ಸಂಕ್ರಾಂತಿಗೆ ಭರ್ಜರಿ ಶಾಪಿಂಗ್ ಮಾಡಿದ ಅದಿತಿ ಪ್ರಭುದೇವ

ಸ್ಯಾಂಡಲ್ ವುಡ್  ನ ಜನಪ್ರಿಯ ನಟಿ ಅದಿತಿ ಪ್ರಭುದೇವ್ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಎಂಗೇಜ್ ಆಗಿರೋ ಖುಷಿಯಲ್ಲಿರೋ ಅದಿತಿ ಈ ಬಾರಿ ಹಬ್ಬಕ್ಕೆ ಭರ್ಜರಿಯಾಗಿಯೇ ಶಾಪಿಂಗ್ ಮಾಡಿದ್ದಾರೆ. ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿರೋದಕ್ಕೆ ಅದಿತಿ ಆನ್ ಲೈನ್ ಶಾಪಿಂಗ್  ಮೊರೆ ಹೋಗಿದ್ದಾರೆ. Myntra, Flipkart, Amazon ವೆಬ್ ಸೈಟ್ ಗಳಲ್ಲಿ ಬರ್ತ್ ಡೇ  ಗೆ ಬ್ಯುಟಿಫುಲ್ ಡ್ರೆಸ್ ಖರೀದಿಸಿದ್ದಾರೆ. ಪಿಂಕ್ ಅಂಡ್ ಅರೆಂಜ್ ಬಣ್ಣದ ಅನಾರ್ಕಲಿ ಡ್ರೆಸ್ ನನ್ನು ಹುಟ್ಟು ಹಬ್ಬಕ್ಕೆ ಶಾಪ್ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿದ ಅದಿತಿ ಯಾವ ವರ್ಷ ಕೂಡ ಬರ್ತ ಡೇಗೆ ಅಂತ ಹೊಸ ಬಟ್ಟೆ ಖರೀದಿಸಿಲ್ಲ. ಇದೆ ಮೊದಲು ಅಂತ ಹೇಳಿದ್ದಾರೆ. ಡ್ರೆಸ್ ಗೆ ಮ್ಯಾಚ್ ಆಗೋ ಬೆಲ್ಟ್(belt) ಕೂಡ ಆನ್ ಲೈನ್ ನಲ್ಲೇ ಶಾಪ್ ಮಾಡಿದ್ದಾರೆ.

ಶ್ಯಾನೆ ಟಾಪಾಗಿರೋ ನಮ್ಮ ಅದಿತಿಗೆ ಸೀರೆ ಸಖತ್ ಆಗಿಯೇ ಸೂಟ್ ಆಗುತ್ತೆ. ಹಾಗಾಗಿ ಅದಿತಿ ಹಬ್ಬಕ್ಕೆಂದು ಗ್ರೀನ್ ಕಲರ್ ಸೀರೆಯನ್ನು ಸೆಲೆಕ್ಟ್ ಮಾಡಿದ್ದಾರೆ. ಸಿಂಪಲ್ ಅಂಡ್ ಸೂಪರ್ ಆಗಿರೋ ಈ ಸೀರೆ ಅದಿತಿಗೆ ಸಖತ್ ಇಷ್ಟ ಆಗಿದೆಯಂತೆ. ಹಬ್ಬಕ್ಕೆ ತಂದ ಸೀರೆಯನ್ನೇ ಟಿವಿ ಕಾರ್ಯಕ್ರಮದ ಸಂದರ್ಶನಕ್ಕೆ ಹಾಕಿಕೊಂಡು ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಇಷ್ಟೆ ಅಲ್ಲದೇ ತನ್ನ ಸ್ನೇಹಿತೆ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡಲು ಕುರ್ತಾ ಸೆಟ್ ಖರೀದಿಸಿದ್ದಾರೆ ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ: ಮೂರು ದಿನದಲ್ಲಿ 8ನೇ ರಾಜಿನಾಮೆ!

Thu Jan 13 , 2022
  ಉತ್ತರಪ್ರದೇಶದಲ್ಲಿ ಬಿಜೆಪಿ ಶಾಸಕರ ರಾಜಿನಾಮೆ ಪರ್ವ ಮುಂದುವರೆದಿದೆ. ಇಂದು ಶಿಕೋರಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಮುಕೇಶ್ ವರ್ಮಾ ಮತ್ತು ಸಚಿವ ಧರಂ ಸಿಂಗ್ ಸೈನಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಹಿಂದುಳಿದ ವರ್ಗಗಳು ಮತ್ತು ದಲಿತರ ಬಗ್ಗೆ ಸರ್ಕಾರದಿಂದ ಗೌರವದ ಕೊರತೆಯಿದೆ ಎಂದು ಆರೋಪಿಸಿ ಮುಕೇಶ್ ವರ್ಮಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಮೂರು ದಿನಗಳಲ್ಲಿ ಇಬ್ಬರು ಸಚಿವರು ಹಾಗೂ ಐವರು ಶಾಸಕರು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. […]

Advertisement

Wordpress Social Share Plugin powered by Ultimatelysocial