ಅಕ್ಟೋಬರ್ ಅಂತ್ಯದವರೆಗೆ ಲಂಡನ್ ವಿಮಾನ ನಿಲ್ದಾಣ!

ಬ್ರಿಟಿಷ್ ಏರ್‌ವೇಸ್ (British Airways) ಅಕ್ಟೋಬರ್ ಅಂತ್ಯದವರೆಗೆ ಲಂಡನ್ ವಿಮಾನ ನಿಲ್ದಾಣದಿಂದ (London Airport) ನೂರಾರು ಬೇಸಿಗೆ ವಿಮಾನಗಳನ್ನು ರದ್ದುಗೊಳಿಸುವುದಾಗಿ ತಿಳಿಸಿದೆ. ಪ್ರಯಾಣದ ಅಡೆತಡೆಗಳನ್ನು ಸರಾಗಗೊಳಿಸುವಲ್ಲಿ ಮತ್ತು ನಿಗದಿತ ವಿಮಾನಗಳನ್ನು ಕಡಿತಗೊಳಿಸಲು ಈ ಹಿಂದೆ ಘೋಷಿಸಿದ ಕ್ರಮಗಳು ಸಾಕಾಗುವುದಿಲ್ಲ ಎಂದು ತಿಳಿದುಬಂದ ನಂತರ ಈ ಕ್ರಮಕ್ಕೆ ಮುಂದಾಗಿರುವುದಾಗಿ ತನ್ನ ಹೇಳಿಕೆಯಲ್ಲಿ ಬ್ರಿಟಿಷ್ ಏರ್‌ವೇಸ್ ಕಂಪನಿ (British Airways Company) ತಿಳಿಸಿದೆ.
ಈ ಪ್ರಕಟಣೆಯು ಲಂಡನ್‌ನ ಹೀಥ್ರೂ ಮತ್ತು ಗ್ಯಾಟ್ವಿಕ್ ವಿಮಾನ ನಿಲ್ದಾಣಗಳಿಂದ (London’s Heathrow and Gatwick Airports) ಪ್ರಯಾಣ ಬೆಳೆಸಲು ಯೋಜಿಸುತ್ತಿರುವ ಹತ್ತಾರು ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀರಿದೆ.
ನಿರ್ಗಮನದ ದಿನದಂದುವಿಮಾನಗಳನ್ನು ರದ್ದುಗೊಳಿಸುವುದನ್ನು ತಪ್ಪಿಸಲು ಏಪ್ರಿಲ್ ತಿಂಗಳಿನಿಂದ ಅಕ್ಟೋಬರ್ ವರೆಗೆ ತನ್ನ 10% ವಿಮಾನಗಳನ್ನು ರದ್ದುಗೊಳಿಸುವುದಾಗಿ ಏರ್‌ಲೈನ್ ಘೋಷಿಸಿದೆ. ಪ್ರಯಾಣಿಕರಿಗೆ ಅನಾನುಕೂಲವಾಗುವುದನ್ನು ತಡೆಯಲು ಬ್ರಿಟಿಷ್ ಏರ್‌ಲೈನ್ಸ್ ಗ್ರಾಹಕರಿಗೆ ಮರುಪಾವತಿ ಮತ್ತು ಇತರ ವಿಮಾನಗಳಲ್ಲಿ ಮರುಬುಕಿಂಗ್ ಮಾಡುತ್ತಿದೆ ಎಂದು ವರದಿಗಳು ತಿಳಿಸಿವೆ.
ಬ್ರಿಟಿಷ್ ಏರ್​ವೇಸ್ ಹೇಳೋದೇನು?
ನಮ್ಮ ಬೇಸಿಗೆಯ ವೇಳಾಪಟ್ಟಿಯನ್ನು ಕಡಿಮೆ ಮಾಡಲು ಈ ವರ್ಷದ ಆರಂಭದಲ್ಲಿ ನಾವು ಪೂರ್ವಭಾವಿ ಕ್ರಮವನ್ನು ತೆಗೆದುಕೊಂಡಿದ್ದೇವೆ, ಗ್ರಾಹಕರಿಗೆ ಅವರ ಪ್ರಯಾಣದ ಯೋಜನೆಗಳಲ್ಲಿ ಯಾವುದೇ ಬದಲಾವಣೆಗಳ ಬಗ್ಗೆ ಸಾಧ್ಯವಾದಷ್ಟು ಹೆಚ್ಚಿನ ಸೂಚನೆಯನ್ನು ಒದಗಿಸುತ್ತೇವೆ ಎಂದು ಬ್ರಿಟಿಷ್ ಏರ್ವೇಸ್ ಹೇಳಿದೆ. ಇತ್ತೀಚಿನ ಸುತ್ತಿನ ರದ್ದತಿಯಲ್ಲಿನ ಎಲ್ಲಾ ವಿಮಾನಗಳು ಅಲ್ಪಾವಧಿಯದ್ದಾಗಿರುತ್ತವೆ, ಪ್ರಮುಖ ನಗರ ಮಾರ್ಗಗಳಲ್ಲಿ ಹೆಚ್ಚಿನ ದೈನಂದಿನ ನಿರ್ಗಮನಗಳಿವೆ ಎಂದು ಹೇಳಿದೆ.
