ಆಹಾರದಲ್ಲಿ ಪ್ರತಿನಿತ್ಯ ಧಾನ್ಯಗಳ ಬಳಕೆ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ನೋಡಿ;

ನಾವು ಸೇವಿಸುವ ಎಲ್ಲ ಬಗೆಯ ಆಹಾರ  ಪದಾರ್ಥಗಳಲ್ಲಿ ಕಾಳುಗಳಿಗೆ ಹಾಗೂ ಬೇಳೆಗಳಿಗೆ ವಿಶೇಷವಾದ ಸ್ಥಾನಮಾನವಿದೆ. ಏಕೆಂದರೆ ಬೇರೆ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಇವುಗಳಿಂದ ನಮ್ಮ ದೇಹಕ್ಕೆ ಸಿಗುವ ಪೌಷ್ಟಿಕ ಸತ್ವಗಳ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ.

ಮನೆಯಲ್ಲಿ ತಯಾರು ಮಾಡುವ ವಿವಿಧ ಬಗೆಯ ಖಾದ್ಯಗಳಿಗೆ ನಾವು ಬಗೆ ಬಗೆಯ ಬೇಳೆಗಳನ್ನು ಬಳಕೆ ಮಾಡುತ್ತೇವೆ. ಒಂದೊಂದು ಬಗೆಯ ಬೇಳೆ ಕಾಳು ನಮ್ಮ ಆರೋಗ್ಯಕ್ಕೆ ತಮ್ಮದೇ ಆದ ರೀತಿಯಲ್ಲಿ ಒಂದೊಂದು ಬಗೆಯ ಪ್ರಯೋಜನಗಳನ್ನು ಕೊಡುತ್ತಾ ಹೋಗುತ್ತವೆ. ಬೇಳೆಕಾಳುಗಳ ಆರೋಗ್ಯ ಪ್ರಯೋಜನಗಳು ಇವುಗಳಲ್ಲಿ ಕಬ್ಬಿಣ, ಸತು , ವಿಟಮಿನ್, ಸೆಲೆನಿಯಂ  ಮತ್ತು ಕ್ಯಾಲ್ಸಿಯಂ  ಹೀರಿಕೊಳ್ಳುವಿಕೆಗೆ ಸಹಾಯ ಮಾಡುವ ಲೈಸಿಯೆನ್ ನಂತಹ ಅಗತ್ಯ ಅಮೈನೋ ಆಮ್ಲಗಳು ಹೇರಳವಾಗಿವೆ ಮತ್ತು ಹಸಿವನ್ನು ನಿಯಂತ್ರಿಸುತ್ತವೆ. ಹೀಗಾಗಿಯೇ ನಾವು ಮನೆಯಲ್ಲಿ ಮಾಡುವ ಸಾಂಬಾರು, ಪಲ್ಯ, ತಿಂಡಿಗಳಲ್ಲಿ ಧಾನ್ಯಗಳನ್ನ ಬಳಸಲಾಗುತ್ತದೆ.. ಹಾಗಿದ್ರೆ ಯಾವೆಲ್ಲಾ ಧಾನ್ಯಗಳ ಸೇವನೆಯಿಂದ ಯಾವ ರೀತಿಯ ಪ್ರಯೋಜನವಿದೆ ಎಂಬ ಮಾಹಿತಿ ಇಲ್ಲಿದೆ.

1) ಹೆಸರು ಬೇಳೆ:

ಹೆಸರುಬೇಳೆ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದ್ದು ಪ್ರಚೀನ ಆಯುರ್ವೇದದಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ. ಹೆಸರು ಬೇಳೆಯಲ್ಲಿ ಆಂಟಿ ಆಕ್ಸಿಡೆಂಟ್, ಅತಿಸೂಕ್ಷ್ಮ ಜೀವಿ ನಿರೋಧಕ, ಉರಿಯೂತ ನಿವಾರಕ, ಕಿಣ್ವ ಬಳಕೆಯ ಜೀವರಾಸಾಯನಿಕ ಕ್ರಿಯೆ, ಅಧಿಕ ರಕ್ತದೊತ್ತಡ ನಿವಾರಕ, ಮಧುಮೇಹ ನಿವಾರಕ ಮತ್ತು ಕ್ಯಾನ್ಸರ್ ಗಡ್ಡೆ ನಿವಾರಕಗಳು. ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್, ಕರಗುವ ನಾರು ಮತ್ತು ಹೋರಾಡುವ ಗುಣವುಳ್ಳ ಪೋಷಕಾಂಶಗಳಿವೆ.ಹೆಸರುಬೇಳೆಯಲ್ಲಿ ವಿವಿಧ ಖನಿಜಗಳು ಮತ್ತು ಪೋಷಕಾಂಶಗಳಿವೆ. ಪ್ರಮುಖವಾಗಿ ವು ಪೊಟ್ಯಾಶಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ತಾಮ್ರದಂತಹ ಖನಿಜಗಳಿವೆ.

