ರೋಚಕ ಹಂತದಲ್ಲಿ ಪ್ರಮುಖ ವಿಕೆಟ್ ಉರುಳಿಸಿ ಭಾರತವನ್ನು ಫೈನಲ್ ತಲುಪಿಸಿದ ಕನ್ನಡಿಗ ವಿನಯ್ ಕುಮಾರ್!

ವರ್ಲ್ಡ್ ಸೇಫ್ಟಿ ರೋಡ್ ಸೀರಿಸ್ ನಡೆಯುತ್ತಿದ್ದು. ಈಗಾಗಲೇ ಬಹುತೇಕ ಪಂದ್ಯಗಳು ಮುಗಿದಿವೆ. ಭಾರತದ ಲೆಜೆಂಡ್ಸ್ ತಂಡ ಮತ್ತೊಂದು ಭರ್ಜರಿಯಾದ ಗೆಲುವಿನ ಮೂಲಕ ಫೈನಲ್ಸ್ ಪ್ರವೇಶಿಸಿದೆ. ಛತ್ತೀಸ್ ಗಡದ ರಾಯಪುರ್ ನಲ್ಲಿ ನೆನ್ನೆ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 12 ರನ್ನುಗಳಿಂದ ಸೋಲಿಸಿ ಭಾರತ ಫೈನಲ್ ಪ್ರವೇಶಿಸಿದೆ. ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದಲ್ಲಿ ಲೆಜೆಂಡರಿ ಬ್ಯಾಟ್ಸ್‌ಮನ್ ಗಳು ಅಬ್ಬರಿಸಿದರು. ಮೈದಾನದ ಮೂಲೆ ಮೂಲೆಯಲ್ಲೂ ಬೌಂಡರಿ, ಸಿಕ್ಸರ್ ಗಳ ಸುರಿಮಳೆಯನ್ನೇ ಸುರಿಸಿದರು. ಪ್ರತ್ಯುತ್ತರವಾಗಿ ವೆಸ್ಟ್ ಇಂಡೀಸ್ ಲೆಜೆಂಡ್ಸ್ ಕೂಡ ಉತ್ತಮವಾಗಿಯೇ ಆಟವಾಡಿದರು.

 

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಡಿಯಾ ಲೆಜೆಂಡ್ಸ್‌ ಗೆ ವೀರೇಂದ್ರ ಸೆಹ್ವಾಗ್ 35 (17), ನಾಯಕ ಸಚಿನ್ ತೆಂಡೂಲ್ಕರ್ 65 (42) ಅದ್ಭುತ ಆರಂಭ ಒದಗಿಸಿದರು. ಆನಂತರ ಮೊಹಮ್ಮದ್ ಕೈಫ್ 27, ಯೂಸೂಫ್ ಪಠಾಣ್ ಅಜೇಯ 37, ಯುವರಾಜ್ ಸಿಂಗ್ ಅಜೇಯ 49 (20) ರನ್‌ನೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದು 218 ರನ್ ಗಳಿಸಿತು. 219 ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಲೆಜೆಂಡ್ಸ್‌, ಡ್ವೇನ್ ಸ್ಮಿತ್ 63 (36), ವಿಲಿಯಮ್ ಪಾರ್ಕಿನ್ಸ್ 9, ನರಸಿಂಗ್ ಡಿಯೋನರೈನ್ 59 (44), ನಾಯಕ ಬ್ರಿಯಾನ್ ಲಾರಾ 46 (28) ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 206 ರನ್‌ ಗಳಿಸಲಷ್ಟೇ ಶಕ್ತವಾಯ್ತು.

