ಹಿಂಡೆನ್‌ಬರ್ಗ್ ಆರೋಪ ದೇಶದ ವಿರುದ್ಧ ವ್ಯವಸ್ಥಿತ ದಾಳಿ.

ನ್ಯೂಯಾರ್ಕ್ ಮೂಲದ ಹಿಂಡೆನ್‌ಬರ್ಗ್ ತಮ್ಮ ಕಂಪನಿಗಳ ವಿರುದ್ಧದ ಮಾಡಿರುವ ಆರೋಪ ಭಾರತದ ವಿರುದ್ದ ವ್ಯವಸ್ಥಿತ ದಾಳಿ ಎಂದು ಗೌತಮ್ ಅದಾನಿ ಸಮೂಹ ಆರೋಪಿಸಿದೆ.
ಅಮೇರಿಕಾ ಕಂಪನಿಗಳಿಗೆ ಮಾರುಕಟ್ಟೆ ಸೃಷ್ಟಿಸಲು” ದುರುದ್ದೇಶದದಿಂದ ಸುಳ್ಳು ವರದಿ ನೀಡಲಾಗಿದೆ ಎಂದು ಹೇಳಲಾಗಿದೆ.ಈ ವರದಿ ಸಂಪೂರ್ಣ ನಿರಾಧಾರ ಎಂದು ಸಮೂಹ ಆರೋಪಿಸಿದೆ.
ಅಮೇರಿಕಾ ಸಂಸ್ಥೆಗೆ ಆರ್ಥಿಕ ಲಾಭ ಮಾಡಿಕೊಡುವ ಉದ್ದೇಶದಿಂದ ಅದಾನಿ ಸಮೂಹದ ಮೇಲೆ “ಸುಳ್ಳಿನ ಆರೋಪ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ರೀತಿಯ ವರದಿ ಸರಿಯಲ್ಲ ಎಂದಿದೆ.
ಹಿಂಡೆನ್‌ಬರ್ಗ್ ವರದಿ ಸಂಸ್ಥೆಗಳ ಮೇಲೆ ಮಾಡಿರುವ ವಂಚನೆ ಆರೋಪ ’ಭಾರತದ ಮೇಲೆ ದಾಳಿಯ ಉದ್ದೇಶದಿಂದ ಆರೋಪ ಮಾಡಲಾಗಿದೆ. ಇದನ್ನು ಬಿಟ್ಟು ಬೇರೆ ಉದ್ದೇಶವಿಲ್ಲ.ಈ ರೀತಿಯ ಎಲ್ಲಾ ಆರೋಪ ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂದು ಹೇಳಲಾಗಿದೆ.ಹಿಡನ್ ಬರ್ಗ್ ಸಂಸ್ಥೆ ಅದಾನಿ ಸಮೂಹದ ಕುರಿತಾದ ಮಾಹಿತಿ ಬಹಿರಂಗ ಪಡಿಸುತ್ತಿದ್ದಂತೆ ಅದಾನಿ ಸಮೂಹದ ಷೇರುಗಳು ಗಣನೀಯವಾಗಿ ಕುಸಿತ ಕಂಡಿವೆ. ಇದು ಸಂಸ್ಥೆಯನ್ನು ಆತಂಕಕ್ಕೆ ಸಿಲುಕಿಸುವಂತೆ ಮಾಡಿದೆ.
ನ್ಯೂಯಾರ್ಕ್ ಸಂಸ್ಥೆಯ ವರದಿಯು ಅದಾನಿ ಗ್ರೂಪ್ ಕೇವಲ ಎರಡು ವಹಿವಾಟು ಅವಧಿಗಳಲ್ಲಿ ೫೦ ಶತಕೋಟಿ ಡಾಲರ್ ಗಿಂಯ ಹೆಚ್ಚಿನ ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದೆ ಅದರಲ್ಲಿ ಅಧ್ಯಕ್ಷ ಗೌತಮ್ ಅದಾನಿ ೨೦ ಶತಕೋಟಿ ಡಾಲರ್ ಅಥವಾ ಅವರ ಒಟ್ಟು ಸಂಪತ್ತಿನ ಐದನೇ ಒಂದು ಭಾಗವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.ಷೇರು ಕುಸಿತದಿಂದ ಕಂಗಾಲಾಗಿರುವ ಅದಾನಿ ಸಮೂಹ ತಮ್ಮ ಮೇಲೆ ಬಂದಿರುವ ಆರೋಪಗಳ ಕರಿತು ೪೩೧ ಪುಟಗಳ ವರದಿಯಲ್ಲಿ ಸ್ಪಷ್ಟೀಕರಣ ನೀಡಿ ಅಲ್ಲಗಳೆದಿದೆ.ಅದಾನಿ ಸಮೂಹ ಹಿಡನ್ ಬರ್ಗ್ ಆರೋಪ ನಿರಾದಾರ ಇದು “ಭಾರತದ ಮೇಲಿನ ಲೆಕ್ಕಾಚಾರದ ದಾಳಿ”, ಅದರ ಸಂಸ್ಥೆಗಳು ಮತ್ತು ಭಾರತ “ಬೆಳವಣಿಗೆ ಕಂಠಿತವಾಗಲು ಹವಣಿಸುತ್ತಿದೆ ಎಂದು ಅದಾನಿ ಸಮೂಹ ಆರೋಪ ಮಾಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

80 ವರ್ಷದ ಬಳಿಕ ದೇವಾಲಯಕ್ಕೆ ದಲಿತರ ಪ್ರವೇಶ.

Tue Jan 31 , 2023
ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಹಲವು ದಶಕಗಳಿಂದ ದೇವಸ್ಥಾನಕ್ಕೆ ಪ್ರವೇಶನಿರಾಕರಿಸಲಾಗಿದ್ದ ಅಲ್ಲಿನ ಪರಿಶಿಷ್ಟ ಜಾತಿಯ ೩೦೦ ಕ್ಕೂ ಹೆಚ್ಚು ಜನರನ್ನು ಇಂದು ಜಿಲ್ಲಾಡಳಿತವು ದೇವಾಲಯಕ್ಕೆ ಪೂಜೆಗೆ ಕರೆದೊಯ್ದಿದೆ. ಪೋಷಕ-ಶಿಕ್ಷಕರ ಸಮಾವೇಶದ ಸಂದರ್ಭದಲ್ಲಿ ಈ ವಿಷಯವು ಬೆಳಕಿಗೆ ಬಂದಿತ್ತು. ಈ ಬಗ್ಗೆ ಆ ಪ್ರದೇಶದ ಪ್ರಬಲ ಸಮುದಾಯಗಳೊಂದಿಗಿನ ಸಭೆಗಳನ್ನು ನಡೆಸಿದ ನಂತರ ಈ ಐತಿಹಾಸಿಕ ಕಾರ್ಯ ನಡೆದಿದೆ. ಆದಾಗ್ಯೂ, ಗ್ರಾಮದಲ್ಲಿ ೧೨ ಪ್ರಬಲ ಗುಂಪುಗಳ ತೀವ್ರ ವಿರೋಧದಿಂದಾಗಿ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಯಾವುದೇ ಅಹಿತಕರ […]

Advertisement

Wordpress Social Share Plugin powered by Ultimatelysocial