ಅಜಾಜ್‌ ಪಟೇಲ್‌ಗೆ ನ್ಯೂಜಿಲ್ಯಾಂಡ್‌ ಟೆಸ್ಟ್‌ ತಂಡದಲ್ಲಿ ಜಾಗವಿಲ್ಲ!

ಅಜಾಜ್‌ ಪಟೇಲ್‌ಗೆ ನ್ಯೂಜಿಲ್ಯಾಂಡ್‌ ಟೆಸ್ಟ್‌ ತಂಡದಲ್ಲಿ ಜಾಗವಿಲ್ಲ!

ಕ್ರೈಸ್ಟ್‌ಚರ್ಚ್‌: ಭಾರತದೆದುರಿನ ಮುಂಬಯಿ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸಿನ ಎಲ್ಲ 10 ವಿಕೆಟ್‌ ಉರುಳಿಸಿ ಇತಿಹಾಸ ನಿರ್ಮಿಸಿದ ಬೌಲರ್‌ ನ್ಯೂಜಿಲ್ಯಾಂಡಿನ ಅಜಾಜ್‌ ಪಟೇಲ್‌.

ಈ ಸಾಧನೆಗೈದ ವಿಶ್ವದ ಕೇವಲ 3ನೇ ಬೌಲರ್‌ ಎಂಬುದು ಇವರ ಹಿರಿಮೆ.

ಆದರೆ ಈಗಿನ ಸುದ್ದಿ ಏನೆಂದರೆ, ಈ ಅಸಾಮಾನ್ಯ ಬೌಲಿಂಗ್‌ ಸಾಧಕನಿಗೆ ನ್ಯೂಜಿಲ್ಯಾಂಡ್‌ ಟೆಸ್ಟ್‌ ತಂಡದಲ್ಲಿ ಸ್ಥಾನ ಲಭಿಸಿಲ್ಲ!

ಪ್ರವಾಸಿ ಬಾಂಗ್ಲಾ ಎದುರಿನ 2 ಪಂದ್ಯಗಳ ಟೆಸ್ಟ್‌ ಸರಣಿಗಾಗಿ 13 ಸದಸ್ಯರ ತಂಡವನ್ನು ಪ್ರಕಟಿಸಿರುವ ನ್ಯೂಜಿಲ್ಯಾಂಡ್‌, ಇದರಿಂದ ಅಜಾಜ್‌ ಪಟೇಲ್‌ ಅವರನ್ನು ಕೈಬಿಟ್ಟಿದೆ. ಇಲ್ಲಿನ ಟ್ರ್ಯಾಕ್‌ ಸ್ಪಿನ್ನರ್‌ಗಳಿಗೆ ನೆರವಾಗದು ಎಂಬುದು ಆಯ್ಕೆ ಸಮಿತಿ ನೀಡಿದ ಕಾರಣ!.

ತಂಡದಲ್ಲಿ 5 ಮಂದಿ ವೇಗಿಗಳಿದ್ದಾರೆ. ಇವರೆಂದರೆ ಬೌಲ್ಟ್, ಸೌಥಿ, ಜೇಮಿಸನ್‌, ವ್ಯಾಗ್ನರ್‌, ಹೆನ್ರಿ ಮತ್ತು ಆಲ್‌ರೌಂಡರ್‌ ಮಿಚೆಲ್‌. ತಂಡದಲ್ಲಿರುವ ಏಕೈಕ ಸ್ಪಿನ್ನರ್‌ ರಚಿನ್‌ ರವೀಂದ್ರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾವಣಗೆರೆಯಲ್ಲಿ ಭೀಕರ ರಸ್ತೆ ಅಪಘಾತ : ಮೂವರು ಸ್ಥಳದಲ್ಲೇ ಸಾವು

Fri Dec 24 , 2021
ದಾವಣಗೆರೆ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಕ್ಕನಹಳ್ಳಿಯಲ್ಲಿ ನಡೆದಿದೆ. ತಕ್ಕನಹಳ್ಳಿ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹೇಶಪ್ಪ, ಸಂಜು, ಪ್ರಶಾಂತ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ಆನಂದ್ ಗೆ ಗಂಭೀರ ಗಾಯಗೊಂಡಿದ್ದು, […]

Advertisement

Wordpress Social Share Plugin powered by Ultimatelysocial