ಪಟ್ಟಣದ ಅಭಿವೃದ್ಧಿಗೆ 15 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ.

ಪುರಸಭಾ ವ್ಯಾಪ್ತಿಯ 23 ವಾರ್ಡ್ ಗಳಿಗೆ ಹಾಗೂ ಕ್ರೀಡಾಂಗಣ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಬಳಕೆ ಮಾಡಲು ಸರ್ವ ಸದಸ್ಯರಿಂದ ಅನುಮೋದನೆ ನೀಡಿದರು
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣ ಪುರಸಭಾ ಕಚೇರಿಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷೆ ಆಯಿಷಾ ರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ಸಭೆಯಲ್ಲಿ ತಾಲ್ಲೂಕಿನ ಹಾಲಿ ಶಾಸಕ ರಮೇಶ್ ಕುಮಾರ್ ಹಾಜರಿದ್ದು ಪಟ್ಟಣದ ಅಭಿವೃದ್ಧಿಗೆ ಮೀಸಲಿರುವ 15 ಕೋಟಿ ಅನುದಾನವನ್ನು 23 ವಾರ್ಡುಗಳಲ್ಲಿ ಮೂಲಭೂತ ಸಾಲಭ್ಯಗಳಿಗೆ ಕುರಿತು ಸರ್ವ ಸದಸ್ಯರು ಸಭೆಯಲ್ಲಿ ಅನುಮೋದನೆ ನೀಡಿದ್ದು ಪಟ್ಟಣದಲ್ಲಿ ಕುಡಿಯುವ ನೀರಿನ ಅವ್ಯವಸ್ಥೆ ಕುರಿತು ಕೆಲ ಸದಸ್ಯರು ಶಾಸಕರಲ್ಲಿ ಮನವಿ ಮಾಡಿದ್ದು ಶಾಸಕರ ಅನುದಾನದಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸುವ ಭರವಸೆ ನೀಡಲಾಯಿತು ಇನ್ನು ಈ ಸಂದರ್ಭದಲ್ಲಿ ಮಾತನಾಡಿದಂತಹ ಶಾಸಕ ರಮೇಶ್ ಕುಮಾರ್ ಪುರಸಭಾಧ್ಯಕ್ಷರು ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿ ಮಾಡಬೇಕು ಯಾವುದೇ ಕಾರಣಕ್ಕೂ ಸದಸ್ಯರ ಅವಗಣನೆ ಮಾಡಬಾರದು ಎಂದು ಸಲಹೆ ಮಾಡಿದರು ಈ ಸಂದರ್ಭದಲ್ಲಿ 13 ಸದಸ್ಯರು ಕೈ ಎತ್ತುವುದರ ಮೂಲಕ ಪುರಸಭೆ ಕೈಗೊಂಡ ನಿರ್ಣಯಕ್ಕೆ ಬೆಂಬಲ ಸೂಚಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀವೂ ಡ್ರೈವಿಂಗ್ ಲೈಸೆನ್ಸ್ ಪಡೆಯಲಿದ್ದರೆ ಈ ಮಹತ್ವದ ಸುದ್ದಿಯನ್ನು ಓದಿ.

Thu Feb 16 , 2023
  Driving License: ನೀವೂ ಡ್ರೈವಿಂಗ್ ಲೈಸೆನ್ಸ್ ಪಡೆಯಲಿದ್ದರೆ ಈ ಮಹತ್ವದ ಸುದ್ದಿಯನ್ನು ಓದಿ. ಡ್ರೈವಿಂಗ್ ಲೈಸೆನ್ಸ್ (DL) ಮಾಡುವ ನಿಯಮಗಳಲ್ಲಿ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಹೊಸ ನಿಯಮದ ಪ್ರಕಾರ ಈಗ ನೀವು ಚಾಲನಾ ಪರವಾನಗಿಯನ್ನು ಆಧಾರ್ ಕಾರ್ಡ್ ಮಾಡಲಾಗುವ ಜಿಲ್ಲೆಯಲ್ಲಿ ಮಾತ್ರ ಪಡೆಯಬಹುದು. ಇಷ್ಟೇ ಅಲ್ಲ ಹೊಸ ನಿಯಮದ ಪ್ರಕಾರ ಈಗ ಕಲಿಕಾ ಚಾಲನಾ ಪರವಾನಗಿಯನ್ನು ಯಾವ ಜಿಲ್ಲೆಯಿಂದ ಮಾಡಲಾಗುತ್ತದೋ ಆ ಜಿಲ್ಲೆಯನ್ನು ಅಲ್ಲಿಂದ ಕಾಯಂಗೊಳಿಸಬೇಕಾಗುತ್ತದೆ. ಇದಕ್ಕಾಗಿ […]

Advertisement

Wordpress Social Share Plugin powered by Ultimatelysocial