ಈ ಮಗು ಸ್ಯಾಂಡ್‌ವಿಚ್ ಮಾಡುವ ದೃಶ್ಯವೇ ಚೆಂದ.

 

ಮುದ್ದು ಮಕ್ಕಳ ದೃಶ್ಯಗಳನ್ನು ನೋಡುವಾಗ ಸಿಗುವ ಆನಂದ ಬಣ್ಣಿಸಲಸಾಧ್ಯ. ಈಗಂತು ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಬೇಕಾದಷ್ಟು ದೃಶ್ಯಗಳು ನಮಗೆ ಕಾಣಸಿಗುತ್ತವೆ. ಹೀಗೆ ಕಾಣಸಿಗುವ ದೃಶ್ಯಗಳು ಅರೆಕ್ಷಣದಲ್ಲಿ ನಮ್ಮ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ.ಸಾಮಾನ್ಯವಾಗಿ ಪುಟ್ಟ ಮಕ್ಕಳಿಗೆ ಅಡುಗೆ ಎಂದರೆ ಕುತೂಹಲ. ಅಮ್ಮ ಅಡುಗೆ ತಯಾರಿಸುವಾಗ ಅಡುಗೆ ಕೋಣೆಗೆ ಬಂದು ಮಕ್ಕಳು ಕುತೂಹಲದಿಂದ ನೋಡುವುದು ಹೊಸದೇನೂ ಅಲ್ಲ. ಆದರೆ, ಇಲ್ಲೊಬ್ಬ ಪುಟಾಣಿ ಬರೀ ಕುತೂಹಲದಿಂದ ಅಡುಗೆ ತಯಾರಿಸುವುದನ್ನು ನೋಡುತ್ತಿಲ್ಲ, ಬದಲಾಗಿ ತಾನೇ ತಿನಿಸುಗಳನ್ನು ತಯಾರಿಸುತ್ತಾನೆ  ಇಂತಹದ್ದೊಂದು ವಿಡಿಯೋ ಈಗ ವೈರಲ್ ಆಗುತ್ತಿದೆ. ಇದು ಪುಟಾಣಿಯೊಬ್ಬ ಸ್ಯಾಂಡ್‌ವಿಚ್ ತಯಾರಿಸುವ ದೃಶ್ಯ. ಈ ಪುಟಾಣಿ ತನ್ನ ಸ್ನ್ಯಾಕ್ಸ್‌ ತಯಾರಿಸುವ ದೃಶ್ಯ ಈಗ ಎಲ್ಲರ ಗಮನ ಸೆಳೆದಿದೆ. ಈ ಕ್ಲಿಪ್‌ನಲ್ಲಿ ಪುಟಾಣಿಯೊಬ್ಬ ಒಲೆಯ ಮುಂದೆ ಕುಳಿತು ಸ್ಯಾಂಡ್‌ವಿಚ್‌ಗೆ ಬೇಕಾದಂತಹ ಸಿದ್ಧತೆ ಮಾಡಿಕೊಳ್ಳುವುದನ್ನು ನೋಡಬಹುದು. ಮೊದಲು ಬ್ರೆಡನ್ನು ರೋಸ್ಟ್‌ ಮಾಡಲು ಕಾವಲಿಗೆ ಹಾಕುವ ಪುಟಾಣಿ ಬಳಿಕ ಮೊಟ್ಟೆಯೊಡೆದು ಕಾವಲಿಗೆ ಹಾಕುತ್ತಾನೆ. ಬಳಿಕ ಬೆಂದ ಆಮ್ಲೇಟ್ ಮೇಲೆ ಸಾಸ್ ಸೇರಿಸುವ ಬಾಲಕ ಅದನ್ನು ಬ್ರೆಡ್‌ನ ನಡು ಭಾಗದಲ್ಲಿ ಇಟ್ಟು ಸವಿಯುತ್ತಾನೆ. ಈ ಮೂಲಕ ಈ ಮುದ್ದಾದ ಕ್ಲಿಪ್ ಕೊನೆಯಾಗುತ್ತದೆ. `ಮುದ್ದಾದ ಪುಟಾಣಿ ಬಾಣಸಿಗ’ ಎಂಬ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂದು 'ಅಣ್ಣಾ' ಅಂದವನ್ನೇ ಇಂದು 'ಪತಿದೇವಾ' ಅಂತಿದ್ದಾಳೆ ಈ ಬಾಲಿವುಡ್ ಬ್ಯೂಟಿ!

Fri Feb 24 , 2023
ಸಮಾಜವಾದಿ ಪಕ್ಷದ ನಾಯಕ ಫಹಾದ್ ಜಿರಾರ್ ಅಹಮದ್ ಜೊತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವ ಪೋಸ್ಟ್ ಒಂದು ಕಣ್ಣಿಗೆ ಬಿದ್ದಿದೆ.ತಮ್ಮ ವಿವಾಹದ ಬಗ್ಗೆ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸ್ವರಾ ಭಾಸ್ಕರ್ ಬಹಿರಂಗಪಡಿಸಿದ್ದರು. ಸ್ವರಾ ಭಾಸ್ಕರ್ ಅವರು ದಿಢೀರ್ ಆಗಿ ಮದುವೆಯಾಗಿದ್ದನ್ನು ಕಂಡ ಅವರ ಅಭಿಮಾನಿಗಳು ಶಾಕ್ ಕೂಡ ಆಗಿದ್ದರು.ಫಹಾದ್ ಅಹಮದ್ ಒಬ್ಬ ವಿದ್ಯಾರ್ಥಿ ನಾಯಕ ಮತ್ತು ಸಮಾಜ […]

Advertisement

Wordpress Social Share Plugin powered by Ultimatelysocial