ನಡುರಾತ್ರಿ ಬೆತ್ತಲೆಯಾಗಿ ಅಲೆಯುತ್ತಾ ಮನೆಬಾಗಿಲು ಬಡಿದ ಯುವತಿ:

ತ್ತರ ಪ್ರದೇಶದ ರಾಂಪುರದ ಮಿಲಾಕ್ ಗ್ರಾಮದಲ್ಲಿ ಯುವತಿಯೊಬ್ಬಳು ಮಾಡಿದ ಕೆಲಸ ಸ್ಥಳೀಯರನ್ನು ತಲ್ಲಣಗೊಳಿಸುತ್ತಿದೆ. ರಾತ್ರಿಯಾಯಿತೆಂದರೆ ಸಾಕು ಮಧ್ಯರಾತ್ರಿಯಲ್ಲಿ ನಗ್ನವಾಗಿ ಬೀದಿ ಬೀದಿಗಳಲ್ಲಿ ಓಡಾಡುತ್ತಾ ಮನೆಯ ಬಾಗಿಲುಗಳನ್ನು ಬಡಿಯುವುದು.

ಕಾಲಿಂಗ್ ಬೆಲ್ ಬಾರಿಸುತ್ತಾ ಭಯದ ವಾತಾವರಣ ಉಂಟುಮಾಡುತ್ತಿದ್ದಾಳೆ.

ಯುವತಿಯ ಈ ಕೃತ್ಯಕ್ಕೆ ಸ್ಥಳೀಯರು ಭಯಭೀತರಾಗಿದ್ದಾರೆ. ಇವಳನ್ನು ಕಂಡರೆ ಕೆಲವರಿಗೆ ದೆವ್ವ ಎಂಬ ಭಯ. ಇದೇ ವೇಳೆ ಆಕೆ ವಿವಸ್ತ್ರಳಾಗಿ ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಇದೀಗ ವಿಡಿಯೋ ವೈರಲ್ ಆಗಿದೆ. ಹೆಣ್ಣು ಮಕ್ಕಳು ತಡರಾತ್ರಿಯಾದರೂ ಮನೆಯಿಂದ ಹೊರಗೆ ಬರಲು ಹೆದರುತ್ತಾರೆ. ಹೀಗಿರುವಾಗ ಮಧ್ಯರಾತ್ರಿಯಲ್ಲಿ ನಿರ್ಜನ ಬೀದಿಗಳಲ್ಲಿ ತಿರುಗಿ ಎಲ್ಲರಲ್ಲೂ ಆತಂಕ ಸೃಷ್ಟಿ ಮಾಡಿದ್ದಾಳೆ.

