‘ಅಂಬಿ’ ಹುಟ್ಟು ಹಬ್ಬಕ್ಕೆ ‘ಅಭಿಷೇಕ್ ಅಂಬರೀಶ್’ 3ನೇ ಸಿನಿಮಾ ಲಾಂಚ್!

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಟ ಅಭಿಷೇಕ್ ಅಂಬರೀಶ್ ಸಿನಿಮಾ ರಂಗದಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದು ಬಹು ಸಮಯವಾಗಿದೆ. ಈಗಾಗಲೇ ‌ಮೊದಲ ಸಿನಿಮಾದ ಮೂಲಕ ಬೆಳ್ಳಿ ಪರದೆ ಮೇಲೆ ರಾರಾಜಿಸಿದ್ದಾರೆ. ‘ಅಮರ್’ ಸಿನಿಮಾದೊಂದಿಗೆ ಅಭಿಷೇಕ್ ಒಂದು ಮಟ್ಟಿಗೆ ಅಭಿನಯದ ಮೂಲಕ ಜನ ಮನ ಗೆದ್ದಿದ್ದಾರೆ.

‘ಅಮರ್’ ಸಿನಿಮಾದ ಬಳಿಕ ಈಗ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಸದ್ಯ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ನಿರ್ದೇಶಕ ಸೂರಿ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳುತ್ತಾ ಇದ್ದಾರೆ.

ಈ ನಡುವೆ ಅಭಿಷೇಕ್ ಹೊಸ ಸಿನಿಮಾದ ಮೂಲಕ ಸುದ್ದಿ ಆಗ್ತಿದ್ದಾರೆ. ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ ಇನ್ನು ಶೂಟಿಂಗ್ ಹಂತದಲ್ಲಿ ಇದೆ. ಆದರೆ ಅದಾಗಲೆ ಮುಂದಿನ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. ಇದೀಗ ಸಿನಿಮಾದ ಬಗ್ಗೆ ಅಧಿಕೃತ ಮಾಹಿತಿ ಹೊರ ಬಂದಿದೆ ಮುಂದೆ ಓದಿ…

ಅಭಿಷೇಕ್ ಅಂಬರೀಶ್ 3ನೇ ಸಿನಿಮಾ!
ಅಭಿಷೇಕ್ ಅಂಬರೀಶ್ ಮುಂದಿನ ಸಿನಿಮಾದ ಬಗ್ಗೆ ಕೆಲವು ದಿನಗಳಿಂದ ಸುದ್ದಿ ಹರಿದಾಡುತ್ತಿದೆ. ಅಭಿಷೇಕ್ ಮೂರನೇ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಈ ಸುದ್ದಿ ಅಧಿಕೃತವಾಗಿದೆ. ಅಭಿಷೇಕ್ ಅಂಬರೀಶ್ ಫಸ್ಟ್ ಲುಕ್ ರಿಲೀಸ್‌ಗೆ ತಯಾರಿ ನಡೆದಿದೆ. ಈ ವಿಚಾರವನ್ನು ಸಿನಿಮಾ ನಿರ್ಮಾಣ ಸಂಸ್ಥೆ RRR ಮೋಷನ್ ಪಿಕ್ಚರ್ ಪೋಸ್ಟರ್ ಹಂಚಿಕೊಳ್ಳಯವ ಮೂಲಕ ಖಚಿತಪಡಿಸಿದೆ.

ಅಂಬರೀಶ್ ಹುಟ್ಟುಹಬ್ಬಕ್ಕೆ ಕಾಳಿ ಫಸ್ಟ್ ಲುಕ್!

ಮೇ 29ರಂದು ಅಭಿಷೇಕ್ ಅಂಬರೀಶ್ 3ನೇ ಸಿನಿಮಾ ಲಾಂಚ್ ಆಗಲಿದೆ. ಮೇ 29 ನಟ ಅಂಬರೀಶ್ ಹುಟ್ಟುಹಬ್ಬ ಹಾಗಾಗಿ ಅಂದೆ ಸಿನಿಮಾದ ಪೋಸ್ಟರ್ ಲಾಂಚ್ ಮಾಡಲು ಚಿತ್ರತಂಡ ತಯಾರಾಗಿದೆ. ಇನ್ನು ಚಿತ್ರಕ್ಕೆ ಹೆಬ್ಬುಲಿ ಕೃಷ್ಣ ನಿರ್ದೇಶಕ ಇದೆ. ಅವರದ್ದೇ ಕಥೆ ಕೂಡ ಇದೆ. ಇನ್ನು ಈ ಚಿತ್ರದ ಕಥೆ ನೈಜ ಘಟನೆ ಆಧರಿಸಿದೆ ಎನ್ನಲಾಗಿದೆ.

