ನೀವು 60 ವರ್ಷಕ್ಕಿಂತ ಮೇಲ್ಪಟ್ಟಿದ್ದೀರಾ? ಪ್ರಧಾನಿ ಮೋದಿ ಅವರು ನಿಮಗಾಗಿ ಪ್ರಕಟಿಸಿದ ಮಾಹಿತಿ ಇಲ್ಲಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು, ಈ ನಡುವೆ ಅವರ ಮಾತಿನಲ್ಲಿ, ಕೋವಿಡ್-19 ಲಸಿಕೆಯನ್ನು ಜನವರಿ 10 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ‘ಮುನ್ನೆಚ್ಚರಿಕೆ ಡೋಸ್’ (‘precaution doses’) ನೀಡಲಾಗುವುದು ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ಮುಂದಿನ ವರ್ಷ ಜನವರಿ 10 ರಿಂದ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಸಲಹೆ ಮತ್ತು ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗುವುದು ಅಂತ ತಿಳಿಸಿದ್ದಾರೆ. 15-18 ವರ್ಷ ವಯಸ್ಸಿನ ಮಕ್ಕಳಿಗೆ ಜನವರಿ 3 ರಿಂದ ಲಸಿಕೆಯನ್ನು ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ಘೋಷಿಸಿದ್ದಾರೆ.

‘ಕೊಮೊರ್ಬಿಡಿಟಿ ಹೊಂದಿರುವವರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ವೈದ್ಯರ ಶಿಫಾರಸಿನ ಮೇರೆಗೆ ಜನವರಿ 10, 2022 ರಿಂದ ಲಸಿಕೆ ಪಡೆದುಕೊಳ್ಳಬಹುದು ಅಂತ ಪಿಎಂ ಮೋದಿ ಹೇಳಿದ್ದಾರೆ. ದೇಶದಲ್ಲಿ ಆರೋಗ್ಯ ಸೌಲಭ್ಯಗಳ ಲಭ್ಯತೆಯ ಬಗ್ಗೆ ವಿವರಗಳನ್ನು ಹಂಚಿಕೊಂಡ ಅವರು, ‘ಭಾರತವು 18 ಲಕ್ಷ ಪ್ರತ್ಯೇಕ ಹಾಸಿಗೆಗಳು, ಐದು ಲಕ್ಷ ಆಮ್ಲಜನಕ ಬೆಂಬಲಿತ ಹಾಸಿಗೆಗಳು, 1.40 ಲಕ್ಷ ICU ಹಾಸಿಗೆಗಳು, 90,000 ಮಕ್ಕಳ ICU ಮತ್ತು ICU ಅಲ್ಲದ ಹಾಸಿಗೆಗಳನ್ನು ಹೊಂದಿದೆ. ನಮ್ಮಲ್ಲಿ 3,000 ಕ್ಕೂ ಹೆಚ್ಚು ಪಿಎಸ್‌ಎ ಆಮ್ಲಜನಕ ಘಟಕಗಳಿವೆ, ನಾಲ್ಕು ಲಕ್ಷ ಆಮ್ಲಜನಕ ಸಿಲಿಂಡರ್‌ಗಳನ್ನು ರಾಷ್ಟ್ರದಾದ್ಯಂತ ವಿತರಿಸಲಾಗಿದೆ ಅಂತ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಾಟ್ಸಾಪ್‌ನಲ್ಲಿ 'ವಾಯಿಸ್ ಮೆಸೆಜ್ ಪ್ರಿವ್ಯೂವ್' ಆಯ್ಕೆ ಬಳಸಲು ಹೀಗೆ ಮಾಡಿ!

Sun Dec 26 , 2021
ಮೆಟಾ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಆಪ್ ವಾಟ್ಸಾಪ್ ಅಪ್ಲಿಕೇಶನ್ ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ ಪರಿಚಯಿಸಿದೆ. ಆ ಪೈಕಿ ವಾಟ್ಸಾಪ್ ಪರಿಚಯಿಸಿರುವ ‘ವಾಟ್ಸಾಪ್ ವಾಯಿಸ್ ಮೆಸೆಜ್ ಪ್ರಿವ್ಯೂವ್’ (WhatsApp voice message preview)’ ಆಯ್ಕೆ ವಾಯಿಸ್ / ಧ್ವನಿ ಸಂದೇಶ ಕಳುಹಿಸುವ ಬಳಕೆದಾರರಿಗೆ ಹೆಚ್ಚು ಉಪಯುಕ್ತ ಎನಿಸಿದೆ. ವಾಟ್ಸಾಪ್ ಈ ಆಯ್ಕೆಯನ್ನು ಆಂಡ್ರಾಯ್ಡ್‌ ಮತ್ತು ಐಓಎಸ್‌ ಎರಡು ಸಾಧನಗಳಿಗೂ ಪರಿಚಯಿಸಿದೆ. ಈ ಆಯ್ಕೆಯಲ್ಲಿ ಬಳಕೆದಾರರು ಧ್ವನಿ ಸಂದೇಶ ಕಳುಹಿಸುವ […]

Advertisement

Wordpress Social Share Plugin powered by Ultimatelysocial