ಅದೃಷ್ಟ ಅಂದ್ರೆ ಇದಪ್ಪಾ..! ಲಾಟರಿಯಲ್ಲಿ ಕೋಟಿ ರೂ. ಗೆದ್ದ ಬಾಣಸಿಗ

ಅಬುಧಾಬಿಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ನಡೆದ ರಾಫೆಲ್​ ಡ್ರಾದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಜಾಕ್​ಪಾಟ್​ ಹೊಡೆದಿದೆ.

ಕಳೆದ 24 ವರ್ಷಗಳಿಂದ ಲಾಟರಿ ಟಿಕೆಟ್​ಗಳನ್ನು ಖರೀದಿಸುತ್ತಿರುವ ಸೈದಾಲಿ ಕಣ್ಣನ್​ 1998ರಲ್ಲಿ ಮೊದಲ ಬಾರಿಗೆ ನಗದು ಬಹುಮಾನವನ್ನು ಗೆದ್ದಿದ್ದರು.

ಇದಾದ ಬಳಿಕ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾದ ಕಣ್ಣನ್​ ಕೊನೆಗೂ 2022ರಲ್ಲಿ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಣ್ಣನ್​ ಟಿಕೆಟ್​ ಖರೀದಿಸಲು ಸಹಾಯ ಮಾಡಿದ ಸ್ನೇಹಿತರ ಗುಂಪಿನೊಂದಿಗೆ ಈ ಬಹುಮಾನದ ಮೊತ್ತವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ಕಣ್ಣನ್​ ಫೆಬ್ರವರಿ 22ರಂದು ಈ ವಿಜೇತ ಲಾಟರಿ ಟಿಕೆಟ್​ನ್ನು ಖರೀದಿಸಿದ್ದರು.

ಕಣ್ಣನ್​ರ ಮತ್ತೊಬ್ಬ ಸ್ನೇಹಿತ ಕೂಡ ಕಣ್ಣನ್​ ಜೊತೆಯಲ್ಲಿ ದಶಕಗಳಿಂದ ಟಿಕೆಟ್ ಖರೀದಿಸುತ್ತಿದ್ದು ಇದೀಗ ಕಣ್ಣನ್​ ಇವರಿಗೂ ಕೂಡ ಹಣದಲ್ಲಿ ಪಾಲು ನೀಡಲಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಕಣ್ಣನ್​ ಸ್ನೇಹಿತ ಮಜೀದ್​, ನಾನು ಕೂಡ ಕಳೆದ 20 ವರ್ಷಗಳಿಂದ ಸೈದಾಲಿ ಜೊತೆಯಲ್ಲಿ ಟಿಕೆಟ್​ ಖರೀದಿಸುತ್ತಿದ್ದೇನೆ, ಸೈದಾಲಿ ನಿಜಕ್ಕೂ ಅದೃಷ್ಟವಂತ. ಆತನ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾದ ಸೈನಿಕರು ಉಕ್ರೇನಿಯನ್ ನಗರಗಳಲ್ಲಿ ಬಾಂಬ್ ದಾಳಿ ನಡೆಸುತ್ತಿದ್ದಾರೆ ಎಂಬುದನ್ನು ನಿರಾಕರಿಸಿದ ರಷ್ಯಾ ಅಧ್ಯಕ್ಷ ಪುಟಿನ್

Sat Mar 5 , 2022
  ಮಾಸ್ಕೋ:ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ರಷ್ಯಾದ ಸೈನಿಕರು ಉಕ್ರೇನಿಯನ್ ನಗರಗಳಲ್ಲಿ ಬಾಂಬ್ ದಾಳಿ ನಡೆಸುತ್ತಿದ್ದಾರೆ ಎಂದು ನಿರಾಕರಿಸಿದ್ದಾರೆ.ಅಂತಹ ಮಾಹಿತಿಯನ್ನು ನಕಲಿ ಎಂದು ತಳ್ಳಿಹಾಕಿದ್ದಾರೆ ಎಂದು ಕ್ರೆಮ್ಲಿನ್ ಶುಕ್ರವಾರ ಹೇಳಿದೆ. ರಷ್ಯಾದ ಬೇಡಿಕೆಗಳನ್ನು ಪೂರೈಸಿದರೆ ಮಾತ್ರ ಉಕ್ರೇನ್‌ನಲ್ಲಿ ಸಂವಾದವು ಸಾಧ್ಯ ಎಂದು ಅವರು ಹೇಳಿದರು. ಪುಟಿನ್ ‘ರಷ್ಯಾ ಉಕ್ರೇನಿಯನ್ ಕಡೆಯೊಂದಿಗೆ ಮತ್ತು ಶಾಂತಿಯನ್ನು ಬಯಸುವ ಪ್ರತಿಯೊಬ್ಬರೊಂದಿಗೆ ಮಾತುಕತೆಗೆ ಮುಕ್ತವಾಗಿದೆ.ಆದರೆ […]

Advertisement

Wordpress Social Share Plugin powered by Ultimatelysocial