ವಿಡಿಯೋದಲ್ಲಿ ದಾಖಲಾಗಿರುವ ಬೆಚ್ಚಿಬೀಳಿಸುವ ದೃಶ್ಯಗಳನ್ನು ಕಂಡು ಸ್ಥಳೀಯರು ಕಣ್ಣೀರು ಹಾಕಿದ್ದಾರೆ. ಯುವತಿ ಯಾರು? ಯಾಕೆ ಆ ರೀತಿ ಮಾಡುತ್ತಿದ್ದಾರೆ? ಎಂಬುದು ನಿಗೂಢವಾಗಿ ಪರಿಣಮಿಸಿದೆ. ವಿಡಿಯೋದಲ್ಲಿರುವ ದಿನಾಂಕದ ಪ್ರಕಾರ ಘಟನೆ ಜನವರಿ 30ರಂದು ನಡೆದಿರುವಂತೆ ತೋರುತ್ತದೆ. ಸ್ಥಳೀಯ ಮಹಿಳೆಯೊಬ್ಬರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಅಪರಿಚಿತ ಯುವತಿಯ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ಆಕೆ ಸುಮಾರು 25 ವರ್ಷ ವಯಸ್ಸಿನವಳಾಗಿದ್ದು, ಬೆತ್ತಲೆಯಾಗಿದ್ದಳು ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಮನೆ ಮುಂದೆ ಬಂದು ಬೆಲ್ ಹೊಡೆದು 5 ನಿಮಿಷ ಮನೆ ಮುಂದೆ ನಿಂತಳು ಎಂದು ತಿಳಿಸಿದ್ದಾರೆ. ಆ ಬಳಿಕ ಅಲ್ಲಿಂದ ಹೊರಟು ಹೋದಳು ಅದೇ ವೇಳೆಗೆ ಇಬ್ಬರು ಬೈಕ್‌ ಸವಾರರು ಆಕೆಯನ್ನು ಹಿಂಬಾಲಿಸಿದರು. ಪೊಲೀಸ್ ಗಸ್ತು ವಾಹನವು ಅವರನ್ನು ಹಿಂಬಾಲಿಸಿತು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳೀಯರು ಆತಂಕಗೊಂಡಿದ್ದರಿಂದ ಪೊಲೀಸರು ಮಧ್ಯ ಪ್ರವೇಶಿಸಿದರು. ಯಾರೂ ಭಯಪಡುವ ಅಗತ್ಯವಿಲ್ಲ ತನಿಖೆ ಕೈಗೆತ್ತಿಕೊಂಡಿದ್ದೇವೆ. ರಸ್ತೆಯಲ್ಲಿ ಬೆತ್ತಲೆಯಾಗಿ ನಡೆದುಕೊಂಡು ಮನೆ ಬಾಗಿಲು ಬಡಿಯುವುದರ ಹಿಂದೆ ಆಕೆಯ ಉದ್ದೇಶ ಏನೆಂಬುದು ಅರ್ಥವಾಗುತ್ತಿಲ್ಲ ಎಂದರು. ಆಕೆಯ ಸಂಪೂರ್ಣ ವಿವರಗಳನ್ನು ತಿಳಿಯಲು ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳು ಅದನ್ನು ಪರಿಶೀಲಿಸುತ್ತಿದ್ದೇವೆ ಎಂದರು. ಯಾರಾದರೂ ಅವಳನ್ನು ಕಂಡರೆ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಲು ನಿವಾಸಿಗಳಿಗೆ ಸೂಚಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋಲಾರಕ್ಕೆ‌ ಆಗಮಿಸಿದ ಪ್ರಜಾಧ್ವನಿ ಯಾತ್ರೆ ಯ ದಂಡು.

Fri Feb 3 , 2023
ಕೋಲಾರಕ್ಕೆ‌ ಆಗಮಿಸಿದ ಪ್ರಜಾಧ್ವನಿ ಯಾತ್ರೆ ಯ ದಂಡು. ಕೋಲಾರದಲ್ಲಿ ಕೋಲಾರ ಮಾಜಿ ಸಂಸದ ಕೆಹೆಚ್ ಮುನಿಯಪ್ಪರಿಂದ ಸ್ವಾಗತ. ಕೋಲಾರ ನಗರದ ಪವನ್ ಕಾಲೇಜು ಬಳಿ ಡಿಕೆ ಶಿವಕುಮಾರ್ ಹಾರ ಹಾಕಿ‌ ಸ್ವಾಗತ ಕೊರುದ ಕೆ.ಹೆಚ್ ಮುನಿಯಪ್ಪ ಬಣ. ಜಿಲ್ಲೆಯಲ್ಲಿ ಕಾಂಗ್ರೆಸ್ ಬಂಡಾಯದ ಬಗ್ಗೆ ಡಿಕೆ ಶಿವಕುಮಾರ್ ಗೆ ಮನವರಿಗೆ‌ಮಾಡಿದ ಕಾಂಗ್ರೆಸ್ ಕಾರ್ಯಕರ್ತರು. ಮುಳಬಾಗಿಲು ಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಡಿಕೆ ಶಿವಕುಮಾರ್ ಗೆ ಬಂಡಾಯದ‌ ಬಿಸಿ. ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ […]

Advertisement

Wordpress Social Share Plugin powered by Ultimatelysocial