ವಿಮಾನ ರದ್ದತಿ ಸಂಖ್ಯೆಯಲ್ಲಿ ಹೆಚ್ಚಳ ಸಾಧ್ಯತೆ
ಎಲ್ಲಾ ವಾಯುಯಾನ ಉದ್ಯಮವು ತನ್ನ ಇತಿಹಾಸದಲ್ಲಿ ಎಂದೂ ಕಂಡರಿಯದ ಅತ್ಯಂತ ಸವಾಲಿನ ಅವಧಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ವಿಷಾದನೀಯವಾಗಿ, ಇನ್ನೂ ಕೆಲವು ಕಡಿತಗಳನ್ನು ಮಾಡುವ ಅವಶ್ಯಕತೆಯಿದೆ ಎಂದು ಏರ್ಲೈನ್ ಕಂಪನಿ ಹೇಳಿದೆ.
ಯುರೋಪ್, ಯುನೈಟೆಡ್ ಸ್ಟೇಟ್ಸ್ ಮತ್ತು ಇತರೆಡೆಗಳಲ್ಲಿ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಲಗೇಜ್ ಹ್ಯಾಂಡ್ಲರ್‌ಗಳಿಂದ ಹಿಡಿದು ಭದ್ರತಾ ಸಿಬ್ಬಂದಿಯ ಕೊರತೆ, ಪ್ರಯಾಣ ರದ್ದತಿ, ಉದ್ಯೋಗಗಳಲ್ಲಿ ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ. ಅನೇಕ ಸ್ಥಳಗಳಲ್ಲಿ ಕರೋನ ವೈರಸ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಪ್ರಯಾಣದ ಬೇಡಿಕೆಯ ಹೆಚ್ಚಳದೊಂದಿಗೆ ಸೇರಿ, ವಿಮಾನ ನಿಲ್ದಾಣಗಳು ಮತ್ತು ವಿಮಾನ ವಿಳಂಬಕ್ಕೆ ಕಾರಣವಾಗಿವೆ.
100,000 ಪ್ರಯಾಣಿಕರ ಮೇಲೆ ಪರಿಣಾಮ
ಪೋರ್ಚುಗಲ್‌ನ ಫಾರೋ ಮತ್ತು ಸ್ಪೇನ್‌ನ ಮಲಗಾ ಸೇರಿದಂತೆ ಜನಪ್ರಿಯ ಸ್ಥಳಗಳಿಗೆ ಭೇಟಿ ನೀಡುವ 100,000 ಕ್ಕೂ ಹೆಚ್ಚು ಪ್ರಯಾಣಿಕರ ಮೇಲೆ ಈ ಪ್ರಕಟಣೆ ಪರಿಣಾಮ ಬೀರುವ ಸಾಧ್ಯತೆಯಿದೆ. ಒಂದಕ್ಕಿಂತ ಹೆಚ್ಚು ದೈನಂದಿನ ನಿರ್ಗಮನವಿರುವ ಮಾರ್ಗಗಳಲ್ಲಿ ಹೆಚ್ಚಿನ ರದ್ದಾದ ವಿಮಾನಗಳು ಅಲ್ಪಾವಧಿಯದ್ದಾಗಿರುತ್ತವೆ ಎಂದು ಏರ್ಲೈನ್ ಕಂಪನಿ ಹೇಳಿದೆ. ಹೆಚ್ಚಿನ ಪ್ರಯಾಣಿಕರಿಗೆ ಇದು ವ್ಯತ್ಯಾಸ ಮಾಡುವುದಿಲ್ಲ ಮತ್ತು ಅವರು ಯೋಜಿಸಿದಂತೆ ವಿದೇಶಕ್ಕೆ ಹೋಗಬಹುದು ಎಂದು ವಕ್ತಾರರು ತಿಳಿಸಿದ್ದಾರೆ. ಜೊತೆಗೆ ಸಾಧ್ಯವಾದಷ್ಟು ಬೇಗ ಇನ್ನೊಂದು ಏರ್‌ಲೈನ್‌ನೊಂದಿಗೆ ಹೊಸ ಫ್ಲೈಟ್‌ಗಳಿಗೆ ಮರುಬುಕಿಂಗ್ ಆಯ್ಕೆಗಳನ್ನು ನೀಡಲು ಅಥವಾ ಪೂರ್ಣ ಮರುಪಾವತಿಯನ್ನು ನೀಡಲು ನಾವು ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದೆ.
