ಆಮ್‌ಆದ್ಮಿ ಸಿಎಂ ದುಬಾರಿ ಪ್ರಮಾಣ ವಚನ ; 40 ಎಕ್ರೆ ಗೋಧಿ ಬೆಳೆ ನಾಶ!

 

ಚಂಡೀಗಢ: ಆಮ್‌ ಆದ್ಮಿ ಪಕ್ಷದ ಭಗ ವಂತ್‌ ಮಾನ್‌ ಮಾ.16ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರ ಊರಾದ ಖತ್ಕರ್‌ ಕಲಾನ್‌ನಲ್ಲಿ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿ ಸಲಿದ್ದಾರೆ.ಎಂದಿನಂತೆ ರಾಜ ಭವನದಲ್ಲಿ ನಡೆಸದೆ, ಹಳ್ಳಿಯೊಂದರಲ್ಲಿ ನಡೆಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆಂದು ಪಕ್ಷವು ಸರಕಾರದ ಬೊಕ್ಕಸದಿಂದ 2.61 ಕೋಟಿ ರೂ. ಖರ್ಚು ಮಾಡಲಿದೆ.ಗ್ರಾಮದ ರೈತರು 40 ಎಕ್ರೆಗೂ ಹೆಚ್ಚು ಜಾಗದಲ್ಲಿ ಬೆಳೆದಿರುವ ಗೋಧಿಯನ್ನು ಪಾರ್ಕಿಂಗ್‌ ಮಾಡಲೆಂದು ತೆಗೆಸಲಾಗುತ್ತಿದೆ. ಎಕ್ರೆಗೆ 46 ಸಾವಿರ ರೂ. ಪರಿಹಾರವನ್ನು ಕೊಡುವುದಾಗಿ ತಿಳಿಸಲಾಗಿದೆ ಎಂದು ಐಎಎನ್‌ಎಸ್‌ ವರದಿ ಮಾಡಿದೆ.ಕಾರ್ಯಕ್ರಮಕ್ಕೆ ರಾಜ್ಯದ ಜನರೆಲ್ಲರನ್ನೂ ಆಹ್ವಾನಿಸಿರುವ ಭಗವಂತ್‌ ಮಾನ್‌, ಭಗತ್‌ ಸಿಂಗ್‌ಗೆ ಗೌರವವಾಗಿ ಪುರುಷರೆಲ್ಲರೂ ಹಳದಿ ಬಣ್ಣದ ಟರ್ಬನ್‌ ಮತ್ತು ಸ್ತ್ರೀಯರು ಹಳದಿ ಬಣ್ಣದ ಶಾಲು ಧರಿಸಿ ಬನ್ನಿ ಎಂದು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುದ್ಧವನ್ನು ನಿಲ್ಲಿಸಲು ರಷ್ಯಾ ಮತ್ತು ಉಕ್ರೇನ್ ನಡುವೆ ನೇರ ಮಾತುಕತೆಗೆ ಭಾರತ ಕರೆ ನೀಡಿದೆ!

Tue Mar 15 , 2022
ಉಭಯ ದೇಶಗಳ ನಡುವಿನ ಹಗೆತನವನ್ನು ನಿಲ್ಲಿಸಲು ರಷ್ಯಾ ಮತ್ತು ಉಕ್ರೇನ್ ನಡುವೆ ನೇರ ಸಂಪರ್ಕಗಳು ಮತ್ತು ಮಾತುಕತೆಗಳಿಗೆ ಭಾರತ ಸೋಮವಾರ ಕರೆ ನೀಡಿತು ಮತ್ತು ನವದೆಹಲಿಯು ಮಾಸ್ಕೋ ಮತ್ತು ಕೈವ್ ಎರಡರೊಂದಿಗೂ ಸಂಪರ್ಕದಲ್ಲಿದೆ ಮತ್ತು ಮುಂದುವರಿಯುತ್ತದೆ ಎಂದು ಹೇಳಿದೆ. ವಿಶ್ವಸಂಸ್ಥೆಯ ಸನ್ನದು, ಅಂತರಾಷ್ಟ್ರೀಯ ಕಾನೂನು ಮತ್ತು ರಾಜ್ಯಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಅಗತ್ಯವನ್ನು ಭಾರತವು ಒತ್ತಿಹೇಳುವುದನ್ನು ಮುಂದುವರಿಸುತ್ತಿದೆ ಎಂದು ವಿಶ್ವಸಂಸ್ಥೆಯ ರಾಯಭಾರಿ ಆರ್ ರವೀಂದ್ರ ಭಾರತದ ಉಪ […]

Advertisement

Wordpress Social Share Plugin powered by Ultimatelysocial