ಮುಂಬೈ-ಗೋವಾ ಹೆದ್ದಾರಿಯಲ್ಲಿ ಭೀಕರ ಅಪಘಾತ.

 

ಮುಂಬೈ, ಜನವರಿ, 19: ಗುರುವಾರ ಬೆಳಗ್ಗೆ ಮುಂಬೈ – ಗೋವಾ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಕಾರೊಂದು ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಂದು ಮಗು ಮತ್ತು ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.

ಪೊಲೀಸರ ಪ್ರಕಾರ, ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ರಾಯಗಢ ಜಿಲ್ಲೆಯ ರೆಪೋಲಿ ಪ್ರದೇಶದಲ್ಲಿ ಗೋವಾ-ಮುಂಬೈ ಹೆದ್ದಾರಿಯ ಮಂಗಾವ್ ಬಳಿ ಅಪಘಾತ ಸಂಭವಿಸಿದೆ.

ಮೃತರಲ್ಲಿ ಐವರು ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಹಿನ್ನೆಲೆ ನಿಂತಿದ್ದ ಹೆದ್ದಾರಿಯಲ್ಲಿ ಸಂಚಾರ ಪುನರಾರಂಭಗೊಂಡಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತಕ್ಕೆ ಈಡಾಗಿರುವ ಟ್ರಕ್ ಮುಂಬೈಗೆ ತೆರಳುತ್ತಿದ್ದು, ಕಾರು ರತ್ನಗಿರಿ ಜಿಲ್ಲೆಯ ಗುಹಾಗರ್‌ಗೆ ತೆರಳುತ್ತಿತ್ತು. ಕಾರಿನ ಅವಶೇಷಗಳು ಭಾರೀ ಪ್ರಮಾಣದಲ್ಲಿ ಹಾಳಾಗಿದ್ದು, ಇದನ್ನು ಗಮನಿಸಿದರೇ ಅಪಘಾತದ ತೀವ್ರತೆ ಅರ್ಥವಾಗುತ್ತದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇರಳದಲ್ಲಿನ ಇಸ್ಲಾಮಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದೂ ಧರ್ಮ ಗ್ರಂಥ ಕಲಿಕೆ .

Thu Jan 19 , 2023
ತ್ರಿಶೂರ (ಕೇರಳ) – ಕಳೆದ ೭ ವರ್ಷಗಳಿಂದ ಜಿಲ್ಲೆಯ ‘ಮಲಿಕ್ ದಿನಾರ ಇಸ್ಲಾಮಿ ಕಾಂಪ್ಲೆಕ್ಸ್’ನಲ್ಲಿ ಸಂಸ್ಕೃತದ ಶ್ಲೋಕ ಕಲಿಸಲಾಗುತ್ತಿದೆ. ಈಗ ಇಲ್ಲಿ ಕೆಲವು ಹಿಂದೂ ಗ್ರಂಥಗಳನ್ನೂ ಕೂಡ ಸೇರಿಸಿದ್ದಾರೆ. ಇದರಲ್ಲಿ ಶ್ರೀಮದ್ ಭಗವದ್ಗೀತೆಯ ಕೂಡ ಇದೆ. ವಿದ್ಯಾರ್ಥಿಗಳಿಗೆ ಬೇರೆ ಧರ್ಮದ ಬಗ್ಗೆ ಜಾಗೃತಗೊಳಿಸುವ ಉದ್ದೇಶದಿಂದ ಈ ಪ್ರಾಚೀನ ಭಾಷೆಯಲ್ಲಿ ಶಿಕ್ಷಣ ನೀಡುವ ನಿರ್ಣಯ ಕೈಗೊಂಡಿದೆ ಎಂಬುದು ತಿಳಿದು ಬಂದಿದೆ. ಈ ಹೊಸ ಪಠ್ಯಕ್ರಮ ಈ ವರ್ಷ ಜೂನ್ ತಿಂಗಳಿಂದ ಅಂದರೆ ಹೊಸ […]

Advertisement

Wordpress Social Share Plugin powered by Ultimatelysocial