AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ.

ಮದಕರಿ ನಾಯಕ- ಓಬವ್ವ ಅವರನ್ನ ಸ್ಮರಿಸಿ ಭಾಷಣ ಆರಂಭಿಸಿದ ಖರ್ಗೆ

SC- ST ಸಮಾವೇಶದಲ್ಲಿ ಇಷ್ಟು ಸಂಖ್ಯೆಯಲ್ಲಿ ಸೇರಿದ್ದು ಖುಷಿಯಾಗಿದೆ.

ನಮ್ಮ ಪಕ್ಷದ ನಾಯಕರು ವಿಶಿಷ್ಟ ರೀತಿಯಲ್ಲಿ ಸಮಾವೇಶ ಆಯೋಜನೆ ಮಾಡಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಈ ಸಂಘಟನೆ ಬಹಳ ಮುಖ್ಯ.

ಛಿದ್ರ ಛಿದ್ರ ನಮ್ಮ ಸಮಾಜಗಳು ಆದರೆ ನಿಮ್ಮನ್ನ ಕೇಳುವವರಿರಲ್ಲ.

ಒಗ್ಗಟ್ಟು ಇಲ್ಲ ಅಂದರೆ ತುಂಡು ತುಂಡು ಮಾಡಿ, ಡಿವೈಡ್ ಅಂಡ್ ರೂಲ್ ಮಾಡುತ್ತಿದ್ದರು.

ಇದನ್ನ ನೀವು ತಲೆಯಲ್ಲಿ ಇಟ್ಟು ಕೊಳ್ಳಬೇಕು.

ದೇಶದ ಪ್ರಜಾ ತಂತ್ರ ಉಳಿಸಬೇಕು ಎಂಬುದು ನಿಮ್ಮ ಗುರಿ ಆಗಬೇಕು.

ಸಂವಿಧಾನದ ಉಳಿಸುವುದು ನಿಮ್ಮ ಗುರಿ ಆಗಬೇಕು.

ಸಂವಿಧಾನ ದಿಕ್ಕರಿಸಿ ಕೇಂದ್ರ ಸರ್ಕಾರ ಆಡಳಿತ ಮಾಡುವಾಗ ನಿಮಗೇನು ಸಿಗುತ್ತದೆ.

ಹೀಗಾಗಿ ನೀವೆಲ್ಲರೂ ಕೂಡಾ ಒಗ್ಗಟ್ಟಿನಿಂದ ಇರಬೇಕು.

ನೀವು ಎಲ್ಲರೂ ಸೇರಿ, ದೇಶ, ಸಂವಿಧಾನ ರಕ್ಷಣೆ ಮಾಡಬೇಕು.

ರಾಹುಲ್ ಗಾಂಧಿ ಜೊತೆ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಹೋಗಿದ್ದೆ.

ಲಕ್ಷಾಂತರ ಜನರು ಅವರ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ.

ಪಕ್ಷದ ಕಾರ್ಯಕ್ರಮ ಅನುಷ್ಠಾನಕ್ಕೆ ತರಲು ನಾನು ಸೇರಿದ್ದೇನೆ.

ನಿರುದ್ಯೋಗ, ಬೆಲೆ ಏರಿಗೆ, ನೌಕರಿ, ಕುರಿತು ನಮ್ಮ ಹೋರಾಟ ಇದೆ.

ದೇಶದಲ್ಲಿ 30 ಲಕ್ಷ ಹುದ್ದೆ ಸರ್ಕಾರದಲ್ಲಿ ಖಾಲಿ ಇದೆ.

ಪ್ರಧಾನಿ ಮೋದಿ ಅವರು ಅದನ್ನ ಭರ್ತಿ ಮಾಡುತ್ತಿಲ್ಲ.

15 ಲಕ್ಷ ಹುದ್ದೆಗಳು SC- ST ಜನರಿಗೆ ಸಿಗುತ್ತವೆ.

ಬಡವನ ಕೈಯಲ್ಲಿ ಹಣ ಬಂದರೆ ನಮ್ಮ ಆಟ ನಡೆಯಲ್ಲ ಎಂದು ಕೇಂದ್ರ ಹುದ್ದೆಗಳನ್ನ ಭರ್ತಿ ಮಾಡುತ್ತಿಲ್ಲ.

ಕೇವಲ ದಿನಗೂಲಿ ಮೇಲೆ ಹುದ್ದೆಗಳನ್ನ ನೀಡುತ್ತಿದ್ದಾರೆ.

ಇದನ್ನ ನಾವು ಕೇಂದ್ರ ಸರ್ಕಾರಕ್ಕೆ ಪ್ರಶ್ನೇ ಮಾಡಬೇಕು,

ಕೇಂದ್ರ ಸರ್ಕಾರ ಬಾಯಿ ಮುಚ್ಚಿಕೊಂಡು ಕುಳಿತ್ತಿದ್ದಾರೆ.