2) ತೊಗರಿಬೇಳೆ:

ತೊಗರಿಬೇಳೆ, ಪ್ರತಿನಿತ್ಯದ ಅಡುಗೆಯಲ್ಲಿ ಅತಿ ಹೆಚ್ಚಾಗಿ ಬಳಸುವ ಬೇಳೆಯಾಗಿದೆ. ತೊಗರೆ ಬೆಳೆಯನ್ನ ಪ್ರೋಟೀನ್‌ನ ಶಕ್ತಿ ಮನೆ ಎಂದು ಕರೆಯುತ್ತಾರೆ. ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳಾದ ಕಬ್ಬಿಣ, ಸತು, ಫೋಲೇಟ್ ಮತ್ತು ಮೆಗ್ನೀಸಿಯಮ್ ಕೂಡ ಕಂಡು ಬರುತ್ತದೆ. ತೊಗರಿ ಬೇಳೆ ಯಲ್ಲಿ ನಾರಿನ ಪ್ರಮಾಣವು ತುಂಬಾ ಹೆಚ್ಚಾಗಿದೆ. ಇದು ಕರಗಬಲ್ಲ ಮತ್ತು ಕರಗದ ನಾರು ಎರಡನ್ನೂ ಹೊಂದಿರುತ್ತದೆ. ಹೀಗಾಗಿಯೇ ಪುಟ್ಟ ಮಕ್ಕಳಿಗೆ ಬೇಳೆ ತೊವ್ವೆ ಮಾಡಿ ನೀಡುತ್ತಾರೆ.

3) ಕಡಲೆ ಕಾಳು:

ದೈಹಿಕವಾಗಿ ದಷ್ಟಪುಷ್ಠರಾಗಲು ಬಯಸಿದ್ದೀರೆ ಚಿಕನ್, ಮಟನ್ , ತತ್ತಿ ತಿನ್ನುವ ಅವಶ್ಯಕತೆಯಲ್ಲ. ಮನೆಯಲ್ಲಿಯೇ ಇರುವ ಕಡಲೆ ಕಾಳನ್ನು ರಾತ್ರಿ ನೆನೆದು ಬೆಳಗ್ಗೆ ಸೇವಿಸಿದರೆ ಸಾಕು ದೈಹಿಕವಾಗಿ ಸ್ಟ್ರಾಂಗ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಡಲೆಗಳಲ್ಲಿ ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಜೀವಸತ್ವಗಳು ಮತ್ತು ಖನಿಜಾಂಶಗಳು ಕಂಡುಬರುತ್ತವೆ. ಇದು ಅನೇಕ ರೋಗಗಳ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ. ಹಾಗೆಯೇ ಇದು ರಕ್ತವನ್ನು ಸ್ವಚ್ಛಗೊಳಿಸುತ್ತದೆ ಮತ್ತು ನಮ್ಮ ಮೆದುಳಿನ ಕ್ರಿಯೆಯನ್ನು ತೀಕ್ಷ್ಣವಾಗಿಸುತ್ತದೆ.