ಅಭಿಷೇಕ್ ಮುಂದಿನ ಚಿತ್ರದ ಟೈಟಲ್ ‘ಕಾಳಿ’!

ಅಭಿಷೇಕ್ ಅಂಬರೀಶ್ ಮುಂದಿನ ಸಿನಿಮಾ ‘ಕಾಳಿ’. ಈ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ಅಭಿಷೇಕ್ ಕಾಣಿಸಿಕೊಳ್ಳುತ್ತಾ ಇದ್ದಾರೆ. ಇದು ಅಪ್ಪಟ್ಟ ದೇಶಿಯ ಪ್ರೇಮ ಕಥೆ. ಹಾಗಂತ ಈ ಚಿತ್ರ ಕೇವಲ ಲವ್ ಸ್ಟೋರಿ ಅಲ್ಲ, ಪಕ್ಕಾ ಕಮರ್ಶಿಯಲ್ ಸಿನಿಮಾ ಅಂತೆ. ಚಿತ್ರಕ್ಕೆ ‘ಕಾಳಿ’ ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರಕ್ಕೆ ನಿರ್ದೇಶಕ ಹೆಬ್ಬುಲಿ ಕೃಷ್ಣ ನಿರ್ದೇಶನವಿದೆ. ಈದು ಅಭಿಷೇಕ್ 3ನೇ ಸಿನಿಮಾ.

1991ರಲ್ಲಿ ನಡೆದ ನೈಜ ಪ್ರೇಮ ಕಥೆ!

ಈ ಸಿನಿಮಾ ನಿಜವಾಗಿಯೂ ನಡೆದ ಕಥೆಯಂತೆ. “1991ರ ಸಮಯದಲ್ಲಿ ಕಾವೇರಿ ಗಲಾಟೆ ಬಹಳ ಜೋರಾಗಿ ನಡೆಯುತ್ತಿತ್ತು. ಈ ಹೊತ್ತಿನಲ್ಲಿ ಕೊಳ್ಳೇಗಾಲ, ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ನಡೆದ ಪ್ರೇಮಕಥೆ ಇದು. ಕಾವೇರಿ ಗಲಾಟೆ ಇಲ್ಲಿ ಹಿನ್ನೆಲೆ ಮಾತ್ರ. ನಾಯಕನಿಗೂ.. ನಾಯಕಿಗೂ ಸಂಬಂಧ ಇರಲ್ಲ. ಆದರೂ ಅವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅವರು ಆ ತೊಂದರೆಗೆ ಸಿಕ್ಕಿದ್ದು ಹೇಗೆ ಅನ್ನೋದನ್ನೇ ಸಿನಿಮಾದಲ್ಲಿ ತೋರಿಸುತ್ತೇವೆ.” ಎಂದಿದ್ದಾರೆ ನಿರ್ದೇಶಕ ಕೃಷ್ಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಿಳೆಯರ ಋತುಸ್ರಾವ ನೈರ್ಮಲ್ಯ ನಿರ್ವಹಣೆ ದಿನ ಆಚರಣೆ!

Sat May 28 , 2022
ಕಾಗವಾಡ ಪಟ್ಟಣದ ಮಲ್ಲಿಕಾರ್ಜುನ ಮಹಾವಿದ್ಯಾಲಯದಲ್ಲಿ ಮೇ 28 ನ್ನು ಋತುಸ್ರಾವ ನೈರ್ಮಲ್ಯ ನಿರ್ವಹಣೆ ದಿನ ಆಚರಿಸಲಾಯಿತು.  ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಗಂಗಾ ಲೋಕಾಪುರ ,ಮಹಿಳೆಯರು ಋತುಮತಿಯಾದಾಗ ಎಲ್ಲ ಮಹಿಳೆಯರು ನಾಚಿಕೆಪಟ್ಟುಕೊಳ್ಳಬಾರದು.  ಯಾಕೆಂದರೆ ಇದೊಂದು ನೈಸರ್ಗಿಕವಾಗಿ ಆಗುವಂತಹ ಒಂದು ಜೈವಿಕ ಕ್ರೀಯೆ . ಇದರಲ್ಲಿ ನಾಚಿಕೆ ಪಡುವಂಥದ್ದು ಎನೂ ಅಲ್ಲ ಹಾಗೂ ಗುಪ್ತ ವಿಷಯವೂ ಅಲ್ಲ.  ಹೀಗಾಗಿ  ಪಾಲಕರು ಮಹಿಳೆಯರಿಗೆ ಇರುವ ಮೂಢನಂಬಿಕೆಗಳನ್ನ ಹೋಗಲಾಡಿಸಿ […]

Advertisement

Wordpress Social Share Plugin powered by Ultimatelysocial