ಅವಳಿ ಮಕ್ಕಳಿಗೆ ಜನ್ಮ ನೀಡಿದ ‘ನಟಿ ಅಮೂಲ್ಯ’ | Actress Amulya |

ಬೆಂಗಳೂರು: ಚೆಲುವಿನ ಚಿತ್ತಾರದ ನಟಿ ಅಮೂಲ್ಯ ಅವರು, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರಡು ಮಕ್ಕಳು ಗಂಡು ಮಕ್ಕಳು ಎಂಬುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ನಟಿ ಅಮೂಲ್ಯ ಪತಿ ಜಗದೀಶ್ ಆರ್ ಚಂದ್ರ, ನಮಗೆ ಅವಳಿ ಮಕ್ಕಳು.

 

ಎರಡೂ ಗಂಡು ಮಕ್ಕಳು. ಅಮ್ಮ, ಮಕ್ಕಳು ಆರಾಮವಾಗಿದ್ದಾರೆ. ಎಲ್ಲರ ಪ್ರೀತಿ, ಹಾರೈಕೆಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

‘ಉಕ್ರೇನ್ ಬಂಕರ್’ನಲ್ಲಿನ ಕರಾಳ ಸತ್ಯ ಬಿಚ್ಚಿಟ್ಟ ‘ರಾಯಚೂರು ವಿದ್ಯಾರ್ಥಿ’.!

ರಾಯಚೂರು: ರಷ್ಯಾದಿಂದ ಉಕ್ರೇನ್ ಮೇಲೆ ಯುದ್ಧ ಸಾರಿದ ನಂತ್ರ, ಉಕ್ರೇನ್ ನಲ್ಲಿ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಭಯ, ಆತಂಕ ಹುಟ್ಟಿಸುತ್ತಿದೆ. ಯುದ್ಧದ ಭೀತಿಯ ನಡುವೆಯ ಉಕ್ರೇನ್ ನಲ್ಲಿ ಸಿಲುಕಿರುವಂತ ಕನ್ನಡಿಗ ವಿದ್ಯಾರ್ಥಿಗಳು ಬಂಕರ್ ನಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಎನ್ನುವ ಬಗ್ಗೆ ಇಂಚಿಂಚೂ ಮಾಹಿತಿಯನ್ನು ರಾಯಚೂರು ವಿದ್ಯಾರ್ಥಿ ಬಿಚ್ಚಿಟ್ಟಿದ್ದಾರೆ. ಅದೇನು ಅಂತ ಮುಂದೆ ಓದಿ..

 

ಈ ಬಗ್ಗೆ ಉಕ್ರೇನ್ ನಲ್ಲಿನ ಬಂಕರ್ ನಲ್ಲಿ ಆಶ್ರಯ ಪಡೆದಿರುವಂತ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ವಿದ್ಯಾರ್ಥಿ ಪ್ರಜ್ವಲ್ ಕುಮಾರ್ ಮಾತನಾಡಿ, ಉಕ್ರೇನ್ ದೇಶದ ಖಾರ್ಕೀವ್ ಗೆ ರಷ್ಯ ಸೇನೆ ನುಗ್ಗಿದೆ. ನಾವು ಸುರಕ್ಷತೆಗಾಗಿ ಬಂಕರ್ ಗಳಲ್ಲಿ ಇದ್ದೇವೆ. ಆದ್ರೇ ಇಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಏನ್ ಮಾಡಬೇಕೋ ಎಂಬುದೇ ತಿಳಿಯುತ್ತಿಲ್ಲ ಎಂದಿದ್ದಾನೆ.

ನಾವು ಗಡಿ ಪ್ರದೇಶದಿಂದ ಸುಮಾರು 1,400 ಕಿಲೋಮೀಟರ್ ದೂರದಲ್ಲಿ ಇದ್ದೇವೆ. ಕ್ಷಣ ಕ್ಷಣಕ್ಕೂ ಗುಂಡಿನ ದಾಳಿ, ಶೆಲ್ ದಾಳಿ, ಬಾಂಬ್ಲ್ ಬ್ಲಾಸ್ಟ್ ಸದ್ದು ನಮ್ಮನ್ನು ನಡುಗಿಸುತ್ತಿದೆ. ಸರಿಯಾಗಿ ನೀರು ಸಿಗ್ತಾ ಇಲ್ಲ, ಊಟವೂ ಇಲ್ಲ. ನಮ್ಮನ್ನು ಆದಷ್ಟು ಬೇಗ ಭಾರತಕ್ಕೆ

ಉಕ್ರೇನ್ ನಲ್ಲಿರುವಂತ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ನಮ್ಮ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಸ್ಥಳಾಂತರಿಸೋದಕ್ಕಾಗಿ ಅರ್ಜಿ ಕೂಡ ತುಂಬಿಸಿಕೊಳ್ಳುತ್ತಿದ್ದಾರೆ. ಆದ್ರೇ ಇಲ್ಲಿಂದ ನಮ್ಮನ್ನು ಕರೆದುಕೊಂಡು ಹೋಗುತ್ತಿಲ್ಲ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಒಂದೇ ವರ್ಷದಲ್ಲಿ ದೇಹದ ಹೆಚ್ಚುವರಿ ತೂಕ ಇಳಿಸಿಕೊಂಡು ಸ್ಲಿಮ್ ಆದ ಪೊಲೀಸರು

Tue Mar 1 , 2022
 ಕೆಎಸ್‌ಆರ್‌ಪಿ (KSRP) ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಅವರು ಪೊಲೀಸರಿಗೆ ತೂಕ ಇಳಿಸಿಕೊಳ್ಳಲು ಸೂಚನೆ ನೀಡಿದ್ದರು. ಅದರಂತೆ ಈಗ ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆಯ ಎರಡು ಸಾವಿರ ಪೊಲೀಸರು (Police) ತೂಕ ಇಳಿಸಿಕೊಂಡು ತೆಳ್ಳಗೆ ಆಗಿದ್ದಾರೆ. ಸುಮಾರು 200 ಮಂದಿ ಪೊಲೀಸರು ವ್ಯಸನ ಮುಕ್ತರಾಗಿದ್ದಾರೆ. ಕೆಎಸ್‌ಆರ್‌ಪಿ ಕಾರ್ಯ ಭಾರ ಹೊತ್ತ ಕೂಡಲೇ ಅಲೋಕ್‌ ಕುಮಾರ್‌ ಅವರು, ಪೊಲೀಸರ ಆರೋಗ್ಯದ (Health) ವಿಚಾರವಾಗಿ ಕಾಳಜಿ […]

Advertisement

Wordpress Social Share Plugin powered by Ultimatelysocial