ನಾಳೆ ಕೇರಳಕ್ಕೆ ಮುಂಗಾರು ಪ್ರವೇಶ; ಐದು ದಿನ ಸಾಧಾರಣ ಮಳೆ ಸಾಧ್ಯತೆ

ತಿರುವನಂತಪುರ: ಮುಂಗಾರು ಮಳೆಯು ಮೇ 27ರಂದು ಕೇರಳಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಬುಧವಾರ ತಿಳಿ ಸಿದೆ. ರಾಜ್ಯದಲ್ಲಿ ಶನಿವಾರದವರೆಗೆ ಗುಡುಗು, ಮಿಂಚು, ಗಾಳಿ ಸಹಿತ ಮಳೆ ಯಾಗುವ ಎಚ್ಚರಿಕೆಯನ್ನೂ ಕೊಡಲಾಗಿದೆ.ಗುರುವಾರದಂದು ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಶುಕ್ರವಾರಕ್ಕೆ ಈ ಜಿಲ್ಲೆಗಳ ಜತೆ ಪತನಂತ್ತಿಟ್ಟ ಜಿಲ್ಲೆಗೂ ಆರೆಂಜ್‌ ಅಲರ್ಟ್‌ ಇರಲಿದೆ. ಹಾಗೆಯೇ ಶನಿವಾರದಂದು ಈ ಎಲ್ಲ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಮೇ 28ರ ವರೆಗೆ ರಾಜ್ಯದಲ್ಲಿ ದಿನಕ್ಕೆ 7-11ಸೆಂ.ಮೀ.ವರೆಗೆ ಮಳೆ ವರದಿಯಾಗಲಿದೆ ಎಂದು ಐಎಂಡಿ ಎಚ್ಚರಿಸಿದೆ.

ಕೇರಳ ಮತ್ತು ಲಕ್ಷದ್ವೀಪ ಕರಾವಳಿ ಭಾಗದಲ್ಲಿ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಅದು 60 ಕಿ.ಮೀ.ವರೆಗೂ ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.
ಕರ್ನಾಟಕಕ್ಕೂ ಎಚ್ಚರಿಕೆ: ಕರ್ನಾಟಕ, ಲಕ್ಷದ್ವೀಪ, ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡು ಮತ್ತು ಪುದು ಚೆರಿಯಲ್ಲಿಯೂ ಮೇ 29ರ ವರೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೇರಳ ಮತ್ತು ತಮಿಳು ನಾಡಿನಲ್ಲಿ ಮೇ 26 ರಂದು ಭಾರೀ ಮಳೆ ಯಾಗು‌ವ ಸಾಧ್ಯತೆ ಯಿದೆ.

ಅದೇ ದಿನ ಕರ್ನಾಟಕ, ಅರುಣಾ ಚಲ ಪ್ರದೇಶ, ಅಸ್ಸಾಂ, ಮೇಘಾಲಯ,ಪಶ್ಚಿಮ ಬಂಗಾಲ ಮತ್ತು ತಮಿಳುನಾಡಿನಲ್ಲಿ ಗುಡುಗು ಸಹಿತ ಮಳೆ ಯಾಗಲಿದೆ. ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಹರಿಯಾಣ, ಚಂಡೀಗಢ, ದಿಲ್ಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಮೇ 28 ಮತ್ತು 29ರಂದು ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಐ

ಎಂ

ಡಿ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಮಳೆ: ಮಹಾರಾಷ್ಟ್ರದ ಮುಂಬಯಿ, ಥಾಣೆ, ಪಾಲ^ರ್‌, ರಾಯ್‌ಗಢ, ರತ್ನಗಿರಿ ಮತ್ತು ಸಿಂಧುದುರ್ಗದಲ್ಲಿ ಮೇ 25ರಿಂದ 30ರ ವರೆಗೆ ಸಾಧಾರಣ ಮಳೆಯಾಗಲಿದೆ. ಹಾಗೂ ಮೇ 25-27ರ ವರೆಗೆ ಹಲವು ನಗರಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಐಎಂಡಿಯ ಮುಂಬಯಿ ಪ್ರಾದೇಶಿಕ ಕಚೇರಿ ತಿಳಿಸಿದೆ. ಮುಂಬಯಿನ ಕೆಲವು ಭಾಗದಲ್ಲಿ ಬುಧವಾರ 2.8 ಮಿ.ಮೀ.ವರೆಗಿನ ಮಳೆ ವರದಿಯಾಗಿದೆ.

ಈಶಾನ್ಯಕ್ಕೆ ಪೂರ್ವ ಮುಂಗಾರು ಬಂಪರ್‌
ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಮೇಘಾಲಯದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಪೂರ್ವ ಮುಂಗಾರು ಮಳೆಯಾಗಿದೆ. 2018ರಿಂದ ಈ ರಾಜ್ಯಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಪೂರ್ವ ಮುಂಗಾರು ಸುರಿಯುತ್ತಿತ್ತು. ಆದರೆ ಈ ಬಾರಿ ದಾಖಲೆಯ ಪ್ರಮಾಣ ದಲ್ಲಿ ಮಳೆ ಸುರಿದಿದೆ ಎಂದು ಪ್ರಾದೇಶಿಕ ಐಎಂಡಿ ಕಚೇರಿಗಳು ವರದಿ ಮಾಡಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನುಷ್ಯಪ್ರಯತ್ನ, ದೈವಾನುಗ್ರಹ ಎರಡೂ ಮುಖ್ಯ

Thu May 26 , 2022
  ಒಬ್ಬ ನಾವಿಕನು ಜನರನ್ನು ಮತ್ತು ಸರಕನ್ನು ವಿದೇಶಕ್ಕೆ ಸಾಗಿಸುವ 8 ಅಂತಸ್ತಿನ ದೊಡ್ಡ ಹಡಗನ್ನು ನಡೆಸುತ್ತಿದ್ದನು. ಆ ನಾವಿಕನು ದೇವರ ಪ್ರಾರ್ಥನೆ ಮತ್ತು ಧ್ಯಾನವನ್ನು ಮಾಡಿಯೇ ಪ್ರತಿದಿನದ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದನು. ಒಮ್ಮೆ ಎಂದಿನಂತೆ ನಾವಿಕನು ಹಡಗನ್ನು ಆರಂಭಿಸುವ ಮೊದಲು ದೇವರ ಪ್ರಾರ್ಥನೆ ಮಾಡುತ್ತಿದ್ದನು. ಆಗ ಅಲ್ಲಿದ್ದ ಯುವಕ-ಯುವತಿಯರು ಇದೊಂದು ಮೌಢ್ಯ ಆಚರಣೆಯೆಂದು ಅವನನ್ನು ಅಪಹಾಸ್ಯ ಮಾಡತೊಡಗಿದರು. ಆತನು ಅದಕ್ಕೆ ಕಿವಿಗೊಡದೆ ಪ್ರಾರ್ಥನೆಯ ನಂತರ ಹಡಗನ್ನು ನಡೆಸಲು ಪ್ರಾರಂಭಿಸಿದನು. ದೂರದೇಶದ […]

Advertisement

Wordpress Social Share Plugin powered by Ultimatelysocial