ಫೆಬ್ರವರಿ 6: ವಿಮಾನ ಪ್ರಯಾಣಿಕರಿಗೆ ಸುಲಭ ಮತ್ತು ಹೆಚ್ಚುವರಿ ಸೌಕರ್ಯ!

ನವದೆಹಲಿ, ಫೆಬ್ರವರಿ 6: ವಿಮಾನ ಪ್ರಯಾಣಿಕರಿಗೆ ಸುಲಭ ಮತ್ತು ಹೆಚ್ಚುವರಿ ಸೌಕರ್ಯ ಒದಗಿಸುವ ಸೇವೆಗಳನ್ನು ವಿಸ್ತರಿಸುವ ತನ್ನ ನಿರಂತರ ಪ್ರಯತ್ನದಲ್ಲಿ, ಅತಿಥಿಗಳು ಈಗ ತನ್ನ ಅಧಿಕೃತ ಅಂತರ್ಜಾಲ ತಾಣ ಮತ್ತು ಮೊಬೈಲ್ ಆಯಪ್‌ನಲ್ಲಿ ರೂ 800ನಿಂದ ಆರಂಭವಾಗುವ ಸೇವಾ ಶುಲ್ಕ ಪಾವತಿಸಿ ಲಾಂಜ್ ಸೌಲಭ್ಯಗಳನ್ನು ಮುಂಗಡ ಕಾಯ್ದಿರಿಸಬಹುದಾಗಿದೆ ಎಂದು ಏರ್ ಏಷ್ಯಾ ಇಂಡಿಯಾ ಪ್ರಕಟಿಸಿದೆ.ವಿಮಾನ ಪ್ರಯಾಣದ ಟಿಕೆಟ್ ಬುಕಿಂಗ್ ಮಾಡುವಾಗ ಅಥವಾ ಟಿಕೆಟ್ ಬುಕಿಂಗ್ ನಂತರವೂ ವಿಮಾನಯಾನ ಸಂಸ್ಥೆಯ ಅಂತರ್ಜಾಲ ತಾಣ  ದಲ್ಲಿನ ‘ಮ್ಯಾನೇಜ್’ ವಿಭಾಗಕ್ಕೆ ಲಾಗ್ ಇನ್ ಮಾಡುವ ಮೂಲಕ ಅಥವಾ ಚೆಕ್-ಇನ್ ಸಮಯದಲ್ಲಿ ಏರ್‌ಪೋರ್ಟ್ ಲಾಂಜ್ ಸೇವೆಗಳನ್ನು ಖರೀದಿಸಬಹುದು.ಏರ್‌ಪೋರ್ಟ್ ಲಾಂಜ್ ಸೇವೆಗಳು ಅತಿ ವೇಗದ ವೈ-ಫೈ, ಬಿಸಿ, ಬಿಸಿ ಆಹಾರ ಮತ್ತು ಪಾನೀಯಗಳು, ತಿಂಡಿಗಳು, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು, ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳಿಗಾಗಿ ಚಾರ್ಜಿಂಗ್ ಸ್ಟೇಷನ್‌ಗಳು, ವಾಷ್ ಮತ್ತು ಚೇಂಜ್ ಸೌಲಭ್ಯಗಳು, ವಹಿವಾಟು ಕೇಂದ್ರದ ಸೌಲಭ್ಯಗಳು ಮತ್ತು ಲಾಂಜ್ ಬಾರ್‌ಗಳಂತಹ ಸೌಕರ್ಯಗಳನ್ನು ಪಡೆಯುವುದನ್ನು ವಿಮಾನ ಪ್ರಯಾಣಿಕರಿಗೆ ಅನುಕೂಲತೆ ಒದಗಿಸಿಕೊಡುತ್ತದೆ.ಏರ್‌ಏಷ್ಯಾ ಇಂಡಿಯಾವು ಪ್ರಸ್ತುತ 13 ವಿಮಾನ ನಿಲ್ದಾಣಗಳಲ್ಲಿ ಮತ್ತು ಏರ್‌ಲೈನ್‌ನ ಎಲ್ಲಾ ನಾಲ್ಕು ಕೇಂದ್ರಗಳಲ್ಲಿ ಈ ಸೇವೆ ಒದಗಿಸುತ್ತಿದೆ. ಪ್ರಮುಖ ನಗರಗಳಾದ ಬೆಂಗಳೂರು (ಬಿಎಲ್‌ಆರ್), ಭುವನೇಶ್ವರ (ಬಿಬಿಐ), ಚೆನ್ನೈ (ಎಂಎಎ), ಕೊಚ್ಚಿ (ಸಿಒಕೆ), ದೆಹಲಿ (ಡಿಇಎಲ್), ಗೋವಾ (ಜಿಒಐ), ಗುವಾಹಟಿ (ಜಿಎಯು), ಹೈದರಾಬಾದ್ (ಎಚ್‌ವೈಡಿ), ಜೈಪುರ (ಜೆಎಐ), ಕೋಲ್ಕತ್ತಾ (ಸಿಸಿಯು), ಮುಂಬೈ (ಬಿಒಎಂ), ಪುಣೆ (ಪಿಎನ್‌ಕ್ಯು) ಮತ್ತು ರಾಂಚಿ (ಐಎಕ್ಸ್‌ಆರ್) ವಿಮಾನ ನಿಲ್ದಾಣಗಳಲ್ಲಿ ಲಾಂಜ್ ಸೇವೆಗಳನ್ನು ಒದಗಿಸುತ್ತಿದೆ.ಈ ಹೊಸ ಸೇವೆಯ ಕುರಿತು ಮಾತನಾಡಿದ ಏರ್ ಏಷ್ಯಾ ಇಂಡಿಯಾದ ಮುಖ್ಯ ಮಾರುಕಟ್ಟೆ ಅಧಿಕಾರಿ ಸಿದ್ಧಾರ್ಥ ಬುಟಾಲಿಯಾ ಅವರು, ವಿಮಾನ ನಿಲ್ದಾಣದ ವಿಶ್ರಾಂತಿ ಕೋಣೆಗಳಿಗೆ ಸುಲಭ ಪ್ರವೇಶದ ಸೌಲಭ್ಯ ವಿಸ್ತರಿಸುವುದು ಮತ್ತು ನಮ್ಮ ಅತಿಥಿಗಳಿಗೆ ಈ ಸೌಲಭ್ಯಗಳನ್ನು ಒದಗಿಸುವುದು ಹೆಚ್ಚು ಸಮಗ್ರ ಮತ್ತು ಆಹ್ಲಾದಕರ ಪ್ರಯಾಣದ ಅನುಭವ ಹೆಚ್ಚಿಸಿ ಖಚಿತಪಡಿಸಲಿದೆ. ನವೀನ ಮತ್ತು ಡಿಜಿಟಲ್-ಮೊದಲ ಬ್ರ್ಯಾಂಡ್ ಆಗಿರುವ ಏರ್ ಏಷ್ಯಾ, ತನ್ನ ಸೇವಾ ಅನುಭವವನ್ನು ವಿಶಿಷ್ಟ ಕೊಡುಗೆಗಳೊಂದಿಗೆ ವಿಭಿನ್ನಗೊಳಿಸಲು ನಾವು ಪ್ರತಿ ಅವಕಾಶವನ್ನು ಬಳಸಿಕೊಳ್ಳುತ್ತೇವೆ.ನಾವು ಇತ್ತೀಚೆಗೆ ನಮ್ಮ ಹೊಸ ಡೈನಿಂಗ್ ಬ್ರ್ಯಾಂಡ್ ‘ಗೌರ್‌ಮೈರ್’   ಅನ್ನು ತಾಜಾ, ಬಿಸಿ ಮತ್ತು ಆರೋಗ್ಯಕರ ಊಟಗಳ ವೈವಿಧ್ಯಮಯ ಕೊಡುಗೆಯೊಂದಿಗೆ ಪ್ರಾರಂಭಿಸಿದ್ದೇವೆ. ಆಕಾಶದಲ್ಲಿ 36,000 ಅಡಿಗಳಷ್ಟು ಎತ್ತರದಲ್ಲಿ ಈ ಸೇವೆ ಸಲ್ಲಿಸುತ್ತಿದ್ದೇವೆ. ಇನ್-ಫ್ಲೈಟ್ ಸೇವೆಗಳು ಮತ್ತು ಏರ್‌ಪೋರ್ಟ್ ಲಾಂಜ್‌ಗಳ ಜೊತೆಗೆ, ನಾವು ಫ್ಲೈ ಪೋರ್ಟರ್ ಹೋಮ್‌ನಿಂದ ಏರ್‌ಪೋರ್ಟ್ ಬ್ಯಾಗೇಜ್ ಡೆಲಿವರಿ ಸೇವೆಗಳಂತಹ ಅನೇಕ ನವೀನ ಸೇವೆಗಳನ್ನು ಪರಿಚಯಿಸಿದ್ದೇವೆ. ಅವಿಸ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 ಸಹಭಾಗಿತ್ವದಲ್ಲಿ ಸ್ವಯಂ-ಚಾಲನೆ ಮತ್ತು ಚಾಲಕ ಸಹಿತ ಕಾರ್ ಬಾಡಿಗೆ ಸೇವೆಗಳನ್ನು ಪರಿಚಯಿಸಿದ್ದೇವೆ’ ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ವೈದ್ಯಕೀಯ ತ್ಯಾಜ್ಯದ ಪ್ರವಾಹವು "ಜೌಂಪಿಂಗ್ ದಿ ಗ್ಲೋಬ್" ಎಂದು ಯುಎನ್ ವರದಿ ಎಚ್ಚರಿಸಿದೆ;

