ಈ ಹಣ್ಣು, ತರಕಾರಿ ಸೇವನೆ ಮಾಡಿದ್ರೆ ಸೋಂಕಿನಿಂದ ದೂರವಿರಬಹುದು;

ಹವಾಮಾನ ಬದಲಾದಂತೆ ಅನೇಕ ಜನರು ಅಲರ್ಜಿ, ಜ್ವರ ಮತ್ತು ಶೀತ, ಕೆಮ್ಮಿನಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಚಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗುತ್ತಿರುವ ಕಾರಣ ತಾಪಮಾನದಲ್ಲಿ ಬದಲಾವಣೆಯಾಗುತ್ತದೆ. ಈ ಬದಲಾವಣೆ ಅನೇಕ ಸೋಂಕು ಹರಡಲು ಕಾರಣವಾಗುತ್ತದೆ.

ಈ ಸಮಯದಲ್ಲಿ ಹೆಚ್ಚಿನ ಜನರು ಜ್ವರ, ಅಲರ್ಜಿ, ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಾರೆ. ಆರೋಗ್ಯಕರ ಆಹಾರದ ಸೇವನೆ ಮಾಡಿದ್ರೆ ಈ ಸೋಂಕಿನಿಂದ ದೂರವಿರಬಹುದು.

ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ವಿಟಮಿನ್ ಸಿ ಇರುವ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡಬೇಕು. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಿತ್ತಳೆ, ಮೆಣಸು, ದ್ರಾಕ್ಷಿ, ಕಿವಿಸ್, ಪೇರಲೆ ಮತ್ತು ಸ್ಟ್ರಾಬೆರಿಗಳಂತಹ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳನ್ನು ಸೇರಿಸಬೇಕು.

ಮಸಾಲೆಗಳು ರೋಗ ಬರದಂತೆ ತಡೆಯಲು ಸಹಕಾರಿ. ಈ ಋತುವಿನಲ್ಲಿ ಅರಿಶಿನ, ಶುಂಠಿ, ಬೆಳ್ಳುಳ್ಳಿ, ದಾಲ್ಚಿನ್ನಿ, ಲವಂಗ, ಜೀರಿಗೆ, ತುಳಸಿ ಮತ್ತು ಪುದೀನನ್ನು ಸೇವಿಸಬೇಕು. ಈ ಮಸಾಲೆಗಳು ಅನೇಕ ರೋಗಗಳಿಂದ ತನ್ನ ದೇಹವನ್ನು ರಕ್ಷಿಸುತ್ತವೆ. ಚಹಾ, ಸೂಪ್ ಮತ್ತು ಸಲಾಡ್ ಸೇವನೆ ಒಳ್ಳೆಯದು.

ಒಣ ಹಣ್ಣುಗಳ ಸೇವನೆ ಕೂಡ ಅತ್ಯಗತ್ಯ. ಬಾದಾಮಿ, ವಾಲ್ನಟ್ಸ್ ಮತ್ತು ಪಿಸ್ತಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ವಿಟಮಿನ್ ಇ ಸಮೃದ್ಧವಾಗಿದ್ದು ಸೋಂಕುಗಳನ್ನು ದೂರವಿಡಲು ಸಹಕಾರಿ.

ಪಾಲಕ್, ಮೆಂತ್ಯ ಸೇರಿದಂತೆ ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ಬಳಸಿ. ಹಾಗೆ ಹೆಚ್ಚು ತರಕಾರಿಗಳ ಸೇವನೆ ಮಾಡಬೇಕು. ಹಸಿರು ಸೊಪ್ಪು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಲೈಕಾ ಅರೋರಾ ಅವರ ನೆಚ್ಚಿನ ತಾಲೀಮು ಸಂಗಾತಿ ಯಾರು?

Tue Feb 1 , 2022
ಬೆರಗುಗೊಳಿಸುವ ಚಿತ್ರಗಳು ಮತ್ತು ವೀಡಿಯೊಗಳೊಂದಿಗೆ ನಮ್ಮ Instagram ಫೀಡ್ ಅನ್ನು ಹೇಗೆ ಬೆಳಗಿಸುವುದು ಎಂದು ಮಲೈಕಾ ಅರೋರಾ ತಿಳಿದಿದ್ದಾರೆ. ಬಾಲಿವುಡ್‌ನ ಫಿಟ್ ಮತ್ತು ಫ್ಯಾಬ್ ಕ್ವೀನ್, ಮಲೈಕಾ ಅವರ ಫಿಟ್‌ನೆಸ್ ದಿನಚರಿಗಳು ಯಾವಾಗಲೂ ಅವರ ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತವೆ. ಅವಳು ತನ್ನ ಯೋಗವನ್ನು ಸಲೀಸಾಗಿ ಮಾಡುತ್ತಾಳೆ, ಸ್ವತಂತ್ರ ಮನೋಭಾವದಂತೆ ಪ್ರಯಾಣಿಸುತ್ತಾಳೆ, ಕೆಲವು ಸಂತೋಷಕರ ಆಹಾರವನ್ನು ಬೇಯಿಸುತ್ತಾಳೆ ಮತ್ತು ಯಾರೂ ನೋಡದ ಹಾಗೆ ನೃತ್ಯ ಮಾಡುತ್ತಾಳೆ. ಸರಿ, ಅವರ ಇನ್‌ಸ್ಟಾಗ್ರಾಮ್ ಫೀಡ್ […]

Advertisement

Wordpress Social Share Plugin powered by Ultimatelysocial