ವಿವಾಹದ ಬಳಿಕ ಆಲಿಯಾ ಭಟ್​ ಜೊತೆ ರಣಬೀರ್​ ಪೋಸ್​ ನೀಡಿದ್ದಾರೆ.!

 

ಬಾಲಿವುಡ್​ ಸೆಲೆಬ್ರಿಟಿಗಳಾದ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್  ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆರಂಭದಲ್ಲಿ ಇವರ ಮದುವೆ ಬಗ್ಗೆ ಸಿಕ್ಕಾಪಟ್ಟೆ ರಹಸ್ಯ ಕಾಯ್ದುಕೊಳ್ಳಲಾಗಿತ್ತು. ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಅವರು ಇತ್ತೀಚೆಗೆ ತಮ್ಮ ಸಂಬಂಧದ ಬಗ್ಗೆ ಬಾಯಿ ಬಿಟ್ಟಿದ್ದರು. ಆದರೆ ಮದುವೆ ದಿನಾಂಕವನ್ನು ಗೌಪ್ಯವಾಗಿ ಇಟ್ಟಿದ್ದರು. ಅಂತೂ ಇಂತೂ ಏ.14ರಂದು ಆಪ್ತರ ಸಮ್ಮುಖದಲ್ಲಿ ಆಲಿಯಾ ಭಟ್ ​ ಮತ್ತು ರಣಬೀರ್​ ಕಪೂರ್​ ಹಸೆಮಣೆ ಏರಿದರು. ಈ ಜೋಡಿ ಹಕ್ಕಿಗಳು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಒಂದಷ್ಟು ರೊಮ್ಯಾಂಟಿಕ್​ ಫೋಟೋ ಹಂಚಿಕೊಂಡು ಎಲ್ಲರಿಂದ ಆಶೀರ್ವಾದ ಬೇಡಿದ್ದಾರೆ. ಆ ಫೋಟೋಗಳಿಗಿಂತಲೂ ಹೆಚ್ಚಾಗಿ ಮತ್ತೊಂದು ವಿಡಿಯೋ  ವೈರಲ್​ ಆಗಿದೆ. ಮದುವೆ ಬಳಿಕ ಪತ್ನಿ ​ ಅವರನ್ನು ರಣಬೀರ್​ ಕಪೂರ್​ ಎತ್ತಿಕೊಂಡು ಪೋಸ್ ನೀಡಿರುವ ದೃಶ್ಯ ಈ ವಿಡಿಯೋದಲ್ಲಿ ಇದೆ. ಅದನ್ನು ಕಂಡು ಅಭಿಮಾನಿಗಳು ‘ಸಖತ್​ ಕ್ಯೂಟ್​’ ಎಂದು ಕಮೆಂಟ್​ ಮಾಡುತ್ತಿದ್ದಾರೆ. ನವದಂಪತಿಗೆ ನೆಟ್ಟಿಗರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ರಣಬೀರ್​ ಕಪೂರ್​ ಅವರ ಮನೆಯಲ್ಲಿ ಈ ವಿವಾಹ ಸಮಾರಂಭ ನೆರವೇರಿದೆ. ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿ ಆದರು. ಮದುವೆ ವಿಚಾರದಲ್ಲಿ ತೀರಾ ಗುಟ್ಟು ಮಾಡಿದ್ದ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ವಿವಾಹದ ಶಾಸ್ತ್ರಗಳು ಮುಗಿಯುತ್ತಿದ್ದಂತೆಯೇ ಮನೆಯಿಂದ ಹೊರಬಂದು ಮಾಧ್ಯಮದ ಕ್ಯಾಮೆರಾಗಳಿಗೆ ಪೋಸ್​ ನೀಡಿದ್ದಾರೆ. ಮದುವೆ ಆದ ಖುಷಿಯಲ್ಲಿ ಈ ಜೋಡಿ ಹಕ್ಕಿಗಳು ತೇಲುತ್ತಿದ್ದವು.

ಮನೆ ಎದುರು ನೆರೆದಿದ್ದ ಅಭಿಮಾನಿಗಳು ಮತ್ತು ಮಾಧ್ಯಮದವರ ಕಡೆಗೆ ನೋಡಿ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಕೈ ಬೀಸಿದರು. ಎಲ್ಲರ ಕಡೆಗೂ ನಗು ಬೀರುತ್ತ ಪೋಸ್​ ನೀಡಿದರು. ಅಷ್ಟೇ ಅಲ್ಲ, ಭಾರಿ ಖುಷಿಯಲ್ಲಿದ್ದ ರಣಬೀರ್​ ಕಪೂರ್​ ಅವರು ಪತ್ನಿ ಆಲಿಯಾ ಭಟ್​ ಅವರನ್ನು ಎತ್ತಿಕೊಂಡು ಓಡಾಡಿದರು. ಆಗ ಎಲ್ಲಿದ್ದ ಜನರೆಲ್ಲರೂ ಓ.. ಎಂದು ಜೋರಾಗಿ ಕೂಗಿದರು. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ದೃಷ್ಟಿ ಬೀಳಲು ವೈಜ್ಞಾನಿಕ ಕಾರಣಗಳು ಕೂಡ ಇವೆ. ಏನು ಗೊತ್ತ!

Fri Apr 15 , 2022
ದೃಷ್ಟಿ ಬಿದ್ದಿದೆ ಎಂಬುದನ್ನು ನಾವು ಚಿಕ್ಕವರಿರುವಾಗಿನಿಂದಲೂ ಕೇಳಿದ್ದೇವೆ. ಮಕ್ಕಳ ಆರೋಗ್ಯದಲ್ಲಿ ಏರುಪೇರಾದಾಗ ಅಥವಾ ಸದಾ ಅಳ್ತಾ ಇದ್ದರೆ ಮಕ್ಕಳಿಗೆ ದೃಷ್ಟಿ ಬಿದ್ದಿದೆ ಎನ್ನುತ್ತಾರೆ ಹಿರಿಯರು. ಇದೊಂದು ಮೂಢನಂಬಿಕೆ ಅಂತಾ ಕೆಲವರು ನಂಬಿದ್ದಾರೆ. ಆದ್ರೆ ಅದು ತಪ್ಪು. ಈ ದೃಷ್ಟಿ ಬೀಳಲು ವೈಜ್ಞಾನಿಕ ಕಾರಣಗಳು ಕೂಡ ಇವೆ. ವಿಜ್ಞಾನದ ಪ್ರಕಾರ, ದೇಹದಲ್ಲಿ ವಿದ್ಯುತ್ ತರಂಗಗಳಿರುತ್ತವೆ. ಈ ವಿದ್ಯುತ್ ತರಂಗಗಳಿಂದಾಗಿ ಪಾರ್ಶ್ವವಾಯು ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಇದೆ. ದೃಷ್ಟಿಗೆ ಹಾಗೂ ವಿದ್ಯುತ್ ತರಂಗಗಳಿಗೆ […]

Advertisement

Wordpress Social Share Plugin powered by Ultimatelysocial