ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುತ್ತದೆಯೇ?; ಹಾಗಾದರೆ ಹೀಗೆ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುತ್ತದೆಯೇ?; ಹಾಗಾದರೆ ಹೀಗೆ ಮಾಡಿ

ನವದೆಹಲಿ: ಇಂದಿನ ಕಾಲದಲ್ಲಿ ನಮ್ಮೆಲ್ಲರ ಬಹುತೇಕ ಕೆಲಸಗಳು ಸ್ಮಾರ್ಟ್‌ಫೋನ್‌(Android Smartphones)ನಲ್ಲಿಯೇ ಆಗುತ್ತವೆ. ಇಂದು ಕೈಯಲ್ಲಿ ಸ್ಮಾರ್ಟ್‌ಫೋನ್ ಇಲ್ಲದ ವ್ಯಕ್ತಿಯನ್ನು ಹುಡುಕುವುದು ಕಷ್ಟ. ಸ್ಮಾರ್ಟ್‌ಫೋನ್ ಬಳಸುವಾಗ ನಾವು ವಿಡಿಯೋ, ಫೋಟೋ ಸೇರಿದಂತೆ ಅನೇಕವುಗಳನ್ನು ಡೌನ್‌ಲೋಡ್ ಮಾಡುತ್ತೇವೆ.

ಫೋನ್ ಸ್ಟೋರೇಜ್ ಫುಲ್ ಆಗುತ್ತಿದ್ದಂತೆಯೇ ಅದು ಹ್ಯಾಂಗ್ ಆಗಲು ಶುರುವಾಗುತ್ತದೆ. ಹೆಚ್ಚು ಹೆಚ್ಚು ಬಳಸಿದಾಗಲೂ ಕೂಡ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗಿ ನಿಮಗೆ ದೊಡ್ಡ ತಲೆನೋವು ತರುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಕೂಡ ಪದೇ ಪದೇ ಹ್ಯಾಂಗ್(Smartphone Hang) ಆಗುತ್ತಿದ್ದರೆ ಈ ಸರಳ ಸಲಹೆಗಳನ್ನು ಪಾಲಿಸಿ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ನ ವೇಗ ಸೂಪರ್ ಫಾಸ್ಟ್ ಆಗಲಿದೆ.

 

ಸ್ಮಾರ್ಟ್‌ಫೋನ್ ಹ್ಯಾಂಗ್ ಆಗಲು ಕಾರಣ

ನಿಮ್ಮ ಸ್ಮಾರ್ಟ್‌ಫೋನ್ ಕೆಲವು ದಿನಗಳ ಬಳಿಕ ಏಕೆ ಹ್ಯಾಂಗ್ ಆಗಲು ಪ್ರಾರಂಭಿಸುತ್ತದೆ ಅಥವಾ ಅದರ ವೇಗ ಏಕೆ ಕಡಿಮೆಯಾಗುತ್ತದೆ ಎಂಬುದರ ಬಗ್ಗೆ ನಿಮಗೆ ಆಶ್ಚರ್ಯವಾಗುತ್ತದೆ ಅಲ್ಲವೇ..? ಇದರ ಹಿಂದಿನ ಕಾರಣಗಳು ಯಾವುವು ಎಂದು ನಾವು ನಿಮಗೆ ತಿಳಿಸುತ್ತೇವೆ. ನಾವು ಪ್ರತಿದಿನ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚುಹೊತ್ತು ಬಳಸುತ್ತೇವೆ. ಈ ಪೈಕಿ ನಾವು ಹೆಚ್ಚಾಗಿ ಸರ್ಚ್ ಇಂಜಿನ್‌ಗಳನ್ನು ಬಳಸುತ್ತೇವೆ.

ನಮ್ಮ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಾವು Android ಸ್ಮಾರ್ಟ್‌ಫೋನ್‌ಗಳಲ್ಲಿ Google Chrome ಮತ್ತು Mozilla Firefox ಗಳಂತಹ ಬ್ರೌಸರ್‌ಗಳನ್ನು ಬಳಸುತ್ತೇವೆ. ಈ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರಿಗೆ ಹುಡುಕಾಟ ಸುಲಭಗೊಳಿಸಲು ಡೇಟಾವನ್ನು ಉಳಿಸುತ್ತದೆ. ಇವುಗಳನ್ನು Cookies and Cacheನಂತಹ ಫೋನ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಇದರಿಂದಾಗಿ ಫೋನ್ ನಿಧಾನವಾಗುತ್ತದೆ.