Sun Feb 6 , 2022
ಸಾವಿರಾರು ಟನ್‌ಗಳಷ್ಟು ಹೆಚ್ಚುವರಿ ಕಸ – ತಿರಸ್ಕರಿಸಿದ ಸಿರಿಂಜ್‌ಗಳು, ಹಳೆಯ ಪರೀಕ್ಷಾ ಕಿಟ್‌ಗಳು ಮತ್ತು ಬಳಸಿದ ಲಸಿಕೆ ಬಾಟಲುಗಳು – ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ತಗ್ಗಿಸಿದೆ ಮತ್ತು ಮಾನವನ ಆರೋಗ್ಯ ಮತ್ತು ಪರಿಸರ ಎರಡಕ್ಕೂ ಅಪಾಯವನ್ನುಂಟುಮಾಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ವಾರ ಹೇಳಿದೆ. ಯುಎನ್ ತುರ್ತು ಉಪಕ್ರಮದ ಮೂಲಕ ಮಾರ್ಚ್ 2020 ರಿಂದ ನವೆಂಬರ್ 2021 ರವರೆಗೆ ದೇಶಗಳಿಗೆ ವಿತರಿಸಲಾದ ಕರೋನವೈರಸ್ ಪರೀಕ್ಷೆ ಮತ್ತು ವ್ಯಾಕ್ಸಿನೇಷನ್‌ಗಳಿಗಾಗಿ ಅಂದಾಜು […]

Advertisement

Wordpress Social Share Plugin powered by Ultimatelysocial