ಆಮ್ಲೆಟ್ ಮಾಡಿಕೊಡದಿದ್ದಕ್ಕೆ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಶವವನ್ನು ಫ್ಯಾನಿಗೆ ನೇತುಹಾಕಿದ ಪತಿ

ಪಟನಾ: ಆಮ್ಲೆಟ್ ಮಾಡಿಕೊಡಲು ಒಪ್ಪದ ಪತ್ನಿಯನ್ನು ಪತಿರಾಯನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ.

ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಆಕೆಯ ಮೃತದೇಹವನ್ನು ಸೀಲಿಂಗ್​ ಫ್ಯಾನ್​ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿ ಕೊನೆಗೆ ಪತಿರಾಯ ಸಿಕ್ಕಿಬಿದ್ದಿದ್ದಾನೆ.

ಆರೋಪಿಯನ್ನು ಅಜಿತ್​ ಸಿಂಗ್​ ಎಂದು ಗುರುತಿಸಲಾಗಿದೆ. ಈತ ನಿವೃತ್ತ ಸಬ್​ ಇನ್ಸ್​ಪೆಕ್ಟರ್​ ರಾಮ್​ ವಿನಯ್​ ಸಿಂಗ್​ ಪುತ್ರ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ತಂದೆ ರಾಮ್​ ವಿನಯ್​ ನೀಡಿದ ಹೇಳಿಕೆ ಆಧಾರದ ಮೇಲೆ ಅಜಿತ್​ ಸಿಂಗ್​ ವಿರುದ್ಧ ಸೀತಾಮರ್ಹಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಈ ಘಟನೆ ಜಿಲ್ಲೆಯ ಬೆಲ್ಹಿ ಜೈರಾಮ್​ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿರುವ ರಾಮ್​ ವಿನಯ್​ ಸಿಂಗ್, ನನ್ನ ಮಗ ಮದ್ಯ ವ್ಯಸನಿ. ಗುರುವಾರ ಸಂಜೆ ಪಾನಮತ್ತನಾಗಿ ಮನೆಗೆ ಬಂದಿದ್ದ. ಬರುವಾಗ ಜತೆಯಲ್ಲಿ ಮೊಟ್ಟೆಗಳನ್ನು ತಂದಿದ್ದ. ಆಮ್ಲೆಟ್​ ಮಾಡಿಕೊಡುವಂತೆ ಪತ್ನಿ ನೀತು ಸಿಂಗ್​ (30) ಕೇಳಿದ. ಆದರೆ, ಆಕೆ ತಿರಸ್ಕರಿಸಿದಳು. ಗುರುವಾರ ಮೊಟ್ಟೆ ಮಾಡುವಂತಿಲ್ಲ ಎಂದು ಹೇಳಿದಳು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಯಿತು. ಗಂಡನ ಮದ್ಯ ವ್ಯಸನದಿಂದ ನೀತು ಬೇಸತ್ತು ಹೋಗಿದ್ದಳು. ಈ ಹಿಂದೆಯು ಆತನ ಚಟದ ವಿರುದ್ಧ ಆಕೆ ಪ್ರತಿಭಟಿಸಿದ್ದಳು. ಗುರುವಾರವೂ ಅದನ್ನೇ ಮಾಡಿದಳು. ಇದರಿಂದ ಕೋಪಗೊಂಡ ಅಜಿತ್​ ಮೊದಲು ಆಕೆಯನ್ನು ಬೆಡ್​ರೂಮ್​ನಲ್ಲಿ ಮೃಗೀಯವಾಗಿ ಹಲ್ಲೆ ಮಾಡಿದ. ಇದಾದ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಂದು ಸೀಲಿಂಗ್​ ಫ್ಯಾನ್​ಗೆ ನೇತು ಹಾಕಿದ್ದಾನೆ. ಕೆಲವೇ ಸಮಯದಲ್ಲಿ ನೀತು ಕಿರುಚಾಡುವುದು ನಿಂತು ಹೊಗಿದ್ದರಿಂದ ಇಬ್ಬರು ಸಮಾಧಾನಗೊಂಡಿರಬಹುದೆಂದು ಭಾವಿಸಿದೆವು. ಆದರೆ, ಕೆಲವೇ ಕ್ಷಣದಲ್ಲಿ ಅಜಿತ್​ ಮನೆಯಿಂದ ಆಚೆ ಬಂದು ಓಡಿ ಹೋದನು. ಇದಾದ ಬಳಿಕ ಕೋಣೆ ಒಳಗೆ ನೋಡಿದಾಗ ನೀತು ಮೃತದೇಹ ಫ್ಯಾನಿನಲ್ಲಿ ನೇತಾಡುತ್ತಿತ್ತು. ಅದನ್ನು ನೋಡಿ ನಮಗೆ ಆಘಾತವಾಯಿತು ಎಂದು ರಾಮ್​ ವಿನಯ್​ ಸಿಂಗ್ ಹೇಳಿದ್ದಾರೆ.

ಎಫ್​ಐಆರ್​ ನಲ್ಲಿ ವಿನಯ್​ ಸಿಂಗ್​ ಹೇಳಿಕೆಯನ್ನು ದಾಖಲಿಸಲಾಗಿದೆ. ಠಾಣಾಧಿಕಾರಿ ಎಚ್​.ಎಸ್​. ಕುಮಾರ್​ ಎಂಬುವರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಬಲೆ ಬೀಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

WWE ಎಲಿಮಿನೇಷನ್ ಚೇಂಬರ್ 2022 ಫಲಿತಾಂಶಗಳು: ಬ್ರಾಕ್ ಲೆಸ್ನರ್ WWE ಚಾಂಪಿಯನ್‌ಶಿಪ್ ಗೆದ್ದರು,

Sun Feb 20 , 2022
  ಆಕ್ಷನ್-ಪ್ಯಾಕ್ಡ್ WWE ಎಲಿಮಿನೇಷನ್ ಚೇಂಬರ್ ಪೇ-ಪರ್-ವ್ಯೂ ಈವೆಂಟ್‌ನಲ್ಲಿ ಎಂಟು ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ, ಮುಖ್ಯ ಆಕರ್ಷಣೆಗಳೆಂದರೆ ಎಲಿಮಿನೇಷನ್ ಚೇಂಬರ್ ಪಂದ್ಯವು ಬಾಬಿ ಲ್ಯಾಶ್ಲೆ ಅವರ WWE ಶೀರ್ಷಿಕೆ, ರೋಮನ್ಸ್ ರೀನ್ಸ್ ಸ್ಪರ್ಧೆಯು ಗೋಲ್ಡ್ ಬರ್ಗ್ ಮತ್ತು ಬೆಕಿ ಲಿಂಚ್ ಅವರ ವಿಗ್ರಹದೊಂದಿಗೆ ಸ್ಪರ್ಧೆ ಲಿತಾ. ಇತರ ಮ್ಯಾಚ್-ಅಪ್‌ಗಳು ರೇ ಮಿಸ್ಟೀರಿಯೊ ಮತ್ತು ದಿ ಮಿಜ್ ನಡುವೆ, ಸ್ಮ್ಯಾಕ್‌ಡೌನ್ ಟ್ಯಾಗ್ ಟೀಮ್ ಚಾಂಪಿಯನ್‌ಶಿಪ್ ದಿ ಯುಸೋಸ್ ಮತ್ತು ದಿ ವೈಕಿಂಗ್ […]

Advertisement

Wordpress Social Share Plugin powered by Ultimatelysocial