ತೆಲುಗಿನ ಖ್ಯಾತ ನಟಿ ಶ್ರೀಲೀಲಾ ಕನ್ನಡ ಸಿನಿಮಾ ಬಗ್ಗೆ ಹೆಮ್ಮೆಯ ಮಾತು!

 

ಟ,  ನಟಿಯರು ಅಂದ್ಮೇಲೆ ಹೊಸ ಹೊಸ ಅವಕಾಶಗಳು ಸಿಗುತ್ತಲೇ ಇರುತ್ತವೆ. ಆದರೆ ಹೊಸ ಅವಕಾಶ ಸಿಕ್ಕ ತಕ್ಷಣ ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದವರನ್ನು ಹಾಗೂ ತಾಯ್ನಾಡು, ನುಡಿಯನ್ನೇ ಮರೆತು ಸಾಗುತ್ತಾರೆ. ಮುಂದೊಂದು ದಿನ ತಾವು ಇಂತಹ ಸ್ಥಳದಿಂದ ಬಂದಿದ್ದು, ಮೂಲ ಇದು ಎಂದು ಹೇಳಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಾರೆ.ಇಂತಹ ಪ್ರಕರಣ ಇತ್ತೀಚಿಗೆ ನಡೆದು, ಸಾಕಷ್ಟು ಟ್ರೋಲ್  ಕೂಡ ಆಗಿದೆ. ಈ ಮಧ್ಯೆ ಕನ್ನಡ ಚಿತ್ರರಂಗದ ಬಗ್ಗೆ ಈಗ ನಟಿಯೊಬ್ಬರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವರೇ ತೆಲುಗು ಇಂಡಸ್ಟ್ರೀಯಲ್ಲಿ ಸಖತ್ ಬ್ಯುಸಿ ನಟಿ ಆಗಿರುವ ಕನ್ನಡದ ನಟಿ ಶ್ರೀಲೀಲಾ.ಕನ್ನಡದ ನಟಿ ಶ್ರೀಲೀಲಾ ಕನ್ನಡ ಚಿತ್ರಗಳ ಬಗ್ಗೆ ಹೆಮ್ಮೆಯ ಮಾತುನಟಿ ಶ್ರೀಲೀಲಾ, ಕನ್ನಡದಲ್ಲಿ ಭರಾಟೆ ಮತ್ತು ಕಿಸ್ ಸಿನಿಮಾ ಮಾಡಿದ್ದಾರೆ. ಈಗ ಟಾಲಿವುಡ್‌ ನಲ್ಲಿ ಅವಕಾಶ ಗಿಟ್ಟಿಸಿಕೊಂಡು, ಟಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಬ್ಯುಸಿ ಆಗಿರುವ ನಟಿ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ನಟಿ ಶ್ರೀಲೀಲಾ.ಕನ್ನಡದ ಚಿತ್ರಗಳಲ್ಲಿ ನಟಿಸಿದ ನಂತರ ನಟಿ ಶ್ರೀಲೀಲಾ ಅವರಿಗೆ ಟಾಲಿವುಡ್ ನಲ್ಲಿ ಅವಕಾಶಗಳು ಬಂದವು. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಅವರು ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನಟಿ ಶ್ರೀಲೀಲಾ, ಟಾಲಿವುಡ್‌ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.ಪೆಳ್ಳಿ ಸಂದಡಿ ಸಿನಿಮಾದದಲ್ಲಿ ನಟ ಶ್ರೀಕಾಂತ್ ಪುತ್ರ ರೋಷನ್ ಜೊತೆ ನಟಿಸುವ ಮೂಲಕ ನಟಿ ಶ್ರೀಲೀಲಾ, ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈಗ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆದಿರುವ ನಟಿ ಶ್ರೀಲೀಲಾ, ಟಾಲಿವುಡ್ ಅಂಗಳಕ್ಕೆ ಪರಿಚಿತಳು. ಈಗ ನಟಿ ಶ್ರೀಲೀಲಾ ನಾಯಕಿಯಾಗಿ ನಟ ರವಿ ತೇಜ ನಟನೆಯ ಧಮಾಕಾ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ತೆರೆ ಕಾಣಲಿದೆ.ಸಿನಿಮಾ ಪ್ರಚಾರದಲ್ಲಿ ತೊಡಗಿರುವ ನಟಿ ಶ್ರೀಲೀಲಾಗೆ ಪ್ರಶ್ನೆ ಕೇಳಲಾಗಿತ್ತುಧಮಾಕಾ ಸಿನಿಮಾ ಪ್ರಚಾರದಲ್ಲಿ ತೊಡಗಿರುವ ನಟಿ ಶ್ರೀಲೀಲಾಗೆ ಕಾಂತಾರ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ನಟಿ ಶ್ರೀಲೀಲಾ, ಕನ್ನಡ ಸಿನಿಮಾಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನಾನು ಕಾಂತಾರ ಸಿನಿಮಾ ನೋಡಿದ್ದೇನೆ. ಚಿತ್ರ ಚೆನ್ನಾಗಿದೆ. ನಾನೂ ಸಹ ಕರ್ನಾಟಕದವಳೇ.ಕನ್ನಡ ಸಿನಿಮಾಗಳು ದೇಶದಾದ್ಯಂತ ಸದ್ದು ಮಾಡುತ್ತಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ಪೊಲೀಸರ ಬಹುದಿನದ ಬೇಡಿಕೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ

Fri Dec 23 , 2022
  ಬೆಂಗಳೂರು, ಡಿಸೆಂಬರ್ 21ಕರ್ನಾಟಕ ಪೊಲೀಸರ ಬಹುದಿನದ ಬೇಡಿಕೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಕೆಲವು ಷರತ್ತುಗಳೊಂದಿಗೆ ಅಂತರ ಜಿಲ್ಲಾ ವರ್ಗಾವಣೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಕರ್ನಾಟಕ ಪೊಲೀಸ್ ಸಿಬ್ಬಂದಿಗೆ ನಿರ್ಬಂಧಿತವಾಗಿದ್ದ ಅಂತರ ಜಿಲ್ಲಾ ವರ್ಗಾವಣೆಗೆ ಅನುಮೋದನೆ ನೀಡಲಾಯಿತುಕೇರಂ, ಚೆಸ್ ಆಟಗಳಿಗೆ ಪೊಲೀಸ್ ಅನುಮತಿ ಅನಗತ್ಯ; ಹೈಕೋರ್ಟ್ಪೊಲೀಸ್ ಇಲಾಖೆಗೆ ಸೇರಿ ಮೂರು ವರ್ಷ ಪೂರ್ಣಗೊಂಡವರು, ನೇಮಕಾತಿ […]

Advertisement

Wordpress Social Share Plugin powered by Ultimatelysocial