ಆಲಿಯಾ ಭಟ್

ಪುಟ್ಟ ಹುಡುಗಿಯಂತೆ ಕಳೆ ಕಳೆಯಾಗಿ ನಗು ಹೊರ ಸೂಸುವ ಆಲಿಯಾ ಭಟ್ ಜನಿಸಿದ್ದು 1993 ವರ್ಷದ ಮಾರ್ಚ್ 15 ರಂದು. ಅಪ್ಪ ಪ್ರಖ್ಯಾತ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಮಹೇಶ್ ಭಟ್ ಮತ್ತು ಅಮ್ಮ ನಟಿಯಾಗಿ ಹೆಸರು ಮಾಡಿದ್ದ ಸೋನಿ ರಜ್ದಾನ್.
1999 ವರ್ಷದಲ್ಲಿ ‘ಸಂಘರ್ಷ’ ಎಂಬ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ ಆಲಿಯಾ ಮುಂದೆ 2012 ವರ್ಷದಲ್ಲಿ ಕರಣ್ ಜೋಹರ್ ಅವರ ‘ಸ್ಟೂಡೆಂಟ್ ಆಫ್ ದಿ ಇಯರ್’ನಲ್ಲಿ ಮೊದಲ ಪ್ರಮುಖ ಪಾತ್ರ ನಿರ್ವಹಿಸಿದರು. 2 ಸ್ಟೇಟ್ಸ್, ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ, ಬದ್ರಿನಾಥ್ ಕಿ ದುಲ್ಹಾನಿಯಾ, ಡಿಯರ್ ಜಿಂದಗಿ ಸೇರಿದಂತೆ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಹಲವಾರು ಚಿತ್ರಗಳಲ್ಲಿ ಮಿಂಚಿದರು.
2014ರಲ್ಲಿ, ‘ಹೈವೇ’ ಚಿತ್ರದಲ್ಲಿ ಅಪಹರಣಕ್ಕೊಳಗಾದ ಹುಡುಗಿ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿ ಪಡೆದ ಆಲಿಯಾ, 2016ರಲ್ಲಿ ‘ಉಡ್ತಾ ಪಂಜಾಬ್’, 2018 ರಲ್ಲಿ ‘ರಾಜಿ಼’ ಮತ್ತು 2019 ರಲ್ಲಿ ‘ಗಲ್ಲಿ ಬಾಯ್’ ಚಿತ್ರಗಳಿಗಾಗಿ ಫಿಲಂಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಯವುದರೊಂದಿಗೆ ಪ್ರಶಸ್ತಿಗಳ ಹಿರಿಮೆ, ಜನಪ್ರಿಯತೆ ಮತ್ತು ಸಂಭಾವನೆ ಗಳಿಕೆಗಳ ಏಣಿಯಲ್ಲಿ ಎತ್ತರಕ್ಕೇರಿದ್ದಾರೆ. ಅವರ ಇತ್ತೀಚಿನ ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರದಲ್ಲಿನ ಪಾತ್ರ ನಿರ್ವಹಣೆ ಕೂಡಾ ಅಪಾರ ಮೆಚ್ಚುಗೆ ಗಳಿಸಿದೆ.
ಅಭಿನಯದ ಜೊತೆಗೆ ಗಾಯನದಲ್ಲೂ ಪರಿಶ್ರಮ ಹೊಂದಿರುವ ಈ ಹುಡುಗಿ ತಮ್ಮ ಹಲವಾರು ಚಲನಚಿತ್ರಗಳಿಗೆ ಗಾಯಕಿಯೂ ಆಗಿದ್ದಾರೆ.
ತಮ್ಮದೇ ಆದ ನಿರ್ಮಾಣ ಸಂಸ್ಥೆ, ವಸ್ತು ವಿನ್ಯಾಸ ವ್ಯವಹಾರ, ಜನಪ್ರಿಯ ಕಾರ್ಯಕ್ರಮಗಳಲ್ಲಿ ಭಾಗವಹಿಕೆ, ಪ್ರಾಣಿದಯಾ ಸಂಸ್ಥೆಗಳ ಪ್ರೀತಿ ಮುಂತಾದ ಜನಪ್ರಿಯತೆ ಜೊತೆಗೂಡಿದ ಚಟುವಟಿಕೆಗಳೂ ಇವರಿಗಿವೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊಲೆ ಆರೋಪಿ ಸುಶೀಲ್ ಕುಮಾರ್ ತಿಹಾರ್ ಜೈಲಿನಲ್ಲಿ ಕೈದಿಗಳಿಗೆ ಕುಸ್ತಿ ತರಬೇತಿಯನ್ನು ಪ್ರಾರಂಭ!

Tue Mar 15 , 2022
ಕುಸ್ತಿಪಟು ಸಾಗರ್ ಧನಕರ್ ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಅಪರಾಧ ವಿಭಾಗದಿಂದ ಬಂಧನಕ್ಕೊಳಗಾಗಿದ್ದ ಒಲಿಂಪಿಯನ್ ಸುಶೀಲ್ ಕುಮಾರ್ ಅವರು ಇದೀಗ ತಿಹಾರ್ ಜೈಲು ಸಂಕೀರ್ಣದಲ್ಲಿ ಕುಸ್ತಿ ತರಬೇತಿಯನ್ನು ನೀಡಲು ಪ್ರಾರಂಭಿಸಿದ್ದಾರೆ. ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ತರಬೇತಿ ಪಡೆಯುತ್ತಿದ್ದ ಧನಕರ್ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪ್ರಸ್ತುತ ತಿಹಾರ್‌ನ ಜೈಲು ಸಂಖ್ಯೆ 2 ನಲ್ಲಿರುವ ಸುಶೀಲ್ ಕುಮಾರ್ ಈಗ ಸಹ ಕೈದಿಗಳಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅನಾಮಧೇಯತೆಯನ್ನು […]

Advertisement

Wordpress Social Share Plugin powered by Ultimatelysocial