರ್ಶನ್, ಯಶ್‌ಗೆ ಸುತ್ತಿಕೊಂಡ ‘RRR’ ವಿವಾದ!

‘RRR’ ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುವಂತೆ ಅಭಿಯಾನ ಶುರುವಾಗಿದೆ. ಇದಕ್ಕೆ ಕಾರಣ ಕನ್ನಡ ಅವತರಣಿಕೆಯಲ್ಲಿ ಕರ್ನಾಟಕದಲ್ಲಿ ‘ಆರ್‌ಆರ್‌ಆರ್’ ರಿಲೀಸ್ ಆಗುತ್ತಿಲ್ಲ ಎನ್ನುವುದು. ಕನ್ನಡದ ಅವತರಣಿಕೆಯ ‘ಆರ್‌ಆರ್‌ಆರ್’ ಪ್ರದರ್ಶನ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ.

ಕನ್ನಡದಲ್ಲಿ ‘ಆರ್‌ಆರ್‌ಆರ್’ ಚಿತ್ರವನ್ನು ನೋಡಬೇಕೆಂದು ಟಿಕೆಟ್ ಬುಕ್ ಮಾಡಲು ಮುಂದಾದವರಿಗೆ ಟಿಕೆಟ್ ಸಿಗುತ್ತಿಲ್ಲ.

ಕನ್ನಡದಲ್ಲೂ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ ಎಂದು ಸಿನಿಮಾ ತಂಡ ಹೇಳಿತ್ತು. ಆದರೆ ಅದು ಸಾಧ್ಯ ಆಗಿಲ್ಲ. ಹಾಗಾಗಿ ಕನ್ನಡದಲ್ಲಿ ಸಿನಿಮಾ ರಿಲೀಸ್ ಮಾಡದೇ ದ್ರೋಹ ಮಾಡಲಾಗುತ್ತಿದೆ ಎಂದು ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಅಷ್ಟೇ ಅಲ್ಲ ಸಿನಿಮಾವನ್ನು ಬೇರೆ ಭಾಷೆಯಲ್ಲಿ ರಿಲೀಸ್ ಮಾಡಲು ಬಿಡದೆ ಪ್ರತಿಭಟನೆ ಮಾಡುವುದಾಗಿ ಹಲವು ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಇಳಿದಿವೆ.

ಈ ಬಗ್ಗೆ ಕಳೆದ ಒಂದು ದಿನದಿಂದ ದೊಡ್ಡದಾಗಿ ಗದ್ದಲ ಸೃಷ್ಟಿ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಾಯ್‌ಕಾಟ್ ‘ಆರ್‌ಆರ್‌ಆರ್’ ಅಭಿಯಾನ ಶುರುವಾಗಿದೆ. ಆದರೆ ಈ ಬಗ್ಗೆ ಕನ್ನಡದ ನಟರು ಮಾತಾಡದೇ ಇರುವುದಕ್ಕೆ ಹಲವು ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಮತ್ತು ಯಶ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಕನ್ನಡವನ್ನು ಹೀಗೆ ಕಡೆಗಣಿಸ ಬೇಡಿ ಎಂದು ಹೇಳುತ್ತಿದ್ದಾರೆ.

ದರ್ಶನ್, ಯಶ್‌ಗೆ ಕನ್ನಡಿಗರ ಪ್ರಶ್ನೆ!ಸದ್ಯ ‘ಆರ್‌ಆರ್‌ಆರ್’ ಚಿತ್ರದ ವಿಚಾರದಲ್ಲಿ ವಿವಾದ ಸೃಷ್ಟಿ ಆಗಲು ಕಾರಣ ಭಾಷೆ. ಕನ್ನಡ ಭಾಷೆಯಲ್ಲಿ ಮಾತ್ರ ‘ಆರ್‌ಆರ್‌ಆರ್’ ಚಿತ್ರವನ್ನು ರಿಲೀಸ್ ಮಾಡದೇ ಇರುವ ಕಾರಣಕ್ಕೆ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಆದರೆ ಈ ಬಗ್ಗೆ ಕನ್ನಡದ ಸ್ಟಾರ್ ನಟರು ಮೌನ ವಹಿಸಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕನ್ನಡದ ಸ್ಟಾರ್ ನಟರಾದ ಯಶ್ ಮತ್ತು ದರ್ಶನ್ ಈ ವಿಚಾರದಲ್ಲಿ ಸುಮ್ಮನೆ ಯಾಕೆ ಇದ್ದೀರಾ?, ಕನ್ನಡದ ವಿಚಾರ ಬಂದಾಗ ನೀವೂ ಮಾತನಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೌನವಾಗಿ ಒಂದು ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲು ಸಹಾಯ ಮಾಡಿದ್ದ, 'ವಿಜಯ್ ಸೇತುಪತಿ!

Thu Mar 24 , 2022
ಪಾಂಡಿಚೇರಿ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ನಟ ವಿಜಯ್ ಸೇತುಪತಿ ಅವರು ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಪಡೆಯಲು ಮೌನವಾಗಿ ಸಹಾಯ ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಕಾರ್ಯಕರ್ತ, ವೀರರಾಹವನ್, ವಲ್ಲಲ್ಲಾರ್ ವೆಲೈ ವೈಪು ಸೇವಾ ಇಯಕ್ಕಂ ಎಂಬ ಸರ್ಕಾರೇತರ ಸಂಸ್ಥೆಯನ್ನು ನಡೆಸುತ್ತಿದ್ದಾರೆ, ಇದು ಯುವಕರಿಗೆ ಮಾರ್ಗದರ್ಶನ ಮತ್ತು ಉದ್ಯೋಗ ಸೇವೆಗಳನ್ನು ಉಚಿತವಾಗಿ ಒದಗಿಸುವಲ್ಲಿ ತೊಡಗಿಸಿಕೊಂಡಿದೆ. ಎನ್‌ಜಿಒ ಪಾಂಡಿಚೇರಿ ಮತ್ತು ತಮಿಳುನಾಡಿನ ಹಲವಾರು ಜಿಲ್ಲೆಗಳಲ್ಲಿ ಅನೇಕ ಕಂಪನಿಗಳಿಗೆ ಸೂಕ್ತ ಉದ್ಯೋಗಿಗಳನ್ನು […]

Advertisement

Wordpress Social Share Plugin powered by Ultimatelysocial