ಭಾರತದ ಬೌಲರ್ ಗಳು ವೆಸ್ಟ್ ಇಂಡೀಸ್ ತಂಡವನ್ನು ಬಿಟ್ಟೂ ಬಿಡದಂತೆ ಕಾಡಿದರು. ಮಹತ್ವದ ಹಂತದಲ್ಲಿ ಪ್ರಮುಖ ಎರಡು ವಿಕೆಟ್ ಗಳನ್ನು ಕನ್ನಡಿಗ ವಿನಯಕುಮಾರ್ ಪಡೆಯುವ ಮೂಲಕ ವೆಸ್ಟ್ಇಂಡೀಸ್ ಗೆಲುವಿನ ಆಸೆಯನ್ನು ಕಮರಿ ಹೋಗುವಂತೆ ಮಾಡಿದರು. ಇರ್ಫಾನ್ ಪಠಾಣ್, ಮನ್‌ಪ್ರೀತ್‌ ಗೋನಿ, ಪ್ರಗ್ಯಾನ್ ಓಜಾ ತಲಾ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಕೊನೆಯ ಎರಡು ಓವರ್​ನಲ್ಲಿ 25 ರನ್​ಗಳು ಬೇಕಿತ್ತು. 19ನೇ ಓವರ್ ಎಸೆದ ವಿನಯ್ ಕುಮಾರ್ ಮೊದಲ ಎಸೆತದಲ್ಲಿ 2 ರನ್ ನೀಡಿದರು. 2ನೇ ಎಸೆತದಲ್ಲಿ ಲಾರಾ ಭರ್ಜರಿ ಬೌಂಡರಿ ಬಾರಿಸಿದರು. 3ನೇ ಎಸೆತದಲ್ಲಿ 46 ರನ್​ ಬಾರಿಸಿ ಗೆಲುವಿನತ್ತ ತಂಡವನ್ನು ಕಡೊಯ್ಯುತ್ತಿದ್ದ ಲಾರಾ ಅವರನ್ನು ಕ್ಲೀನ್ ಬೌಲ್ಡ್​ ಮಾಡಿದರು. ಅಲ್ಲದೆ ಈ ಓವರ್​ನ ಅಂತಿಮ ಎಸೆತದಲ್ಲಿ ಟಿನೋ ಬೆಸ್ಟ್ ವಿಕೆಟ್ ಪಡೆಯುವ ಮೂಲಕ ಮತ್ತೊಂದು ಯಶಸ್ಸು ತಂದುಕೊಟ್ಟರು.

Please follow and like us:

Leave a Reply

Your email address will not be published. Required fields are marked *

Next Post

ಮಂತ್ರಾಲಯದ ರಾಯರ ಮಠದ ಗೋ ಶಾಲೆಯಲ್ಲಿ ದರ್ಶನ್

Thu Mar 18 , 2021
ಚಾಲೆಂಜಿಂಗ್ ಸ್ಟಾರ್ ದರ್ಶನ್  ರಾಯರ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಬರ್ಟ್ ಯಶಸ್ಸಿನ ಖುಷಿಯಲ್ಲಿರುವ ದರ್ಶನ್ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ್ದಾರೆ. ದರ್ಶನ್ ತಮ್ಮ ಆಪ್ತರ ಜೊತೆ ರಾಯರ ಸನ್ನಿಧಾನಕ್ಕೆ ವರ್ಷಗಳ ಬಳಿಕ ಭೇಟಿ ನೀಡಿದ್ದಾರೆ. ರಾಯರ ಮಠದಲ್ಲಿ ನಡೆದ ವೈಭವೋತ್ಸವ ಸಂಭ್ರಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಬಳಿಕ ಮಠದ ವತಿಯಿಂದ ದರ್ಶನ್ ಅವರಿಗೆ ಸನ್ಮಾನ ಸಹ ಮಾಡಲಾಗಿದೆ.   ಇದಾದ ಬಳಿಕ ದರ್ಶನ್ ಪ್ರೀತಿಯ ಗೋಶಾಲೆಗೆ ಭೇಟಿ ನೀಡಿದ್ದಾರೆ. ಗೋಶಾಲೆಯ […]

Advertisement

Wordpress Social Share Plugin powered by Ultimatelysocial