ಸ್ವಾಮಿ ವಿವೇಕಾನಂದರ ಮನಮೋಹಕ ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಲಾಗುತ್ತಿದೆ.

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಜನವರಿ 12ರಂದು ನಡೆಯಲಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಬಿದರಿ ಕಲೆಯಲ್ಲಿ ಅರಳಿದ ಸ್ವಾಮಿ ವಿವೇಕಾನಂದರ ಮನಮೋಹಕ ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಲಾಗುತ್ತಿದೆ.ಹುಬ್ಬಳ್ಳಿಯಲ್ಲಿ ಸಂಜೆ ನಾಲ್ಕು ಗಂಟೆಗೆ ಯುವ ಜನೋತ್ಸವ ಉದ್ಘಾಟಿಸಲಿರುವ ಪ್ರಧಾನಮಂತ್ರಿಯವರನ್ನು ಜಿಲ್ಲಾಡಳಿತದಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಗುತ್ತಿದೆ. ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮದಿನವೂ ಆಗಿರುವುದರಿಂದ ಅವರ ಸ್ಮರಣಾರ್ಥ ಬಿದರಿ ಕಲೆಯಲ್ಲಿ ನಿರ್ಮಿಸಿದ ಸುಂದರ ಮೂರ್ತಿಯನ್ನು ನೀಡಲಾಗುತ್ತಿದೆ.
ಹಾವೇರಿ ಜಿಲ್ಲೆ ಏಲಕ್ಕಿ ಬೆಳೆಯಲು ಪ್ರಸಿದ್ಧಿ ಪಡೆದಿದ್ದು, ಹಾವೇರಿಯಲ್ಲಿ ವಿಶೇಷವಾಗಿ ಹೇಳಕ್ಕೆ ಹಾರವನ್ನು ಸಿದ್ಧಪಡಿಸಲಾಗಿದೆ . ಏಲಕ್ಕಿ ಪೇಟ ಹೊಂದಿರುವ ಇದು ಎಲಕ್ಕಿಯ ಸುವಾಸನೆ ಬೀರುತ್ತದೆ.ಧಾರವಾಡದಲ್ಲಿ ಪ್ರಧಾನಿಗೆ ಹೊದಿಸಲೆಂದೇ ವಿಶೇಷವಾಗಿ ನೇಯಲಾದ ಕಸೂತಿ ಕಲೆ ಹೊಂದಿರುವ ಹ್ಯಾಂಡ್ಲೂಮ್ ಶಾಲು ಮತ್ತು ಧಾರವಾಡ ಜಿಲ್ಲೆಯ ಗರಗ ಹಾಗೂ ಬೆಂಗೇರಿಯಲ್ಲಿ ತಯಾರಿಸಲಾದ ಧ್ವಜವನ್ನು ಟೀಕ್ ವುಡ್ ನಲ್ಲಿ ಧ್ವಜಕ್ಕೆ ಚೌಕಟ್ಟು ಹಾಕಿರುವ ಪ್ರೇಮ ಅನ್ನು ಉಡುಗೊರೆಯಾಗಿ ನೀಡಿ ಗೌರವಿಸಲಾಗುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭೀಕರ ಅಪಘಾತ.

Thu Jan 12 , 2023
ಭೀಕರ ಅಪಘಾತಗಳಲ್ಲಿ ವಿಸ್ಮಯಕಾರಿಯಾಗಿ ಜನರು ಬದುಕಿ ಬಂದಿರೋ ಅನೇಕ ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ರಸ್ತೆಗಳಲ್ಲಿ ಬೈಕ್‌ ಸ್ಟಂಟ್‌ಗಳು ಕೂಡ ಆಗಾಗ ಗಮನ ಸೆಳೆಯುತ್ತವೆ. ಇದೀಗ ಮಾಜಿ ಕ್ರಿಕೆಟಿಗ ಹಾಗೂ ಕಮೆಂಟ್ರೇಟರ್‌ ಆಕಾಶ್‌ ಛೋಪ್ರಾ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿರೋ ವಿಡಿಯೋ ನೋಡಿದ್ರೆ ಎಂಥವರು ಕೂಡ ದಂಗಾಗಿ ಹೋಗ್ತಾರೆ.ಟ್ರಕ್ ಒಂದು ವೇಗವಾಗಿ ಹೋಗುತ್ತಿರುತ್ತದೆ. ಲಾರಿಯ ಪಕ್ಕದಲ್ಲೇ ಹೋಗುತ್ತಿದ್ದ ಕಾರೊಂದನ್ನು ಚಾಲಕ ಕೆಲವೇ ಕ್ಷಣದಲ್ಲಿ ಅದರ ಅಡಿಯಲ್ಲೇ ತಂದು ಬಿಡುತ್ತಾನೆ. ಆ ಕಾರು […]

Advertisement

Wordpress Social Share Plugin powered by Ultimatelysocial