ಏರ್‌ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಗ್ಗೆ ನಿಮಗೊತ್ತಾ?

     

ಏರ್‌ಟೆಲ್‌ ಕೇವಲ ಟೆಲಿಕಾಂ ಸೇವೆಗಷ್ಟೇ ಸೀಮಿತವಾಗದೆ ಬ್ಯಾಂಕಿಂಗ್‌ ವ್ಯವಹಾರದಲ್ಲೂ ಸಹ ತನ್ನದೇ ಆದ ಸೇವೆ ನೀಡುತ್ತಾ ಬರುತ್ತಿದೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಈ ರೀತಿಯ ಹಲವಾರು ಪ್ರಯೋಜನಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಿರುವ ಏರ್‌ಟೆಲ್‌ ಇದೀಗ ಮತ್ತೊಂದು ಹೊಸ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿದೆ. ಈ ಮೂಲಕ ಗ್ರಾಹಕರು ಭಾರೀ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದು.ಹೌದು, ಈ ಹಿಂದೆ ಘೋಷಣೆ ಮಾಡಿದ್ದಂತೆ ಏರ್‌ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರ್ಡ್‌ನಲ್ಲಿ ವೆಲ್‌ಕಲ್‌ ಆಫರ್ ಆಗಿ ಗ್ರಾಹಕರು ಭಾರೀ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಏನೆಲ್ಲಾ ಪ್ರಮುಖ ಕೊಡುಗೆ ಲಭ್ಯ?, ಇದು ಎಷ್ಟು ದಿನದ ವರೆಗೆ ಇರಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.ಏರ್‌ಟೆಲ್‌ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಎಂದರೇನು? ಏರ್‌ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಎಂಬುದು ಏರ್‌ಟೆಲ್ ಜೊತೆಗೆ ಕೆಲಸ ಮಾಡುವ ಆಕ್ಸಿಸ್ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಆಗಿದೆ. ಗ್ರಾಹಕರು ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಮೊಬೈಲ್, ವೈ-ಫೈ, ಡಿಟಿಎಚ್, ಏರ್‌ಟೆಲ್ ಬ್ಲಾಕ್ ಮತ್ತು ಯುಟಿಲಿಟಿ ಬಿಲ್ ಪಾವತಿಗಳಲ್ಲಿ ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದು. ಇದಿಷ್ಟೇ ಅಲ್ಲದೆ ಶಾಪಿಂಗ್, ಪ್ರಯಾಣ ಮತ್ತು ಹೆಚ್ಚಿನವುಗಳಿಗೆ ಖರ್ಚು ಮಾಡಲು ಸಹ ಬಹಳ ಅನುಕೂಲ ಮಾಡಿಕೊಟ್ಟಿದೆ. ಈ ಹಿಂದೆಯೇ ಘೋಷಣೆ ಮಾಡಲಾಗಿತ್ತು ಭಾರ್ತಿ ಏರ್‌ಟೆಲ್ ಮತ್ತು ಆಕ್ಸಿಸ್ ಬ್ಯಾಂಕ್ ಈ ಹಿಂದೆ ಭಾರತೀಯ ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಪಾಲುದಾರಿಕೆಯನ್ನು ಘೋಷಿಸಿದ್ದವು. ಅದರಂತೆ ಈಗ ಕಾರ್ಡ್‌ ಅನ್ನು ವಿನ್ಯಾಸಗೊಳಿಸಲಾಗಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಏರ್‌ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ನಮ್ಯತೆಯನ್ನು ನೀಡಲಿದ್ದು, ಇದರೊಂದಿಗೆ ಅನೇಕ ಪ್ರಯೋಜನ ಸಿಗಲಿದೆ.ವೆಲ್‌ಕಮ್‌ ಆಫರ್‌ ಏನು? ಹೊಸದಾಗಿ ಪರಿಚಯಿಸಲಾಗುತ್ತಿರುವ ಈ ಕಾರ್ಡ್‌ನಲ್ಲಿ ಕಾರ್ಡ್ ನೀಡಿದ 30 ದಿನಗಳ ಒಳಗೆ ಮೊದಲ ವಹಿವಾಟಿನ ಮೇಲೆ 500 ರೂ. ಮೌಲ್ಯದ ಅಮೆಜಾನ್‌ ಇ-ವೋಚರ್ ಸಿಗಲಿದೆ. ಜೊತೆಗೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಮ್‌ಎಸ್‌ ಕಳುಹಿಸಿದ ದಿನಾಂಕದಿಂದ 3 ತಿಂಗಳೊಳಗೆ ಗ್ರಾಹಕರು ವೋಚರ್ ಕೋಡ್ ಅನ್ನು ರಿಡೀಮ್ ಮಾಡಿಕೊಳ್ಳಬೇಕು. ಕ್ಯಾಶ್ ಬ್ಯಾಕ್ ಪ್ರಯೋಜನಗಳೇನು? ಏರ್‌ಟೆಲ್ ಮೊಬೈಲ್, ಬ್ರಾಡ್‌ಬ್ಯಾಂಡ್, ವೈ-ಫೈ ಮತ್ತು ಡಿಟಿಎಚ್ ಬಿಲ್ ಪಾವತಿ ಇತ್ಯಾದಿಗಳಲ್ಲಿ 25% ಕ್ಯಾಶ್ ಬ್ಯಾಕ್ ಇರಲಿದೆ. ಜೊತೆಗೆ ಪ್ರತಿ ತಿಂಗಳು ರೂ 300 ವರೆಗೆ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶ ಸಹ ಇದರಲ್ಲಿದ್ದು, ವಿದ್ಯುತ್, ಗ್ಯಾಸ್, ಇತ್ಯಾದಿ ಯುಟಿಲಿಟಿ ಬಿಲ್ ಪಾವತಿಗಳ ಮೇಲೆ 10% ಕ್ಯಾಶ್ ಬ್ಯಾಕ್ ಲಭ್ಯವಾಗುತ್ತದೆ. ಹಾಗೆಯೇ ಪ್ರತಿ ತಿಂಗಳು 300ರೂ. ವರೆಗೆ ಕ್ಯಾಶ್ ಬ್ಯಾಕ್ ಸಿಗಲಿದ್ದು, ಇದನ್ನು ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಪಾವತಿ ಮಾಡಲು ಅನುವು ಮಾಡಿಕೊಡಲಾಗಿದೆ.ನಿಮಗೂ ಈ ಕಾರ್ಡ್‌ ಬೇಕೆ? ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ನೀವು ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಆಕ್ಸಿಸ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಥವಾ ಹತ್ತಿರದ ಶಾಖೆಗೆ ಭೇಟಿ ನೀಡಿ ಈ ಕಾರ್ಡ್‌ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಗಮನಿಸಬೇಕಾದ ಮಾಹಿತಿ ಏನೆಂದರೆ ಜನವರಿ 31, 2023 ರವರೆಗೆ ಪಡೆದುಕೊಳ್ಳುವವರು ಮೊದಲ ವರ್ಷ ಉಚಿತವಾಗಿ ಬಳಕೆ ಮಾಡಬಹುದು. ಎರಡನೇ ವರ್ಷದಿಂದ 2 ಲಕ್ಷಕ್ಕಿಂತ ಹೆಚ್ಚಿನ ಖರೀದಿ ಮಾಡಿದರೆ 500 ರೂ. ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.ಇದಿಷ್ಟೇ ಅಲ್ಲದೆ ಜೊಮೊಟೊ, ಸ್ವಿಗ್ಗಿ ಹಾಗೂ ಬಿಗ್‌ ಬಾಸ್ಕೆಟ್‌ ಮೂಲಕ ಖರೀದಿ ಮಾಡಿದರೆ 10% ಕ್ಯಾಶ್ ಬ್ಯಾಕ್ ಸಹ ಸಿಗಲಿದ್ದು, ಈ ಮೂಲಕ ಪ್ರತಿ ತಿಂಗಳು 500 ರೂ. ವರೆಗೆ ಕ್ಯಾಶ್ ಬ್ಯಾಕ್‌ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಇತರ ಖರ್ಚುಗಳ ಮೇಲೆ 1% ಅನಿಯಮಿತ ಕ್ಯಾಶ್ ಬ್ಯಾಕ್‌ ಸಾಮಾನ್ಯವಾಗಿ ಸಿಗಲಿದೆ.ಕಾಂಪ್ಲಿಮೆಂಟರಿ ಲೌಂಜ್ ಪ್ರವೇಶ, ಇಂಧನ ತುಂಬಿಸಿಕೊಳ್ಳಲು ಅವಕಾಶ ಆಯ್ದ ದೇಶೀಯ ವಿಮಾನ ನಿಲ್ದಾಣಗಳಲ್ಲಿ ಪ್ರತಿ ಕ್ಯಾಲೆಂಡರ್ ವರ್ಷಕ್ಕೆ 4 ಕಾಂಪ್ಲಿಮೆಂಟರಿ ಲೌಂಜ್ ಭೇಟಿಗೆ ಅವಕಾಶ ನೀಡಲಾಗಿದ್ದು, ಇದರೊಂದಿಗೆ ಭಾರತದಾದ್ಯಂತ ಎಲ್ಲಾ ಇಂಧನ ಕೇಂದ್ರಗಳಲ್ಲಿ ಪ್ರತಿ ತಿಂಗಳು 500 ರೂಪಾಯಿಗಳವರೆಗೆ 1% ಇಂಧನ ಹೆಚ್ಚುವರಿ ಶುಲ್ಕವನ್ನು ಪಡೆದುಕೊಳ್ಳಬಹುದು. ಈ ಆಫರ್‌ ಜೊತೆಗೆ 4000+ ರೆಸ್ಟೋರೆಂಟ್‌ಗಳಲ್ಲಿ 20 ಪ್ರತಿಶತದಷ್ಟು ರಿಯಾಯಿತಿ ಸಿಗಲಿದ್ದು, ಗ್ರಾಹಕರು ಫುಲ್‌ ಖುಷ್‌ ಆಗಲಿದ್ದಾರೆ.ನಿಮಗೂ ಈ ಕಾರ್ಡ್‌ ಬೇಕೆ? ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ನೀವು ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಆಕ್ಸಿಸ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಥವಾ ಹತ್ತಿರದ ಶಾಖೆಗೆ ಭೇಟಿ ನೀಡಿ ಈ ಕಾರ್ಡ್‌ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಗಮನಿಸಬೇಕಾದ ಮಾಹಿತಿ ಏನೆಂದರೆ ಜನವರಿ 31, 2023 ರವರೆಗೆ ಪಡೆದುಕೊಳ್ಳುವವರು ಮೊದಲ ವರ್ಷ ಉಚಿತವಾಗಿ ಬಳಕೆ ಮಾಡಬಹುದು. ಎರಡನೇ ವರ್ಷದಿಂದ 2 ಲಕ್ಷಕ್ಕಿಂತ ಹೆಚ್ಚಿನ ಖರೀದಿ ಮಾಡಿದರೆ 500 ರೂ. ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಸ್ವಾಮಿ ವಿವೇಕಾನಂದರ ಮನಮೋಹಕ ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಲಾಗುತ್ತಿದೆ.