ಮೋದಿ ಬಂದರೆ ಮೋದಿ ಮೋದಿ, ಷಾ ಬಂದರೆ ಷಾ ಅಂತೀರಾ?

ಇದೆನ್ನೇಲ್ಲಾ ನೀವು ಪ್ರಶ್ನೇ ಮಾಡಬೇಕಿದೆ.

15 ಲಕ್ಷ ಅಕೌಂಟ್ ಗೆ ಹಾಕುತ್ತೇನೆ ಎಂದು ಸುಳ್ಳು ಹೇಳಿದ್ದರು.

SC- ST , ಅಲ್ಪ ಸಂಖ್ಯಾತ ವಿಧ್ಯಾರ್ಥಿಗಳ ವಿಧ್ಯಾರ್ಥಿ ವೇತನ ಮೋದಿ ಬಂದ್ ಮಾಡಿದ್ದಾರೆ.

ಸ್ಕಾಲರ್ ಶಿಪ್ ದುಡ್ಡು ಕೂಡಾ ಬಿಡುಗಡೆ ಆಗುತ್ತಿಲ್ಲ.

ಇದೆಲ್ಲ ಇದ್ದು ಇದಕ್ಕೆ ನಮ್ಮ ಸಮಾಜಗಳು ಯಾಕೆ ಹೋರಾಟ ಮಾಡುತ್ತಿಲ್ಲ.

ಹೀಗಾಗಿ ಒಗ್ಗಟ್ಟಿನಿಂದ ಪ್ರಶ್ನೇ ಮಾಡಬೇಕಿದೆ.

BR ಅಂಬೇಡ್ಕರ್ ಹೋರಾಟ ಮಾಡಿ ಗಾಂಧಿ ಜೊತೆ ಚರ್ಚಿಸಿ ಮೀಸಲಾತಿ ನೀಡಿದ್ದರು.

ಅವರು ಕೊಟ್ಟ ಮೀಸಲಾತಿ ಉಳಿಸಿಕೊಳ್ಳಬೇಕು

ಸ್ವಾತಂತ್ರ್ಯ ಬಳಿಕ ನೆಹರೂ ಕ್ಯಾಬಿನೆಟ್ ನಲ್ಲಿ ಕಾನೂನು ಸಚಿವರಾಗಿ ಸಂವಿಧಾನ ನೀಡಿದ್ದಾರೆ.

ಸಂವಿಧಾನ ಉಳಿಸಿ ಎಂದು ಕರೆ ನೀಡಿದ ಮಲ್ಲಿಕಾರ್ಜುನ ಖರ್ಗೆ.

ಇದಕ್ಕೆಲ್ಲ ರಕ್ಷಣೆಯನ್ನ ಮಾಡುವುದು ನಮ್ಮೆಲ್ಲರ ಜವಬ್ದಾರಿ ಆಗಿದೆ.

ಪ್ರಗತಿಪರ ಚಿಂತಕರು ಸರ್ಕಾರ ವಿರುದ್ದ ಬರೆದರೆ ಜೈಲಿಗೆ ಕಳಿಸುತ್ತಾರೆ.

ಎಷ್ಟೋ ಮಂದಿ ಮಾಧ್ಯಮಗಳು ಮೋದಿ ಬಂದಾಗ ಎಲ್ಲವನ್ನೂ ತೋರಿಸುತ್ತಾರೆ.

ಮಾಲೆ ಹಾಕಿದ್ರು, ಗುಹೆಯಲ್ಲಿ ಕುಳಿತರು ತೋರಿಸುತ್ತಾರೆ

ಗುಜರಾತ್ ನಲ್ಲಿ ಮೋದಿ ನಾನು ಗುಜರಾತ್ ಮಣ್ಣಿನ ಮಗ ಎನ್ನುತ್ತಾರೆ.

ನೀವೆಲ್ಲಾ ಸೇರಿ ನಾವು ಕರ್ನಾಟಕದವರು ತಾನೇ ನೀವು ನಮ್ಮನ್ನ ಎತ್ತಬೇಕಲ್ಲ.

ನಾವು ಕೂಡಾ ಕರ್ನಾಟಕದ ಮಣ್ಣಿನ ಮಕ್ಕಳು ಇದ್ದೇವೆ.

ಗುಜರಾತ್ ನಾಯಕರನ್ನ ನಾವು ತಲೆ ಮೇಲೆ ಇಟ್ಟುಕೊಂಡು ನಡೆಸಿಕೊಂಡಿದ್ದೇವೆ.

