ನಾನು ಭಯಸ್ತ ಅಲ್ಲ, ಮಾಗಡಿ ರೋಡಲ್ಲಿ ದೊಡ್ಡದೊಡ್ಡ ಪೋಲಿ ಆಟವಾಡಿ ಬಂದವನು: ಹಂಸಲೇಖ

ಬೆಂಗಳೂರು: ನನ್ನ ವಿರುದ್ಧ ಒಂದು ವಿವಾದ ಆದಾಗ ನನ್ನ ಬೆಂಬಲಕ್ಕೆ ನಿಂತಿದ್ದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರು ಎಂದು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಹಳೆಯ ಘಟನೆಯನ್ನು ಕೆದಕಿದರು.

ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರ ಆತ್ಮಕಥನ ಯರಬೇವು ಬಿಡುಗಡೆ ಕಾರ್ಯಕ್ರಮದಲ್ಲಿ ಹಂಸಲೇಖ ಅವರು ಮಾತನಾಡಿದರು.

ನನ್ನ ವಿರುದ್ಧ ಒಂದು ವಿವಾದ ಆದಾಗ ಸುಮ್ಮನಿರು ನಾನು ಮಾತನಾಡುತ್ತೇನೆಂದು ನನ್ನ ಬೆಂಬಲಕ್ಕೆ ನಿಂತಿದ್ದು ಎಸ್​ಜಿಎಸ್​ ಅವರು. ಬ್ಲಡ್ ಫ್ರೈ ಬಗ್ಗೆ ಮಾತನಾಡಿದಕ್ಕೆ ಬ್ಲಡ್ ತಿನ್ನೋದನ್ನ ಮರೆತವರು ಸೇರಿ ನನ್ನ ಮೇಲೆ ಮುಗಿಬಿದ್ದರು. ಅಂದು ನಾನು ಮಾಡಿದ್ದು ಬರೆದುಕೊಂಡು ಬಂದ ಭಾಷಣ ಆಗಿರಲಿಲ್ಲ. ದೇಶಿಯ ಭಾಷೆಯಲ್ಲಿ ಮಾತನಾಡಿದ್ದಕ್ಕೆ ಕೆಲವರು ನನ್ನ ವಿರುದ್ಧ ತಿರುಗಿಬಿದ್ರು. ನುಡಿದರೆ ಮುತ್ತಿನಹಾರದಂತೆ ಇರಬೇಕು. ಆದರೆ, ಅಂತಹ ಮಾತು ಕೆಲ ಸಂದರ್ಭದಲ್ಲಿ ಕುದಿಯುವ ಸಲಾಕೆ ಆಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ನಾಗರಾಜ ಮೂರ್ತಿ ಅವರು ಯಾರಿಗೂ ಹೆದರಬೇಡಿ ಅಂತ ಬೆಂಬಲ ನೀಡಿದ್ದಾರೆ. ಆದರೆ, ನಾನು ಭಯಸ್ತ ಅಲ್ಲ. ಮಾಗಡಿ ರೋಡ್​ನಲ್ಲಿ ದೊಡ್ಡ ದೊಡ್ಡ ಪೊಲಿ ಆಟಗಳನ್ನು ಆಡಿ ಬಂದವನು ನಾನು. ಅದಕ್ಕೊಂದು ಚರಿತ್ರೆಯೇ ಇದೆ. ಈಗ ನನಗೆ ಎಪ್ಪತ್ತು, ತಿನ್ನೋದು ಒಪ್ಪತ್ತು ಎಂದರು.

ಯರೆಬೇವು ಪುಸ್ತಕ ದೇಸಿ ಸಮುದಾಯದ ಕರುಳಿನ ಕತೆಯಾಗಿದೆ. ನಮ್ಮದೂ ಕೂಡ ಅದೇ ರೀತಿಯ ಕರುಳಿನ ಕತೆ. ಇತ್ತಿಚೆಗೆ ಒಂದು ಸಮಸ್ಯೆಯಾಗಿ ನನಗೆ ಗೊತ್ತಿಲ್ಲದ ಸಮುದಾಯಗಳೆಲ್ಲ ನನ್ನ ಜತೆಗೆ ಬಂದು ನಿಂತರು. ಹೀಗೆಲ್ಲ ಆಗತ್ತೆ ಅಂತ ನನಗೆ ಗೊತ್ತಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತವರು ಎಸ್.ಜಿ ಸಿದ್ದರಾಮಯ್ಯ ಎಂದು ನೆನೆದರು.

ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರ ಆತ್ಮಕಥನ ಯರಬೇವು ಬಿಡುಗಡೆ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಮರಳುಸಿದ್ದಪ್ಪ, ಚನ್ನಬಸಪ್ಪ, ಹಂಸಲೇಖ, ಆಶಾದೇವಿ, ಮಹದೇವಯ್ಯ ಉಪಸ್ಥಿತರಿದ್ದರು. ಸ್ವಾಗತ ಭಾಷಣದಲ್ಲಿಯೇ ಹಂಸಲೇಖ ವಿರುದ್ಧ ತಿರುಗಿಬಿದ್ದ ವೈದಿಕ ಶಾಹಿ ನಿಲುವನ್ನು ಪ್ರಗತಿಪರ ಚಿಂತಕ ಕೆ.ವಿ ನಾಗರಾಜ್ ಮೂರ್ತಿ ಖಂಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನೀವು 60 ವರ್ಷಕ್ಕಿಂತ ಮೇಲ್ಪಟ್ಟಿದ್ದೀರಾ? ಪ್ರಧಾನಿ ಮೋದಿ ಅವರು ನಿಮಗಾಗಿ ಪ್ರಕಟಿಸಿದ ಮಾಹಿತಿ ಇಲ್ಲಿದೆ

Sun Dec 26 , 2021
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು, ಈ ನಡುವೆ ಅವರ ಮಾತಿನಲ್ಲಿ, ಕೋವಿಡ್-19 ಲಸಿಕೆಯನ್ನು ಜನವರಿ 10 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ‘ಮುನ್ನೆಚ್ಚರಿಕೆ ಡೋಸ್’ (‘precaution doses’) ನೀಡಲಾಗುವುದು ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಮುಂದಿನ ವರ್ಷ ಜನವರಿ 10 ರಿಂದ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಸಲಹೆ ಮತ್ತು ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗುವುದು ಅಂತ ತಿಳಿಸಿದ್ದಾರೆ. 15-18 ವರ್ಷ ವಯಸ್ಸಿನ ಮಕ್ಕಳಿಗೆ […]

Advertisement

Wordpress Social Share Plugin powered by Ultimatelysocial