ಅ. ರಾ. ಮಿತ್ರ ಅವರು ನಾಡಿನ ಶ್ರೇಷ್ಠರ ಸಾಲಿನ ಹಾಸ್ಯಜ್ಞ.

 

ಅ. ರಾ. ಮಿತ್ರಅಕ್ಕಿ ಹೆಬ್ಬಾಳು ರಾಮಣ್ಣ ಮಿತ್ರ ಅವರು ನಾಡಿನ ಶ್ರೇಷ್ಠರ ಸಾಲಿನ ಹಾಸ್ಯಜ್ಞ, ಉಪನ್ಯಾಸಕ, ವಿದ್ವಾಂಸ, ಪ್ರಾಧ್ಯಾಪಕ, ಬರಹಗಾರ, ವಿಮರ್ಶಕ ಮತ್ತು ಸಜ್ಜನರಲ್ಲಿ ಸಜ್ಜನ ಮನೋಧರ್ಮದವರೆಂದು ಖ್ಯಾತರು.
ಅ. ರಾ. ಮಿತ್ರ 1935ರ ಫೆಬ್ರುವರಿ 25ರಂದು ಬೇಲೂರಿನಲ್ಲಿ ಜನಿಸಿದರು.“ಅ. ರಾ ಮಿತ್ರರು ನಮಗೆಲ್ಲಾ ತುಂಬಾ ನೆನಪಾಗುತ್ತಾರೆ. ಕಾರಣ ಅವರಿದ್ದ ಕಾಲೇಜಿಗೆ ನಾವು ಹೋಗ್ತಾ ಇದ್ವಿ. ಅವರನ್ನ ನೋಡಲಿಕ್ಕಲ್ಲ! ಅವರಿದ್ದ ಕಾಲೇಜು ಯಾವುದು ಗೊತ್ತಾಯ್ತಲ್ಲ. ಮಹಾರಾಣಿ ಕಾಲೇಜು!” ಹೀಗೆಲ್ಲಾ ಹೇಳಿದರೆ ಅ. ರಾ. ಮಿತ್ರರಿಗೆ ಕೋಪ ಬರೋಲ್ಲ. ಯಾಕೆಂದರೆ ಅವರು ತುಂಬು ಹಾಸ್ಯ ಪ್ರಿಯರು. ಅವರಿದ್ದಲೆಲ್ಲಾ ಹಾಸ್ಯದ ಹೊನಲು. ಅವರ ಮನೆಯಲ್ಲಿ ಕೂಡ. ಅದಕ್ಕೊಂದು ನಿದರ್ಶನ ಹೀಗಿದೆ. ಒಮ್ಮೆ ಮಿತ್ರರ ಮಿತ್ರ ಡಾ. ಎಚ್. ಕೆ. ರಂಗನಾಥ್ ಅವರ ಮನೆಗೆ ಫೋನ್ ಮಾಡಿದರು. ಫೋನ್ ತೆಗೆದವರು ಮಿತ್ರರ ಪತ್ನಿ ಲಲಿತಾ ಮಿತ್ರ. ರಂಗನಾಥ್ ಕೇಳಿದರು, “ಎಲ್ಲಮ್ಮಾ ಮಿತ್ರ?”.
ಸ್ನಾನ ಮಾಡ್ತಿದಾರೆ.ಓಹೋ, ಅವನು ಸ್ನಾನ ಬೇರೆ ಮಾಡ್ತಾನೇನು!ಇವತ್ತು ಭಾನುವಾರ ಅಲ್ವೇ!ಬೆಂಗಳೂರಿನ ಪ್ರಸಿದ್ಧ ಹಾಸ್ಯೋತ್ಸವ, ಕರ್ನಾಟಕದ ಆಕಾಶವಾಣಿ, ದೂರದರ್ಶನ, ಹಾಗೂ ದೇಶ ವಿದೇಶಗಳಲ್ಲಿನ ಸಹಸ್ರಾರು ವೇದಿಕೆಗಳಲ್ಲಿ ಚಿಂತನೆ, ಉಪನ್ಯಾಸಗಳು, ಕುಮಾರವ್ಯಾಸ ಭಾರತದ ವ್ಯಾಖ್ಯಾನ, ಹಾಸ್ಯೋತ್ಸವ ರಂಜನೆ, ಹರಟೆ ಇತ್ಯಾದಿಗಳ ಮೂಲಕ ಪ್ರೊಫೆಸರ್‌ ಅ. ರಾ, ಮಿತ್ರರು ಇಂದು ಮನೆ ಮನೆಮಾತಾಗಿದ್ದಾರೆ. ಮುಂದೆ ಮೂಡಿಬಂದ ಕುಮಾರವ್ಯಾಸ ಭಾರತದ ಸುಂದರ ವ್ಯಾಖ್ಯಾನ ಗ್ರಂಥ ‘ಕಥಾಮಿತ್ರ’ ಜನಮೆಚ್ಚುಗೆಯ ದಿಗ್ವಿಜಯ ಸಾಧಿಸಿದೆ.ಮಿತ್ರರ ‘ಛಂದೋಮಿತ್ರ’ದ ಸೊಗಸೇ ಸೊಗಸು. ಇದು ಮಿತ್ರರ ಪಾಂಡಿತ್ಯ ಮತ್ತು ಹಾಸ್ಯಪ್ರವೃತ್ತಿ ಎರಡೂ ಮಿಳಿತವಾಗಿರುವ ಒಂದು ವಿಶಿಷ್ಟ ಕೃತಿ. ಅದರ ಸ್ವಾರಸ್ಯ ಕೂಡಾ ಅವರಿಂದಲೇ ಕೇಳಿದರೆ ಚೆನ್ನು. “ಛಂದಸ್ಸು ಅರ್ಥವಾಗುವುದು ಕಷ್ಟ. ‘ಮಾತ್ರೆ ’ ಎಂದರೆ ಏನೆಂದು ತಿಳಿಯದ ಮಕ್ಕಳು ವೈದ್ಯರ ಮುಖ ನೋಡುತ್ತಾರೆ. ಅದನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥ ಮಾಡಿಸುವ ಪ್ರಯತ್ನ ‘ಛಂದೋಮಿತ್ರ’ದಲ್ಲಿ ಮಾಡಿದ್ದೇನೆ. ಕನ್ನಡ ಸಾಹಿತ್ಯದ ಎಲ್ಲಾ ಛಂದಸ್ಸುಗಳ ಕುರಿತ ವಿವರಣಾ ಪದ್ಯವನ್ನು ಆಯಾ ಛಂದಸ್ಸಿನಲ್ಲಿಯೇ ಬರೆಯಲಾಗಿದೆ. ತಿಳಿಹಾಸ್ಯದ ಮೂಲಕ, ಸರಳವಾಗಿ ತಿಳಿಸಿರುವುದರಿಂದ ಮನಸ್ಸಿಗೆ ಮುಟ್ಟುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಗ್ರೇನ್ ಗೆ ಅತ್ಯುತ್ತಮ ಮದ್ದು ತುಪ್ಪ.