ಮಹಾತ್ಮ ಗಾಂಧಿ ಅವರನ್ನು ಮೊದಲಿನ ಸ್ಥಾನ ನೀಡಿದ್ದೇವೆ.

ಸರ್ಧಾರ್ ವಲ್ಲಾಬಾಯ್ ಪಟೇಲ್ ಗುಜರಾತ್ ನವರು.

ಮೋದಿ ಎಲ್ಲಿ ಹೋಗುತ್ತಾರೆ ಅಲ್ಲಿ ಹೊಸ ಹೊಸ ವಿಚಾರ ಹೇಳುತ್ತಾರೆ.

ಬಿಜೆಪಿ ನಾಯಕರು ಏನೂ ಮಾಡುತ್ತಿಲ್ಲ ಮಜಾ ಮಾಡಿಕೊಂಡು ಸುತ್ತಾಡುತ್ತಿದ್ದಾರೆ.

ಕರ್ನಾಟಕ ಒಂದು ಪ್ರಗತಿಪರ ರಾಜ್ಯ

ಬಿಜೆಪಿ ನೇತೃತ್ವದಲ್ಲಿ ಪ್ರಗತಿಪರ ರಾಜ್ಯ ಕೆಟ್ಟು ಹೋಗಿದೆ.

ದರ್ಮ ಧರ್ಮದ ನಡುವೆ ಜಗಳ ಇಟ್ಟಿದ್ದು ಬಿಜೆಪಿ ಅವರು.

ನಾನೂ ನೋಡಿದ ಯಾವುದೇ ಮುಖ್ಯಮಂತ್ರಿ ಕೂಡಾ ಹೀಗಿರಲಿಲ್ಲ.

ದುಡ್ಡೆ ದೊಡ್ಡ ಎಂಬಂತ ವ್ಯವಸ್ಥೆ ಬಿಜೆಪಿ ಸರ್ಕಾರದಲ್ಲಿ ಆಗಿದೆ.

ಅಂತ ಸರ್ಕಾರ ಉಳಿಯಬಾರದು ಎಂದರೆ ನೀವೆಲ್ಲಾ ಒಗಟ್ಟಾಗಬೇಕು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕು

JP ನಡ್ಡಾ ಅವರಿಗೆ ಹಿಮಾಚಲ ಪ್ರದೇಶದಲ್ಲಿ ಸೋಲಾಗಿದೆ.

ಕಾಂಗ್ರೆಸ್ ಪಕ್ಷದ ಹಿಮಾಚಲ ಪ್ರದೇಶದಲ್ಲಿ ಸರ್ಕಾರ ಬಂದಿದೆ.

ಅಲ್ಲಿ ಸಲ್ಲದ JP ನಡ್ಡಾ ಇಲ್ಲಿ ಎಲ್ಲಾ ಕಡೆ ತಿರುಗುತ್ತಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ದೇವರು ಎಂದರೆ ಅದು ಸರ್ವಾಧಿಕಾರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ಕ ರಾಶಿ ಭವಿಷ್ಯ (Monday, January 9, 2023)

Mon Jan 9 , 2023
  ಮನರಂಜನೆ ಮತ್ತು ಮೋಜಿನ ಒಂದು ದಿನ. ಗಡಿಬಿಡಯ ನಿರ್ಧಾರಗಳನ್ನು ಕೈಗೊಳ್ಳಬೇಡಿ – ವಿಶೇಷವಾಗಿ ಪ್ರಮುಖ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾತನಾಡುವಾಗ. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ಪ್ರಣಯಕ್ಕೆ ಒಳ್ಳೆಯ ದಿನ. ಹೆಚ್ಚಿನ ಕೆಲಸದ ಹೊರೆತಾಗಿಯೂ ಇಂದು ಕೆಲಸದ ಸ್ಥಳದಲ್ಲಿ ನಿಮ್ಮಲ್ಲಿ ಶಕ್ತಿಯನ್ನು ನೋಡಬಹುದು. ಇಂದು ನಿಮಗೆ ನೀಡಲಾಗಿರುವ ಕೆಲಸವನ್ನು ನಿರ್ಧರಿಸಿರುವ ಸಮಯಕ್ಕಿಂತ ಮೊದಲೇ ಪೂರೈಸಬಹುದು. ನೀವು ಇಂದು ಪ್ರಯಾಣಿಸುತ್ತಿದ್ದರೆ ನಿಮ್ಮ ಸಾಮಾನಿನ ಬಗ್ಗೆ ಹೆಚ್ಚುವರಿ ಕಾಳಜಿ ತಗೆದುಕೊಳ್ಳಬೇಕಾಗುತ್ತದೆ. […]

Advertisement

Wordpress Social Share Plugin powered by Ultimatelysocial