Thu Jan 12 , 2023
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಜನವರಿ 12ರಂದು ನಡೆಯಲಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಬಿದರಿ ಕಲೆಯಲ್ಲಿ ಅರಳಿದ ಸ್ವಾಮಿ ವಿವೇಕಾನಂದರ ಮನಮೋಹಕ ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಲಾಗುತ್ತಿದೆ.ಹುಬ್ಬಳ್ಳಿಯಲ್ಲಿ ಸಂಜೆ ನಾಲ್ಕು ಗಂಟೆಗೆ ಯುವ ಜನೋತ್ಸವ ಉದ್ಘಾಟಿಸಲಿರುವ ಪ್ರಧಾನಮಂತ್ರಿಯವರನ್ನು ಜಿಲ್ಲಾಡಳಿತದಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಗುತ್ತಿದೆ. ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮದಿನವೂ ಆಗಿರುವುದರಿಂದ ಅವರ ಸ್ಮರಣಾರ್ಥ ಬಿದರಿ ಕಲೆಯಲ್ಲಿ ನಿರ್ಮಿಸಿದ ಸುಂದರ ಮೂರ್ತಿಯನ್ನು ನೀಡಲಾಗುತ್ತಿದೆ. ಹಾವೇರಿ […]

Advertisement

Wordpress Social Share Plugin powered by Ultimatelysocial