ಬಿಜೆಪಿ ಪಕ್ಷಕ್ಕೆ ಶೆಡ್ಡು ಹೊಡೆದ ಶಾಸಕ ಶ್ರೀಮಂತ್ ಪಾಟೀಲ್ ‌…!?

ಚಿಕ್ಕೋಡಿ: ಅಭಿವೃದ್ಧಿ ಸಾಲುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಶಾಸಕ ಶ್ರೀಮಂತ ಪಾಟೀಲ್ ಸದ್ಯ ಬಿಜೆಪಿ ಪಕ್ಷಕ್ಕೆ ಬ್ಲಾಕ್ ಮೇಲ್ ತಂತ್ರಗಾರಿಕೆ ಮಾಡುತ್ತಿದ್ದಾರಾ..! ಎಂಬ ಮಾತುಗಳು ಚರ್ಚೆಗೆ ಗ್ರಾಸವಾಗಿದೆ.

ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರು ಅಭಿವೃದ್ಧಿ ಕಾರ್ಯಗಳ ನಡೆಸುವ ವೇಳೆಯಲ್ಲಿ ಗ್ರಾಮಸ್ಥರು ಉದ್ದೇಶಿಸಿ ಮಾತನಾಡುವ ಸಮಯದಲ್ಲಿ ನಾನು ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ನೇರವಾಗಿ ಮುಖ್ಯಮಂತ್ರಿಯವರಿಗೆ ಹೇಳಿದ್ದೇನೆ ಎಂಬ ಮಾತು ಸದ್ಯ ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಕಳೆದ ಆರು ವರ್ಷಗಳಿಂದ ಕುಂಟುತ್ತ ಸಾಗುತ್ತಿರುವ ಬಸವೇಶ್ವರ ಏತ್ ನೀರಾವರಿ ಯೋಜನೆ ಮುಗಿಸುವಂತೆ ಶ್ರೀಮಂತ ಪಾಟೀಲ್ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಈ ಯೋಜನೆ ಪೂರ್ಣವಾಗದಿದ್ದರೆ ನಾನು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಿಲ್ಲ, ನೀವು ಆದಷ್ಟು ಬೇಗನೆ ಈ ಕಾರ್ಯ ಪೂರ್ಣ ಮಾಡಿ, ಇಲ್ಲದಿದ್ದರೆ ಆ ಕುರ್ಚಿ ಮೇಲೆ ನಾನು ಏಕೆ ಕುಳಿತುಕೊಳ್ಳಲಿ ಎಂದು ಶಾಸಕರ ಮಾತಿಗೆ ಕಾಗವಾಡ ಕ್ಷೇತ್ರದಲ್ಲಿ ಪರವಿರೋಧಗಳು ಚರ್ಚೆ ನಡೆಯುತ್ತಿವೆ.

ಶಾಸಕ ಶ್ರೀಮಂತ ಪಾಟೀಲ್ ಬಹು ನಿರೀಕ್ಷಿತ ಖೀಳೆಗಾಂವ್ ಬಸವೇಶ್ವರ ಏತ್ ನೀರಾವರಿ ಯೋಜನೆ 1363 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಕಳೆದ 2017ರಲ್ಲಿ ಪ್ರಾರಂಭವಾಗಿ ಇದುವರೆವಿಗೂ ಆಮೆಗತಿಯಲ್ಲಿ ಸಾಗುತ್ತಿದ್ದು ಇದಕ್ಕೆ ಆ ಭಾಗದ ರೈತರಲ್ಲಿ ನಿರಾಸೆ ಮುಡಿಸಿದೆ, ಶಾಸಕರು ಎಲ್ಲಿ ಸಿಕ್ಕರೂನು ರೈತರು ಯೋಜನೆ ಬಗ್ಗೆ ಪ್ರಶ್ನೆ ಮಾಡುತ್ತಿರುವುದರಿಂದ ರೈತರ ಮನವೊಲಿಕೆಗೆ ಶ್ರೀಮಂತ ಪಾಟೀಲ್ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹಲವು ತಂತ್ರಗಾರಿಕೆಯನ್ನು ಅನುಸರಿಸುವ ಶ್ರೀಮಂತ ಪಾಟೀಲ್ ಈ ಮಾತನ್ನು ಹೇಳಿ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಇನ್ನೂ ಕೆಲವರು ಕೇಳುತ್ತಿದ್ದಾರೆ.

ಶಾಸಕ ಶ್ರೀಮಂತ್ ಪಾಟೀಲ್ ಅವರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂಬ ಹೇಳಿಕೆ ಮುಖ್ಯಮಂತ್ರಿಗಳು ಗಂಭೀರವಾಗಿ ತೆಗೆದುಕೊಂಡು. ಬಸವೇಶ್ವರ ನೀರಾವರಿ ಯೋಜನೆಗೆ ಹಣವನ್ನು ಬಿಡುಗಡೆ ಮಾಡಿದ್ದಾರೆ ಆದಷ್ಟು ಬೇಗನೆ ಈ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಶಾಸಕ ಶ್ರೀಮಂತ್ ಪಾಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಂಗನವಾಡಿ ಹಾಲು ಪೌಡರ್ ಗೆ ಕನ್ನ ಫಲಾನುಭವಿಗಳಿಗೆ ಟೋಪಿ ಹಾಕಿ ದಂಧೆಕೋರರ ಜತೆ ಶಾಮೀಲು!

Sat Jul 23 , 2022
ಶಿಶು ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯಕರ್ತೆಯರು ಶಾಮೀಲು ಆಂಕರ್: ಅಂಗನವಾಡಿಯ ಹಾಲು ಪೌಡರ್ ಗೆ ಕನ್ನ ಹಾಕಿದ ಖದೀಮನೊಬ್ಬ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಪ್ರಕರಣ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.ಅರ್ಧ ಕೆ.ಜಿ.ತೂಕದ 128 ಪ್ಯಾಕೆಟ್ ಗಳು ಖದೀಮನ ಬಳಿ ಪತ್ತೆಯಾಗಿದೆ.ಗರ್ಭಿಣಿಯರಿಗೆ ಬಾಣಂತಿಯರಿಗೆ ಸೇರಬೇಕಾದ ಹಾಲಿನ ಪೌಡರ್ ಪ್ಯಾಕೆಟ್ ಗಳು ಖಾಸಗಿ ವ್ಯಾಪಾರಸ್ಥರ ಕೈ ಸೇರುವ ದಂಧೆ ಬಟಾ ಬಯಲಾಗಿದೆ.ಮಡುವಿನಹಳ್ಳಿ ಗ್ರಾಮದ ಅಂಗನವಾಡಿಯ ಸಿಬ್ಬಂದಿ ಮಂಜುಳಾ ಎಂಬುವರು ಹಾಲಿನ ಪ್ಯಾಕೆಟ್ […]

Advertisement

Wordpress Social Share Plugin powered by Ultimatelysocial