ವಿಮಾನದಲ್ಲಿ ಅರೆನಗ್ನಳಾಗಿ ಓಡಾಡಿ ವಿದೇಶಿ ಮಹಿಳೆ ರಂಪಾಟ.

ವಿಮಾನದಲ್ಲಿ ಎಕನಾಮಿ ಕ್ಲಾಸ್ ಟಿಕೆಟ್ ತೆಗೆದುಕೊಂಡು ಬ್ಯುಸಿನೆಸ್ ಕ್ಲಾಸ್ ಸೀಟು ಬೇಕೆಂದು ಪಟ್ಟುಹಿಡಿದು ವಿದೇಶೀ ಮಹಿಳೆಯೊಬ್ಬಳು ಅರೆನಗ್ನಳಾಗಿ ಅಶ್ಲೀಲ ವರ್ತನೆ ತೋರಿದ ಘಟನೆ ಏರ್ ವಿಸ್ತಾರ ವಿಮಾನದಲ್ಲಿ ನಡೆದಿದೆ. ಏರ್ ವಿಸ್ತಾರದ ಯುಕೆ ೨೫೬ ವಿಮಾನ ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದಾಗ ಇಟಲಿಯ ಪಾವೊಲಾ ಪೆರಿಚಿಯೋ ಎಂಬ ಮಹಿಳೆ ಅರೆನಗ್ನಳಾಗಿ ಅಶ್ಲೀಲ ವರ್ತನೆ ತೋರಿದ್ದು,ಆಕೆಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ವಿಮಾನದಲ್ಲಿ ಪಾವೊಲಾ ಅವರು ಎಕನಾಮಿ ಕ್ಲಾಸ್ ಟಿಕೆಟ್ (ಸಾಮಾನ್ಯ ದರ್ಜೆ) ಪಡೆದಿದ್ದು ನನಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಆಗಿ ಪರಿವರ್ತಿಸಿಕೊಡಬೇಕೆಂದು ಆಕೆ ವಿಮಾನದೊಳಗೆ ಪಟ್ಟು ಹಿಡಿದಿದ್ದರು.
ಇದಕ್ಕೆ ಸಿಬ್ಬಂದಿ ಒಪ್ಪದಿದ್ದಾಗ ಆಕೆ ಕೋಪೋದ್ರಿಕ್ತಗೊಂಡು ಹಲ್ಲೆ ಮಾಡಿ ಉಗುಳುತ್ತಾ ಬಟ್ಟೆಗಳನ್ನು ಕಳಚಿ ಅರೆನಗ್ನಳಾಗಿಯೇ ವಿಮಾನದೊಳಗೆ ಓಡಾಡಿ ರಂಪಾಟ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆಕೆಯನ್ನು ಸಿಬ್ಬಂದಿಯ ಮಾಹಿತಿಯ ಮೇರೆಗೆ ಪೊಲೀಸರು ಬಂಧಿಸಿದರಾದರೂ ಕೋರ್ಟ್‌ನಲ್ಲಿ ಜಾಮೀನು ಸಿಕ್ಕಿದೆ.ವಿಮಾನದೊಳಗೆ ಇಂಥ ಹತ್ತು ಹಲವು ವಿಚಿತ್ರ ಘಟನೆಗಳು ಬಹಳಷ್ಟು ಬಾರಿ ವರದಿಯಾಗುತ್ತಿರುತ್ತವೆ. ಇತ್ತೀಚೆಗೆ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಘಟನೆ ಬಹಳ ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕ ಈ ವಿಮಾನ ಸಂಸ್ಥೆಯು ಮದ್ಯಸೇವನೆ ನಿಯಮಗಳಲ್ಲಿ ಬದಲಾವಣೆ ತಂದಿದೆ. ಪ್ರಯಾಣಿಕರು ತಾವು ತಂದ ಆಲ್ಕೋಹಾಲ್ ಸೇವನೆಗೆ ಅವಕಾಶ ಕೊಡಬಾರದು. ವಿಮಾನ ಸಿಬ್ಬಂದಿ ಕೊಡುವ ಮದ್ಯ ಮಾತ್ರ ಪ್ರಯಾಣಿಕರು ಸೇವಿಸಬಹುದು ಎನ್ನುವ ನಿಯಮ ಇದು.ವಿಮಾನದೊಳಗೆ ಪ್ರಯಾಣಿಕರಿಗೆ ತಿಂಡಿ, ಪಾನೀಯ ಜೊತೆಗೆ ಮದ್ಯವನ್ನೂ ಕೊಡಲಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಂಡೆನ್‌ಬರ್ಗ್ ಆರೋಪ ದೇಶದ ವಿರುದ್ಧ ವ್ಯವಸ್ಥಿತ ದಾಳಿ.

Tue Jan 31 , 2023
ನ್ಯೂಯಾರ್ಕ್ ಮೂಲದ ಹಿಂಡೆನ್‌ಬರ್ಗ್ ತಮ್ಮ ಕಂಪನಿಗಳ ವಿರುದ್ಧದ ಮಾಡಿರುವ ಆರೋಪ ಭಾರತದ ವಿರುದ್ದ ವ್ಯವಸ್ಥಿತ ದಾಳಿ ಎಂದು ಗೌತಮ್ ಅದಾನಿ ಸಮೂಹ ಆರೋಪಿಸಿದೆ. ಅಮೇರಿಕಾ ಕಂಪನಿಗಳಿಗೆ ಮಾರುಕಟ್ಟೆ ಸೃಷ್ಟಿಸಲು” ದುರುದ್ದೇಶದದಿಂದ ಸುಳ್ಳು ವರದಿ ನೀಡಲಾಗಿದೆ ಎಂದು ಹೇಳಲಾಗಿದೆ.ಈ ವರದಿ ಸಂಪೂರ್ಣ ನಿರಾಧಾರ ಎಂದು ಸಮೂಹ ಆರೋಪಿಸಿದೆ. ಅಮೇರಿಕಾ ಸಂಸ್ಥೆಗೆ ಆರ್ಥಿಕ ಲಾಭ ಮಾಡಿಕೊಡುವ ಉದ್ದೇಶದಿಂದ ಅದಾನಿ ಸಮೂಹದ ಮೇಲೆ “ಸುಳ್ಳಿನ ಆರೋಪ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ರೀತಿಯ ವರದಿ […]

Advertisement

Wordpress Social Share Plugin powered by Ultimatelysocial