SDPI:6ನೇ ವಾರ್ಡ್ ಗೆ ನಡೆದ ಉಪ ಚುನಾವಣೆಯಲ್ಲಿ ಎಸ್ ಡಿಪಿಐ ಗೆಲುವು ಸಾಧಿಸಿದೆ;

ಚಾಮರಾಜನಗರ: ಈ ಹಿಂದೆಯೂ ಈ ವಾರ್ಡ್ ನಲ್ಲಿ ಎಸ್ ಡಿಪಿಐ ಗೆಲುವು ಸಾಧಿಸಿತ್ತು. ಸದಸ್ಯರಾಗಿದ್ದ ಸಮೀವುಲ್ಲಾ ಅವರ ಅಕಾಲಿಕ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು.

ಎಸ್ ಡಿಪಿಐ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
ಎಸ್ ಡಿಪಿಐ ನಿಂದ ಅಫ್ಸರ್ ಪಾಷ, ಕಾಂಗ್ರೆಸ್ ನಿಂದ ಸೈಯದ್ ಅತೀಕ್ ಅಹಮದ್, ಜೆಡಿಎಸ್ ನಿಂದ ಮೊಹಮ್ಮದ್ ಜಾವೀದ್ ಹಾಗೂ ಬಿಜೆಪಿಯಿಂದ ಪಿ.ಮಹೇಶ್ ಸ್ಪರ್ಧಿಸಿದ್ದರು.
1,801 ಮತದಾರರ ಪೈಕಿ, 1,209 ಮಂದಿ ಮತದಾನ ಮಾಡಿದ್ದರು.

ಅಫ್ಸರ್ ಪಾಷಾ ಅವರು 651 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.

ಕಾಂಗ್ರೆಸ್ ನ ಸೈಯದ್ ಅತೀಕ್ ಅಹಮದ್ ಅವರು 399, ಜೆಡಿಎಸ್ ನ ಮೊಹಮ್ಮದ್ ಜಾವೀದ್ ಅವರು 82 ಹಾಗೂ ಬಿಜೆಪಿಯ ಮಹೇಶ್ ಅವರು 73 ಮತಗಳನ್ನು ಗಳಿಸಿದ್ದಾರೆ. ನೋಟಾಗೆ‌ ನಾಲ್ಕು ಮತಗಳು ಬಿದ್ದಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

JAMMU AND KASHMIR: ಜಮ್ಮು ಮತ್ತುಕಾಶ್ಮೀರದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆ;

Thu Dec 30 , 2021
ಶ್ರೀನಗರ: ಜಮ್ಮು ಮತ್ತುಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಆರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದ್ದು, ಅದರಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಎಲ್ಲಾ ಆರು ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. ‘ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯ ಆರು ಭಯೋತ್ಪಾದಕರು ಕೊಲ್ಲಲ್ಪಟ್ಟರು. ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ನಾಲ್ವರ ಗುರುತು ಪತ್ತೆಮಾಡಲಾಗಿದ್ದು, ಇನ್ನಿಬ್ಬರು ಭಯೋತ್ಪಾದಕರ ಗುರುತು ಪತ್ತೆ ಮಾಡಲಾಗುತ್ತಿದೆ. ಇದು ನಮಗೆ ಸಿಕ್ಕ ದೊಡ್ಡ […]

Advertisement

Wordpress Social Share Plugin powered by Ultimatelysocial