Sun Feb 26 , 2023
ಮೈಗ್ರೇನ್ ತಲೆನೋವಿನ ಕಿರಿಕಿರಿ ಅನುಭವಿಸಿದವರಿಗೇ ಗೊತ್ತು. ಆ ನೋವು ಸಹಿಸಲಸಾಧ್ಯ. ಈ ನೋವಿನ ತೀವ್ರತೆಯನ್ನು ಕಡಿಮೆ ಮಾಡಬಲ್ಲ ಕೆಲವಷ್ಟು ಮನೆಮದ್ದುಗಳು ಇಲ್ಲಿವೆ.ಒತ್ತಡದಿಂದ ಸಾಧ್ಯವಾದಷ್ಟು ದೂರವಿರಿ. ಬದುಕಿನಲ್ಲಿ ಎದುರಾಗಿದ್ದೆಲ್ಲವನ್ನೂ ಸಲೀಸಾಗಿ ಎದುರಿಸುವುದನ್ನು ಕಲಿಯಿರಿ.ಮೈಗ್ರೇನ್ ಗೆ ತುಪ್ಪ ಅತ್ಯುತ್ತಮ ಮದ್ದು. ತುಪ್ಪವನ್ನು ಕರಗಿಸಿ 2 ಹನಿ ತುಪ್ಪವನ್ನು ಮೂಗಿನ ಹೊಳ್ಳೆಗೆ ಬಿಡಿ. ದಿನದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಸಾಕು ಮೈಗ್ರೇನ್ ಕಡಿಮೆಯಾಗುತ್ತದೆ.ತುಪ್ಪದಲ್ಲಿ ಕಡಿಮೆ ಕೊಬ್ಬು ಇದ್ದು ಬೇಗ ಜೀರ್ಣವಾಗುತ್ತದೆ. ದೇಹ ತೂಕ […]

Advertisement

Wordpress Social Share Plugin powered by Ultimatelysocial