 

Google Chromeನಿಂದ Cookies and Cache ಅಳಿಸುವುದು ಹೇಗೆ?

ನೀವು Google Chrome ಬಳಸಿದರೆ ಅಲ್ಲಿಂದ ಈ Cookies and Cache ಅಳಿಸಲು ಮೊದಲು Google Chrome ಒಪನ್ ಮಾಡಿರಿ. ಮೇಲಿನ ಬಲಭಾಗದಲ್ಲಿ ನೀವು 3 ಚುಕ್ಕೆಗಳನ್ನು ಕಾಣುತ್ತಿರಿ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ‘History’ ಆಯ್ಕೆಗಳಿಗೆ ಹೋಗಿ. ನೀವು History ತೆರೆದ ತಕ್ಷಣ ಮೇಲ್ಭಾಗದಲ್ಲಿ ‘Clear Browsing Data’ ಆಯ್ಕೆಯನ್ನು ಕಾಣಬಹುದು. ಅದನ್ನು ಆಯ್ಕೆ ಮಾಡಿ ಮತ್ತು ನಂತರ ‘Cookies and Site Data’ ಮತ್ತು ‘Cached Images and Files’ ಆಯ್ಕೆಮಾಡಿ. ನಂತರ ಕೆಳಗಿನ ‘Clear Data’ ಕ್ಲಿಕ್ ಮಾಡಿ. ನೀವು ಬಯಸಿದರೆ ಎಷ್ಟು ಸಮಯದವರೆಗೆ Cookies and Cacheಗಳನ್ನು ಅಳಿಸಲು ಬಯಸುತ್ತೀರಿ ಎಂಬುದನ್ನು ಸಹ ಆಯ್ಕೆ ಮಾಡಬಹುದು.

 

Mozilla Firefoxನಿಂದ Cookies and Cache ತೆಗೆದುಹಾಕುವುದು ಹೇಗೆ?

ನೀವು Mozilla Firefox ಬಳಸುತ್ತಿದ್ದರೆ ಅಲ್ಲಿಂದ Cookies and Cacheಗಳನ್ನು ತೆಗೆದುಹಾಕುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ. ಮೊದಲನೆಯದಾಗಿ ನಿಮ್ಮ Android ಸ್ಮಾರ್ಟ್‌ಫೋನ್‌ನಲ್ಲಿ Mozilla Firefox ಅಪ್ಲಿಕೇಶನ್ ತೆರೆಯಿರಿ. ನಂತರ ವಿಳಾಸ ಪಟ್ಟಿಯ ಪಕ್ಕದಲ್ಲಿರುವ ‘More’ ಬಟನ್ ಕ್ಲಿಕ್ ಮಾಡಿ. ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ‘Delete browsing data’, ‘Cookies and site data’ ಮತ್ತು ‘Cached images and files’ ಆಯ್ಕೆ ಮಾಡಿ ಮತ್ತು ಅವುಗಳನ್ನು ತೆರವುಗೊಳಿಸಲು Command ನೀಡಿ. ಈ ರೀತಿ ಮಾಡುವ ಮೂಲಕ ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ವೇಗವನ್ನು ಹೆಚ್ಚಿಸಬಹುದು ಮತ್ತು ಫೋನ್ ಹ್ಯಾಂಗ್ ಆಗುವ ಸಮಸ್ಯೆಯನ್ನು ಹೋಗಲಾಡಿಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Methods to Improve Couple Relations

Tue Dec 28 , 2021
In a relationship, husband and wife relationships should be enlightening, supportive, and https://brides-russia.org/guides/russian-dating-scams/ mutually beneficial. There are many ways to improve husband and wife contact. One of the important solutions to improve these types of relationships is to develop a respect for each other peoples opinions. A relationship http://www.sercosa.cl/so-why-internet-birdes-to-be-are-well-liked/ could […]

Advertisement

Wordpress Social Share Plugin powered by Ultimatelysocial