4) ಅಲಸಂದೆ ಕಾಳು:

ಅಲಸಂದೆ ಕಾಳು ಪ್ರೊಟೀನ್ ನಿಂದ ಸಮೃದ್ಧವಾಗಿದ್ದು, 100 ಗ್ರಾಂ ಸರ್ವಿಂಗ್ ನಲ್ಲಿ 25 ಗ್ರಾಂ ಪ್ರೋಟೀನ್ ಇರುತ್ತದೆ. ಇದರೊಂದಿಗೆ, ಇವು ಶಕ್ತಿ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ ನ ಅತ್ಯುತ್ತಮ ಮೂಲವಾಗಿದ್ದು, ಕರುಳಿನ ಆರೋಗ್ಯಕ್ಕೆ ಅಗತ್ಯವಾದ ನಾರನ್ನು ಹೊಂದಿದೆ, ಜೊತೆಗೆ ಕಬ್ಬಿಣ, ಮೆಗ್ನೀಷಿಯಂ, ಕ್ಯಾಲ್ಸಿಯಂ ಹಾಗೂ ರಂಜಕವನ್ನೂ ಹೊಂದಿದೆ. ಅಲಸಂದೆ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ, ಏಕೆಂದರೆ ಇದು ಥಿಯಾಮಿನ್ ಅಥವಾ ವಿಟಮಿನ್ ಬಿ ಯಿಂದ ಸಮೃದ್ಧವಾಗಿದೆ. ಇದರಲ್ಲಿರುವ ಟ್ರಿಪ್ಟೋಫಾನ್ ನಿಂದ ಪ್ರಾಕೃತಿಕ ಒತ್ತಡ, ಆತಂಕ ಮತ್ತು ನಿದ್ರಾಹೀನತೆ ನಿವಾರಕವಾಗಿದೆ. ಇನ್ನು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಕಾಳುಗಳಲ್ಲಿರುವ ಸತುವು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ.

5) ಸೋಯಾ ಬೀನ್:

ಸೋಯಾ ಪ್ರತಿನಿತ್ಯ ನಿಮ್ಮ ಆಹಾರದೊಟ್ಟಿಗಿದ್ದರೆ ಹಲವು ರೋಗಗಳಿಂದ ದೂರವುಳಿದಂತೆ. ಹೇರಳ ಪೋಷಕಾಂಶವಿರುವ ಸೋಯಾದಲ್ಲಿ ದೇಹಕ್ಕೆ ಅಗತ್ಯವಿರುವ ಅನೇಕ ಪ್ರೊಟೀನ್ ಇದೆ. ಮಕ್ಕಳಿಗೆ ದೊಡ್ಡವರಿಗಷ್ಟೇ ಅಲ್ಲ, ವಯೋವೃದ್ಧರಿಗೂ ಸೊಯಾ ಅತ್ಯವಶ್ಯಕ. ಇನ್ನು ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಎ ಜೊತೆಗೆ, ಸೋಯಾಬೀನ್ ಸಾಕಷ್ಟು ಖನಿಜಗಳಲ್ಲಿಯೂ ಕಂಡುಬರುತ್ತದೆ. ಇದಲ್ಲದೆ ಸೋಯಾಬೀನ್ ಮ್ಯಾಂಗನೀಸ್, ರಂಜಕ, ತಾಮ್ರ, ಪೊಟ್ಯಾಸಿಯಮ್, ಸತು, ಸೆಲೆನಿಯಮ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

CONGRESS:ಶಿರಾ ನಗರಸಭೆಯಲ್ಲಿ ಕಾಂಗ್ರೆಸ್‌ಗೆ ಅತಿ ಹೆಚ್ಚು 11 ಸ್ಥಾನ;

Thu Dec 30 , 2021
ಶಿರಾ: ಶಿರಾ ನಗರಸಭೆಯಲ್ಲಿ ಯಾವ ಪಕ್ಷಕ್ಕೂ ಬಹುತ ಸಿಕ್ಕಿಲ್ಲ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರ ಹಿಡಿಯಲು ಕಸರತ್ತು ಆರಂಭವಾಗಿದೆ. ಪಕ್ಷೇತರರು ನಿರ್ಣಾಯಕ ಸ್ಥಾನದಲ್ಲಿ ಇದ್ದಾರೆ. ಒಟ್ಟು 30 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಅತಿ ಹೆಚ್ಚು 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ 7, ಬಿಜೆಪಿ 4 ಹಾಗೂ ಪಕ್ಷೇತರರು 8 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಗುರುವಾರ ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಎಲ್ಲಾ ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದೆ. […]

Advertisement

Wordpress Social Share Plugin powered by Ultimatelysocial