ಕೇವಲ 20 ಲಕ್ಷ ರೂ ಮೂಲ ಬೆಲೆ ಹೊಂದಿದ್ದ ಆವೇಶ್ ಖಾನ್ ಹರಾಜಿನಲ್ಲಿ ಉತ್ತಮ ಮೊತ್ತವನ್ನೇ ಪಡೆದರು.

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ನ ಮೆಗಾ ಹರಾಜು ಪ್ರಕ್ರಿಯೆಯ ಮೊದಲ ದಿನದ ಹರಾಜು ಮುಗಿದಿದೆ. ಹಲವು ಅಚ್ಚರಿಗಳಿಗೆ ಕಾರಣವಾದ ಮೊದಲ ದಿನದ ಹರಾಜಿನಲ್ಲಿ ಆವೇಶ್ ಖಾನ್ ಅವರು ಬರೋಬ್ಬರಿ ಹತ್ತು ಕೋಟಿ ರೂ ಬಾಚಿಕೊಂಡರು.ಕಳೆದ ವರ್ಷದ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡಿದ್ದ ಆವೇಶ್ ಖಾನ್ ಕೂಟದಲ್ಲಿ ಎರಡನೇ ಅತೀ ಹೆಚ್ಚು ವಿಕೆಟ್ ಕಿತ್ತ ಸಾಧನೆ ಮಾಡಿದ್ದರು.ಆದರೆ ಆವೇಶ್ ರನ್ನು ಡೆಲ್ಲಿ ಕ್ಯಾಪಿಟಲ್ಸ್ ಹರಾಜಿಗೆ ಬಿಟ್ಟಿದ್ದರಿಂದ ಭಾರೀ ಬೇಡಿಕೆ ಪಡೆದರು.ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆವೇಶ್ ಖಾನ್ ರನ್ನು ಹತ್ತು ಕೋಟಿ ರೂ ಬೆಲೆಗೆ ಖರೀದಿ ಮಾಡಿತು. ಕೇವಲ 20 ಲಕ್ಷ ರೂ ಮೂಲ ಬೆಲೆ ಹೊಂದಿದ್ದ ಆವೇಶ್ ಖಾನ್ ಹರಾಜಿನಲ್ಲಿ ಉತ್ತಮ ಮೊತ್ತವನ್ನೇ ಪಡೆದರು.ಇದರೊಂದಿಗೆ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಪಡೆದ ಭಾರತೀಯ ಅನ್ ಕ್ಯಾಪ್ಡ್ ಆಟಗಾರ ( ಟೀಂ ಇಂಡಿಯಾವನ್ನು ಪ್ರತಿನಿಧಿಸದ) ಎಂಬ ಸಾಧನೆಗೆ ಆವೇಶ್ ಖಾನ್ ಪಾತ್ರರಾದರು. ಈ ಮೊದಲು ಕೃಷ್ಣಪ್ಪ ಗೌತಮ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು 9.25 ಕೋಟಿ ರೂ ಗೆ ಖರೀದಿ ಮಾಡಿತ್ತು.ಮತ್ತೊಬ್ಬ ಅನ್ ಕ್ಯಾಪ್ಡ್ ಆಟಗಾರ ಶಾರುಖ್ ಖಾನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 9 ಕೋಟಿ ರೂ ಗೆ ಖರೀದಿ ಮಾಡಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರೋಜಿನಿ ನಾಯ್ಡು ಅವರ ಜನ್ಮದಿನದಂದು ರಾಷ್ಟ್ರೀಯ ಮಹಿಳಾ ದಿನವನ್ನು ಏಕೆ ಆಚರಿಸಲಾಗುತ್ತದೆ?

Sun Feb 13 , 2022
  ರಾಷ್ಟ್ರೀಯ ಮಹಿಳಾ ದಿನ 2022: ಕ್ರಾಂತಿಯು ಒಂದು ಆಲೋಚನೆಯೊಂದಿಗೆ ಪ್ರಾರಂಭವಾಗುತ್ತದೆ, ಅದು ರಾಷ್ಟ್ರವನ್ನು ರೂಪಿಸುವ ಶಕ್ತಿಯನ್ನು ಹೊಂದಿರುವ ಕ್ರಿಯೆಗಳಾಗಿ ರೂಪಾಂತರಗೊಳ್ಳುತ್ತದೆ. ಶಕ್ತಿಯಿಂದ ಕಲೆಯಿಂದ ಉಪದೇಶದವರೆಗೆ ಎಲ್ಲಾ ರೂಪಗಳಲ್ಲಿ ಜನರು ಕೊಡುಗೆ ನೀಡಿದ ಭಾರತಕ್ಕೂ ಇದೇ ರೀತಿಯ ಏನಾದರೂ ಸಂಭವಿಸಿದೆ. ಭಾರತದ ಸ್ವಾತಂತ್ರ್ಯ ಆಂದೋಲನವು ಕೆಲವು ವ್ಯಕ್ತಿಗಳನ್ನು ಕಂಡಿತು, ಅದು ಮರ್ತ್ಯವಾಗಿ ಹುಟ್ಟಬಹುದು, ಆದರೆ ಅವರ ಕಾರ್ಯಗಳು ದಶಕಗಳ ನಂತರವೂ ಅವರನ್ನು ಜೀವಂತವಾಗಿರಿಸಿದೆ. ತನ್ನ ಮಾತಿನ ಶಕ್ತಿಯಿಂದ ದೇಶದ ಸುವರ್ಣ […]

Advertisement

Wordpress Social Share Plugin powered by Ultimatelysocial