ಎ ಎಸ್ ಜಿ ರೂಪಿಂದರ್‌ ಸಿಂಗ್‌ ಸೂರಿ ನಿಧನ {ವಕೀಲ}

ನವದೆಹಲಿ: ಖ್ಯಾತ ವಕೀಲ ಹಾಗೂ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ರೂಪಿಂದರ್ ಸಿಂಗ್ ಸೂರಿ ಅವರು ಸೋಮವಾರ ಬೆಳಿಗ್ಗೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಜೂನ್ 2020ರಲ್ಲಿ ಸೂರಿ ಅವರನ್ನು ಎಎಸ್‌ಜಿ ಆಗಿ ನೇಮಿಸಲಾಗಿತ್ತು.ಪತ್ನಿ ಗುರ್ವಿಂದರ್ ಸೂರಿ ಮತ್ತು ಪುತ್ರಿಯರಾದ ಸುರುಚಿ ಹಾಗೂ ಸಿಮರ್ ಅವರನ್ನು ಅಗಲಿದ್ದಾರೆ.ಸೂರಿ ಅವರು 2009ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ‘ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್’ ​​ಮತ್ತು ‘ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್‌ ಆನ್ ರೆಕಾರ್ಡ್ ಅಸೋಸಿಯೇಷನ್‌‍‍’ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಸೇರಿದಂತೆ ಹಲವು ಗಣ್ಯರು ಸೂರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಅಭಿವೃದ್ಧಿ ಚಕ್ರ ಓಡುತ್ತಲೇ ಇರಲಿ, ಒಟ್ಟಾಗಿ ದೇಶ ಮುನ್ನಡೆಸೋಣ ಎಂದು ಕರೆ ನೀಡಿದ ರಾಷ್ಟ್ರಪತಿ.

Mon Jan 31 , 2022
ದೆಹಲಿ: ಕೇಂದ್ರ ಬಜೆಟ್​ ಅಧಿವೇಶನ ಸೋಮವಾರ ಆರಂಭಗೊಂಡಿದೆ. ಸಂಸತ್ತಿನ ಉಭಯ ಸದನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ದೇಶದಲ್ಲಿ ಅಭಿವೃದ್ಧಿ ಚಕ್ರ ಓಡುತ್ತಿದೆ, ಇದು ನಿರಂತರವಾಗಿರಲಿ. ಒಗ್ಗಟ್ಟಿದ್ದರೆ ಗುರಿ ಸಾಧ್ಯ ಎಂದು ಪ್ರತಿಪಾದಿಸಿದರು.ವಿವಿಧ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಮಹತ್ವದ ನಿರ್ಣಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಷ್ಟ್ರಪತಿ, ದೇಶಕ್ಕೆ ಸಾತಂತ್ರ್ಯ ಬಂದು 75ನೇ ವರ್ಷದ ಸಂಭ್ರಮ. ನಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡಿ ಭಾರತದ ಹಕ್ಕುಗಳನ್ನು ಪಡೆಯಲು ಸಹಾಯ […]

Advertisement

Wordpress Social Share Plugin powered by Ultimatelysocial