ಆರೋಗ್ಯವರ್ಧಕವಾಗಿ ಕಷಾಯ ಸೇವಿಸುವ ಭರದಲ್ಲಿ ಯಡವಟ್ಟು ಮಾಡ್ಕೊಳ್ಬೇಡಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಜನರು ಕಷಾಯ, ಅರಿಶಿನ ಹಾಲು, ನಿಂಬೆ ಪಾನಕವನ್ನು ಸೇವಿಸುತ್ತಿದ್ದಾರೆ. ಇವು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಬಹುದು, ಆದರೆ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಅನಾರೋಗ್ಯವೂ ಕಾಡಬಹುದು.

ಕಷಾಯ ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಕಷಾಯವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಬಹುದು. ಆದರೆ ಹೆಚ್ಚಿನ ಪ್ರಮಾಣದ ಕಷಾಯವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೆಚ್ಚಿನ ಪ್ರಮಾಣದ ಕಷಾಯವನ್ನು ಸೇವಿಸುವುದರಿಂದ ಹೊಟ್ಟೆಯ ತೊಂದರೆಗಳು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು.

ಕಷಾಯವನ್ನು ಪ್ರತಿ ದಿನ ಸೇವಿಸುವುದು ಒಳ್ಳೆಯದಲ್ಲ. ಒಂದು ದಿನ ಬಿಟ್ಟು ಒಂದು ದಿನ ಕಷಾಯವನ್ನು ಸೇವಿಸಬಹುದು. ದೀರ್ಘ ಕಾಲದವರೆಗೆ ಕಷಾಯವನ್ನು ಕುಡಿಯುತ್ತಿದ್ದರೆ ಸ್ವಲ್ಪ ಸಮಯ ನಿಲ್ಲಿಸಿ. ವಾರಕ್ಕೆ ಎರಡು ಮೂರು ಬಾರಿ ಕಷಾಯ ಕುಡಿಯಿರಿ.

ಅರಿಶಿನ ಹಾಲು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಹಾನಿ ಉಂಟಾಗುತ್ತದೆ. ಪ್ರತಿದಿನ ಅರಿಶಿನ ಹಾಲನ್ನು ಸೇವಿಸುವುದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಲಿಗೆ ಕಡಿಮೆ ಅರಿಶಿನ ಹಾಕಿ ಕುಡಿಯುವುದು ಒಳ್ಳೆಯದು.

ನಿಂಬೆ ಪಾನಕ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಿಂಬೆಯಲ್ಲಿ ವಿಟಮಿನ್ ಸಿ ಹೆಚ್ಚಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದಿನಕ್ಕೆ ಎರಡು ನಿಂಬೆ ರಸದಿಂದ ಪಾನಕ ತಯಾರಿಸಿ ಕುಡಿಯಬಹುದು. ಅದಕ್ಕಿಂತ ಹೆಚ್ಚು ಸೇವನೆ ಯೋಗ್ಯವಲ್ಲ. ಇದ್ರಿಂದ ಗ್ಯಾಸ್ಟ್ರಿಕ್, ಒತ್ತಡ ಅತಿಯಾದ ಆಸಿಡ್ ರಿಫ್ಲಕ್ಸ್ ಸಮಸ್ಯೆ ಕಾಣಿಸುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಶಾರ್ಟ್ ಸರ್ಕ್ಯೂಟ್:ಒಂದು ಎಕರೆ ಕಬ್ಬಿನ ಬೆಳೆ ಭಸ್ಮ ..!

Sun Feb 26 , 2023
  ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಆಕಸ್ಮಿಕದಲ್ಲಿ, ಒಂದು ಎಕರೆ ಕಬ್ಬಿನ ಬೆಳೆ ಭಸ್ಮವಾಗಿರುವ ಘಟನೆ ಯಳಂದೂರು ತಾಲ್ಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತ ಎಂ.ಕೆ.ದೊರೆಸ್ವಾಮಿ ಅವರಿಗೆ ಸೇರಿದ ಜಮೀನಿಗೆ , ಕಬ್ಬಿನ ಗದ್ದೆಗೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ತಗುಲಿ ಒಂದು ಎಕರೆಗೂ ಹೆಚ್ಚು ಕಬ್ಬು ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಕಬ್ಬಿನ ಗದ್ದೆಗೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ತಗುಲಿ ಒಂದು ಎಕರೆಗೂ ಹೆಚ್ಚು ಬೆಳೆ ಭಸ್ಮವಾಗಿರುವ ಈ […]

Advertisement

Wordpress Social Share Plugin powered by Ultimatelysocial