ಯೋಗದ ಈ ‘ಮುದ್ರೆ’ ತಕ್ಷಣ ದೂರ ಮಾಡುತ್ತೆ ಕೋಪ.

 

ದಲಾದ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ದಿನವಿಡಿ ದುಡಿಯುವ ಜನರು ರಾತ್ರಿಯಾಗ್ತಿದಂತೆ ಒತ್ತಡಕ್ಕೊಳಗಾಗ್ತಾರೆ. ಟೆನ್ಷನ್, ಕಿರಿಕಿರಿ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಮನೆ, ಸ್ನೇಹಿತರೊಂದಿಗೆ ಮುನಿಸು, ಸಣ್ಣ ಸಣ್ಣ ವಿಚಾರಕ್ಕೆ ಕೋಪ ಇಡೀ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಖಿನ್ನತೆ ಸೇರಿದಂತೆ ಮಾನಸಿಕ ಹಾಗೂ ದೈಹಿಕ ಸಮಸ್ಯೆ ಕಾಡಲು ಶುರುವಾಗುತ್ತದೆ.ಆರಂಭದಲ್ಲಿಯೇ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ಯೋಗ ನೆರವಾಗುತ್ತದೆ. ಪ್ರತಿದಿನ ಮಾಡುವ ಕೆಲವೊಂದು ಯೋಗ ಮುದ್ರೆಗಳು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯವಾಗುತ್ತವೆ. ಅವುಗಳಲ್ಲಿ ಶಕ್ತಿ ಮುದ್ರೆ ಕೂಡ ಒಂದು. ಈ ಶಕ್ತಿ ಮುದ್ರೆಗೆ ಕೋಪವನ್ನು ತಕ್ಷಣ ಶಮನ ಮಾಡುವ ಶಕ್ತಿಯಿದೆ.ಶಕ್ತಿ ಮುದ್ರೆಯನ್ನು ವಜ್ರಾಸನ ಭಂಗಿಯಲ್ಲಿ ಕುಳಿತು ಮಾಡಬೇಕು. ಇದು ದೇಹದಲ್ಲಿ ರಕ್ತದ ಸಂಚಲನದ ಮೇಲೆ ಪರಿಣಾಮ ಬೀರಿ, ಮಾನಸಿಕ ಒತ್ತಡ ಕಡಿಮೆಯಾಗುವಂತೆ ಮಾಡುತ್ತದೆ. ಶಕ್ತಿ ಮುದ್ರೆ ದೈಹಿಕ ಶಕ್ತಿ ಮತ್ತು ಮಾನಸಿಕ ಶಕ್ತಿ ಹೆಚ್ಚಿಸುತ್ತದೆ. ನರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ನಕಾರಾತ್ಮಕ ಆಲೋಚನೆಗಳು, ಒತ್ತಡ, ನಿದ್ರಾಹೀನತೆ, ಸ್ಲಿಪ್ ಡಿಸ್ಕ್ ಮತ್ತು ಬೆನ್ನು ನೋವು ರೋಗಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆನ್ಜ್ ಕಾರಿನಿಂದ ಹಿಟ್ ಆಂಡ್ ರನ್ ಪ್ರಕರಣ.

Mon Jan 30 , 2023
ಬೆನ್ಜ್ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ ವ್ಯಕ್ತಿ ಗುರುತು ಪತ್ತೆ‌. ಆರ್ ಟಿ ನಗರ ಚೋಳನಾಯಕನಹಳ್ಳಿ ನಿವಾಸಿ ಡಿ ಎನ್ ವೆಂಕಟೇಶ್ ಮೃತ ವ್ಯಕ್ತಿ. ಗುರುವಾರ ರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ವೆಂಕಟೇಶ್ಗೆ ಡಿಕ್ಕಿ ಹೊಡೆದಿದ್ದ ಬೆನ್ಜ್ ಕಾರು. ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬೆನ್ಜ್ ಕಾರು. ಮಲ್ಲೇಶ್ವರಂನ ತನ್ನ ಅಣ್ಣನ ಮನೆಗೆ ಹೋಗಿ ಬರುತ್ತಿದ್ದ ವೆಂಕಟೇಶ್. ಮೇಖ್ರಿ ಸರ್ಕಲ್ ಬಳಿ ಆಟೋ ಇಳಿದು ಮನೆಗೆ ಹೊರಟಿದ್ದ. ತಡರಾತ್ರಿ ಹೆದ್ದಾರಿ ದಾಟುವಾಗ […]

Advertisement

Wordpress Social Share Plugin powered by Ultimatelysocial