‘ಮುಗಿಲ್​ಪೇಟೆ’ ಚಿತ್ರದಲ್ಲಿ ‘ಪ್ರೇಮಲೋಕ’ದ ರಸಮಯ ದೃಶ್ಯ…!!!

ದಶಕಗಳ ಹಿಂದೆ ಬಂದ ಪ್ರೇಮಲೋಕ ಚಿತ್ರದಲ್ಲಿ ಕ್ರೇಜಿ ಸ್ಟಾರ್​ ರವಿಚಂದ್ರನ್​  ನಟನೆಯ ಪ್ರೀತಿಪ್ರಣಯದ ದೃಶ್ಯಗಳು ಯುವಜನರ ಮನ ಸೆಳೆದಿದ್ದವು. ಇದೀಗ ಅವರ ಮಗ ಮನೋರಂಜನ್ ನಾಯಕತ್ವದ ‘ಮುಗಿಲ್​ಪೇಟೆ’ ಎಂಬ ಪ್ರೇಮಚಿತ್ರದಲ್ಲಿ ಅದೇ ರೀತಿಯ ಜಾದೂ ಸೃಷ್ಟಿಸುವ ಪ್ರಯತ್ನದಲ್ಲಿದ್ದಾರೆ.

ಈದೀಗ ಮುಗಿಲ್​ಪೇಟೆ ಚಿತ್ರದ ‘ತಾರೀಫು ಮಾಡಲು ತಾರೀಕು ಮೂಡಿದೆ…’ ಹಾಡಿನ ವಿಡಿಯೋವನ್ನು ಲಹರಿ ಮ್ಯೂಸಿಕ್​ನವರು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿದ್ದರು. ಆ ಚಿತ್ರಗೀತೆಗೆ 24 ಗಂಟೆಗಳಲ್ಲಿ 700 ಸಾವಿರ ಪ್ಲಸ್​ ವೀಕ್ಷಣೆಗಳು ಲಭಿಸಿದ್ದು, ಎರಡನೇ ದಿನದಲ್ಲೇ ಒಂದು ಮಿಲಿಯನ್​ ವೀಕ್ಷಣೆಗಳ ಮಟ್ಟವನ್ನು ದಾಟಿತ್ತು.ಇದೀಗ ಚಿತ್ರಕ್ಕೆ ಸಂಬಂಧಿಸಿದ ಮತ್ತೊಂದು ಕುತೂಹಲಕಾರಿ ಅಂಶವನ್ನು ಟ್ವಿಟರ್​ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪ್ರೇಮಲೋಕ ಚಿತ್ರದಲ್ಲಿ ರವಿಚಂದ್ರನ್ ಮತ್ತು ಜೂಹಿ ಚಾವ್ಲಾ ನಡುವಿನ ಇಂಟಿಮೇಟ್​ ಸೀನ್​ನ ತುಣುಕನ್ನು ‘ಮುಗಿಲ್​ಪೇಟೆ’ ಚಿತ್ರದಲ್ಲಿ ರೀಕ್ರಿಯೇಟ್​ ಮಾಡಲಾಗಿದೆ. ಅಪ್ಪ ನಟಿಸಿದ ದೃಶ್ಯಕ್ಕೇ ಮಗ ಮನೋರಂಜನ್​ ಕೂಡ ಅಭಿನಯಿಸಿದ್ದು, ಈ ಎರಡೂ ದೃಶ್ಯಗಳ ಜಂಟಿ ವಿಡಿಯೋವನ್ನು ರಿಲೀಸ್​ ಮಾಡಿದ್ದಾರೆ. ಅದರ ಬಗ್ಗೆ ಅಭಿಮಾನಿಗಳ ಅಭಿಪ್ರಾಯಗಳನ್ನು ಕೇಳಿದ್ದಾರೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತ್‌ ಬಯೋಟೆಕ್‌ ನಿಂದ ಹೆಚ್ಚಿನ ಸ್ಪಷ್ಟನೆ ಕೇಳಿದ ಡಬ್ಲ್ಯುಹೆಚ್‌ಒ..!!!

Wed Oct 27 , 2021
ಜಾಗತಿಕ ಮಟ್ಟದಲ್ಲಿ ಲಸಿಕೆಗಳ ತುರ್ತು ಬಳಕೆಗೆ ಕೋವ್ಯಾಕ್ಸಿನ್ ನ್ನು ಸೇರಿಸುವುದಕ್ಕಾಗಿ ಡಬ್ಲ್ಯುಹೆಚ್‌ಒ ಭಾರತ್ ಬಯೋಟೆಕ್ ನಿಂದ ಮತ್ತಷ್ಟು ಸ್ಪಷ್ಟನೆಗಳನ್ನು ಕೇಳಿದೆ. ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೂ ಮುನ್ನ ಅಂತಿಮ ಹಂತದ ಅಪಾಯ-ಪ್ರಯೋಜನ ಮೌಲ್ಯಮಾಪನವನ್ನು ನಡೆಸುವುದಕ್ಕೆ ಈ ಹೆಚ್ಚುವರಿ ಸ್ಪಷ್ಟನೆಗಳನ್ನು ಡಬ್ಲ್ಯುಹೆಚ್‌ಒ ನ ತಾಂತ್ರಿಕ ಸಲಹಾ ತಂಡ ಕೇಳಿದೆ.   ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ : https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial