16ರಂದು ಸ್ವಾಮಿ ಸಮರ್ಥ ಮಂದಿರದಲ್ಲಿ ಶಂಕರಸ್ವಾಮಿ

ಕಲಬುರಗಿ,ಜ.13-ತಾಲ್ಲೂಕಿನ ಅವರಾದ (ಬಿ) ಗ್ರಾಮದಲ್ಲಿ ಪರಮ ಪೂಜ್ಯ ಲಿಂಗೈಕ್ಯ ಶ್ರೀ ಶಂಕರ ಸ್ವಾಮಿ ಮಹಾರಾಜರಿಂದ ಸಂಸ್ಥಾಪಿತವಾÀದ ಶ್ರೀ ಸ್ವಾಮಿ ಸಮರ್ಥ ಮಂದಿರದಲ್ಲಿ ಜ.16 ರಂದು “ಲಿಂಗೈಕ್ಯ ಪೂಜ್ಯ ಶ್ರೀ ಶಂಕರಸ್ವಾಮಿ ಮಹಾರಾಜರ 19ನೇ ವರ್ಷದ ಪುಣ್ಯಸ್ಮರಣೋತ್ಸವ” ಕಾರ್ಯಕ್ರಮವನ್ನು ಆಚರಿಸಲು ನಿರ್ಧರಿಸಲಾಗಿದೆ.
ಅದರಂತೆ ಜ.16 ರಂದು ಅನೇಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದಿನ ಮುಖ್ಯ ಕಾರ್ಯಕ್ರಮದಲ್ಲಿ ಬೆಳಿಗ್ಗೆ 7.30 ರಿಂದ 11.30 ಗಂಟೆಯವರೆಗೆ ಮುಂಬ್ಯೆನಿಂದ ಆಗಮಿಸುವ ಭಕ್ತಾದಿಗಳಿಂದ “ಮಹಾಭಿಷೆಕ” ಹಾಗೂ ಮಹಾ ಆರತಿ ನಡೆಯುವುದು. ಮಧ್ಯಾಹ್ನ 12 ಗಂಟೆಯಿಂದ “ಶ್ರೀ ಸ್ವಾಮಿ ಸಮರ್ಥರ ಪಲ್ಲಕ್ಕಿ ಉತ್ಸವÀ” ನಂತರ 1 ಗಂಟೆಯಿಂದ “ಮಹಾಪ್ರಸಾದ” ನಂತರ ಭಕ್ತಾಧಿಗಳಿಂದ ಭಕ್ತಿ ಸಂಗೀತ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯುವವು.
ಅದರಂತೆ ಗುಲಬರ್ಗಾದ ಶ್ರೀ ಸ್ವಾಮಿ ಸಮರ್ಥರ ಮಂದಿರದಲ್ಲಿ “ಲಿಂಗೈಕ್ಯ ಪೂಜ್ಯ ಶ್ರೀ ಶಂಕರಸ್ವಾಮಿ ಮಹಾರಾಜರ 19ನೇ ವರ್ಷದ ಪುಣ್ಯಸ್ಮರಣೋತ್ಸವ” ಕಾರ್ಯಕ್ರಮದÀ ಅಂಗವಾಗಿ ಜ.16 ರಂದು ಸೋಮವಾರ ಮುಂಬೈನಿಂದ ಆಗಮಿಸುವ ಶ್ರೀ ಸ್ವಾಮಿ ಸಮರ್ಥರ ಭಕ್ತರು ಹಾಗೂ ಸಂತರು ಆಗಿರುವ ಶ್ರೀ ಅಶೋಕ ಗುರಾಮ ಹಾಗೂ ಇವರ ಶಿಷ್ಯಂದಿರಿಂದ ಮಧ್ಯಾಹ್ನ 12 ಗಂಟೆಯಿಂದ “ಸಂತ್ಸಂಗ”À ನಡೆಯುವುದು.
ಈ ಕಾರ್ಯಕ್ರಮದಲ್ಲಿ ನೆರೆಯ ಮಹಾರಾಷ್ಟ್ರದ ಮುಂಬೈ, ಪುಣೆ, ಹಾಗೂ ಇನ್ನಿತರೆ ಪ್ರದೇಶಗಳಿಂದ ಮತ್ತು ಗುಲಬರ್ಗಾ ನಗರ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಿಂದ ಬರುವ ಭಕ್ತಾದಿಗಳು ಭಾಗವಹಿಸಲಿದ್ದಾರೆ. ಆದಕಾರಣ ಭಕ್ತಾದಿಗಳು ಅಂದಿನ ಪೂಜಾ ವಿಧಿಗಳಲ್ಲಿ ಭಾಗವಹಿಸಿ ಪುನಿತರಾಗಬೇಕೆಂದು ಅವರಾದ (ಬಿ) ಶ್ರೀ ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶಿವಾನಂದ ಗುಡ್ಡಾ ಪ್ರಕಟಣೆಯಲ್ಲಿ ಕೋರಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

How to locate Legitimate Overseas Dating Sites and Apps

Sat Jan 14 , 2023
Getting in touch with people from other aspects of the world isn’t simply easier, is become a tradition thanks to foreign dating sites and apps. These online places offer a various ways to fulfill potential affectionate partners and possess become popular among singles of all ages. However , there are […]

Advertisement

Wordpress Social Share Plugin powered by Ultimatelysocial