ಕೋವಿಡ್ ನಂತರ ಹಲವಾರು ಉದ್ಯಮಗಳು ಚೇತರಿಸಿಕೊಳ್ಳುತ್ತಿವೆ. ಹೀಗಾಗಿ ವಿಮಾನ ಸೇರಿ ಸಾರಿಗೆ ಮತ್ತು ಪ್ರವಾಸೋದ್ಯಮ ಸಹ ಪ್ರಗತಿ ಕಾಣುತ್ತಿದೆ. ಪ್ರಯಾಣಿಕರ ಸಂಖ್ಯೆಯು ಮತ್ತೆ ಏರಿಕೆ ಆಗಲು ಪ್ರಾರಂಭಿಸುತ್ತಿದ್ದಂತೆ ವಿಮಾನಯಾನ ಉದ್ಯಮವು ಸಿಬ್ಬಂದಿ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿದೆ. ನಿರ್ಗಮನದ ದಿನದಂದು ವಿಮಾನಗಳ ಬುಕ್ಕಿಂಗ್ ರದ್ದು ಮಾಡುವ ಪ್ರಕ್ರಿಯೆಯನ್ನು ತಡೆಯುವ ಪ್ರಯತ್ನದಲ್ಲಿ ಬ್ರಿಟಿಷ್ ಏರ್ ವೇಸ್ ಈಗಾಗಲೇ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ನಿಗದಿತ 10 ಪ್ರತಿಶತ ವಿಮಾನಗಳನ್ನು ರದ್ದುಗೊಳಿಸಿದೆ. ಆದರೆ ಮುಂದಿನ ದಿನಗಳಲ್ಲಿ ಒಟ್ಟು 13 ಪ್ರತಿಶತ ವಿಮಾನಗಳನ್ನು ರದ್ದುಗೊಳಿಸಬೇಕಾಗಿದೆ ಏಕೆಂದರೆ ಹೆಚ್ಚಿನ ವೇಳಾಪಟ್ಟಿ ಕಡಿತಗಳು ಅಗತ್ಯವಿದೆ ಎಂದು ಏರ್‌ಲೈನ್ ಸಂಸ್ಥೆ ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

İllegal Bet Siteleri Hakkında

Tue Jul 12 , 2022
Indirmeden Veya Kaydetmeden Online Casino Çalışması En Komik Casino Oyunları Nelerdir Content En Büyük Blöf – Maria Konnikova Aptallar Için Kumarhane Kumarı – Kevin Blackwood Bet Giriş Mostbet Hoşgeldin Bonusu Arçelik Servis Hizmeti  Çok Kötü! Para Çekme Yöntemleri Tl Batırdım Sweet Bonanza Yüzünden Hesap Aviator Kazanma Stratejileri Ve Taktikleri Ücretsiz […]

Advertisement

Wordpress Social Share Plugin powered by Ultimatelysocial