CRICKET:ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದ ರಾಸ್ ಟೇಲರ್;

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ಹಿರಿಯ ಸದಸ್ಯ ರಾಸ್ ಟೇಲರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಈ ಬೇಸಿಗೆಯಲ್ಲಿ ತವರು ನೆಲದಲ್ಲಿ ನಡೆಯಲಿರುವ ಮೂರು ಸರಣಿಗಳ ಬಳಿಕ ತಾನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾಗುವುದಾಗಿ ಟೇಲರ್ ಹೇಳಿದ್ದಾರೆ.

ಶನಿವಾರದಿಂದ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇದೇ ತನ್ನ ಅಂತಿಮ ಟೆಸ್ಟ್ ಸರಣಿಯಾಗಲಿದೆ ಎಂದು ರಾಸ್ ಹೇಳಿದ್ದಾರೆ. ನಂತರ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.

‘ಇದೊಂದು ಅದ್ಭುತ ಪ್ರಯಾಣವಾಗಿದೆ ಮತ್ತು ನಾನು ಇರುವವರೆಗೂ ನನ್ನ ದೇಶವನ್ನು ಪ್ರತಿನಿಧಿಸಿರುವುದು ನಂಬಲಾಗದಷ್ಟು ಅದೃಷ್ಟ ಎಂದು ಭಾವಿಸುತ್ತೇನೆ. ಆಟದ ಕೆಲವು ಶ್ರೇಷ್ಠರ ಜೊತೆಗೆ ಮತ್ತು ವಿರುದ್ಧವಾಗಿ ಆಡಲು ಮತ್ತು ದಾರಿಯುದ್ದಕ್ಕೂ ಹಲವಾರು ನೆನಪುಗಳು ಮತ್ತು ಸ್ನೇಹವನ್ನು ಕಂಡುಕೊಂಡಿರುವುದು ನನ್ನ ಸೌಭಾಗ್ಯ. ಆದರೆ ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು ಮತ್ತು ಸಮಯವು ನನಗೆ ಸರಿಯಾಗಿದೆ.’ ಎಂದು ರಾಸ್ ಟೇಲರ್ ಟ್ವೀಟ್ ಮಾಡಿದ್ದಾರೆ.

37 ವರ್ಷದ ರಾಸ್ ಟೇಲರ್ ಅವರು 2006ರಲ್ಲಿ ಪದಾರ್ಪಣೆ ಮಾಡಿದ್ದರು. 109 ಟೆಸ್ಟ್ ಪಂದ್ಯದಲ್ಲಿ 7,577 ರನ್ ಗಳು, 233 ಏಕದಿನ ಪಂದ್ಯಗಳಲ್ಲಿ 8,581 ರನ್ ಗಳು ಮತ್ತು 102 ಟಿ20 ಪಂದ್ಯಗಳಲ್ಲಿ 1,909 ರನ್ ಗಳನ್ನು ಗಳಿಸಿದ್ದಾರೆ. ಐಪಿಎಲ್ ನಲ್ಲೂ ಆಡಿರುವ ರಾಸ್ ಟೇಲರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಡೇರ್ ಡೆವಿಲ್ಸ್, ಪುಣೆ ವಾರಿಯರ್ಸ್ ಪರವಾಗಿ ಆಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

SDPI:6ನೇ ವಾರ್ಡ್ ಗೆ ನಡೆದ ಉಪ ಚುನಾವಣೆಯಲ್ಲಿ ಎಸ್ ಡಿಪಿಐ ಗೆಲುವು ಸಾಧಿಸಿದೆ;

Thu Dec 30 , 2021
ಚಾಮರಾಜನಗರ: ಈ ಹಿಂದೆಯೂ ಈ ವಾರ್ಡ್ ನಲ್ಲಿ ಎಸ್ ಡಿಪಿಐ ಗೆಲುವು ಸಾಧಿಸಿತ್ತು. ಸದಸ್ಯರಾಗಿದ್ದ ಸಮೀವುಲ್ಲಾ ಅವರ ಅಕಾಲಿಕ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು. ಎಸ್ ಡಿಪಿಐ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಎಸ್ ಡಿಪಿಐ ನಿಂದ ಅಫ್ಸರ್ ಪಾಷ, ಕಾಂಗ್ರೆಸ್ ನಿಂದ ಸೈಯದ್ ಅತೀಕ್ ಅಹಮದ್, ಜೆಡಿಎಸ್ ನಿಂದ ಮೊಹಮ್ಮದ್ ಜಾವೀದ್ ಹಾಗೂ ಬಿಜೆಪಿಯಿಂದ ಪಿ.ಮಹೇಶ್ ಸ್ಪರ್ಧಿಸಿದ್ದರು. 1,801 ಮತದಾರರ ಪೈಕಿ, 1,209 ಮಂದಿ ಮತದಾನ ಮಾಡಿದ್ದರು. ಅಫ್ಸರ್ […]

Advertisement

Wordpress Social Share Plugin powered by Ultimatelysocial