ಸೋತು ಅಮೆರಿಕಕ್ಕೆ ಪಲಾಯನ ಮಾಡಿದ.

 

ಬ್ರಸಿಲಾ: ಬ್ರೆಜಿಲ್‌ನ ಬಲಪಂಥೀಯ ನಾಯಕ, ಮಾಜಿ ಅಧ್ಯಕ್ಷ ಜೈರ್‌ ಬೋಲ್ಸನಾರೊ ಅವರು ಅಮೆರಿಕದ ಫ್ಲೊರಿಡಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಪತ್ನಿ ಹೇಳಿದ್ದಾರೆ. ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಸೇರಿದ್ದಾರೆ. 67 ವರ್ಷದ ಬೋಲ್ಸನಾರೊ ಅವರು, ಫ್ಲೊರಿಡಾದ ಹೊರವಲಯದ ಒರ್ಲಾಂಡೋದಲ್ಲಿರುವ ಅವೆಂಡ್‌ ಹೆಲ್ತ್‌ ಸಲೆಬ್ರೆಷನ್‌ ಅಕ್ಯೂಟ್‌ ಕೇರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಬೋಲ್ಸೊನರೋ ಅವರು ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿದ್ದಾರೆ. 2018ರಲ್ಲಿ ಅವರು ಅವರಿಗೆ ಉಂಟಾದ ಇರಿತದಂಥ ದಾಳಿಯಿಂದಾಗಿ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ’ ಅವರ ಪತ್ನಿ ಮಿಶೆಲ್ ಬೋಲ್ಸನಾರೊ ಇನ್‌ಸ್ಟಾ‌ಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. 2022ರ ವರ್ಷಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಸೋತ ಬಳಿಕ ಬೋಲ್ಸನಾರೊ ಅವರು ಹೊಸ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸುವ ಸಾಂಪ್ರದಾಯವನ್ನೂ ಪಾಲಿಸದೆ ಅಮೆರಿಕಕ್ಕೆ ಪಲಾಯನ ಮಾಡಿದ್ದರು. ಎಡಪಂಥೀಯ ನಾಯಕ ಲೂಯಿಜ್‌ ಇನಾಸಿಯೋ ಲುಲಾ ಡಾ ಸಿಲ್ವಾ ಅವರ ವಿರುದ್ಧ ಸೋಲುಭವಿಸಿದ್ದ ಬೋಲ್ಸನಾರೊ, ಜನವರಿ 1 ರಂದು ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಆದರೆ ಡಿಸೆಂಬರ್ 28 ರಂದೇ ಅವರು ದೇಶ ತೊರೆದು ಅಮೆರಿಕಕ್ಕೆ ಪಲಾಯನ ಮಾಡಿದ್ದರು. ಅವರ ಪಕ್ಷದ ಕಾರ್ಯಕರ್ತರು ಬ್ರೆಜಿಲ್‌ನಲ್ಲಿ ದಾಂಧಲೆ ನಡೆಸುತ್ತಿದ್ದು, ಸಂಸತ್‌ ಕಟ್ಟಡ, ಕೋರ್ಟ್‌ ಕಟ್ಟಡಗಳಿಗೆ ಮುತ್ತಿಗೆ ಹಾಕಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೈದ್ಯೆ ಮನೆಯಲ್ಲಿ ಕೈ -ಕಾಲು ಕಟ್ಟಿ ದರೋಡೆ ಪ್ರಕರಣ.

Tue Jan 10 , 2023
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧನ ಮನೆ ಕೆಲಸದಾಕೆ ತಂದೆ ನಟರಾಜ್ ಎಂಬಾತನಿಂದ ಕೃತ್ಯ ಮಗಳನ್ನು ನೋಡೋಕೆ ಆಗಾಗ ಮನೆಗೆ ಬರ್ತಿದ್ದ ಮನೆಕೆಲಸದಾಕೆ ತಂದೆ ನಟರಾಜ್ ಮನೆಯಲ್ಲಿ ವೈದ್ಯೆ ತಾಯಿ ಒಬ್ಬರೇ ಇದ್ದುದನ್ನು ಗಮನಿಸಿ ಪ್ಲಾನ್ ಮಾಡಿದ್ದ ನಟರಾಜ್‌ ನಾಲ್ವರು ಇತರೆ ಆರೋಪಿಗಳ ಜೊತೆಗೆ ಬಂದು ದರೋಡೆ ಮಾಡಿದ್ದ ಆರೋಪಿಗಳು ಕಳೆದ ಮೂರನೇ ತಾರೀಖಿನಂದು ವೈದ್ಯೆ ವೈಷ್ಣವಿ ಕ್ಲಿನಿಕ್‌ಗೆ ಹೋಗಿದ್ರು, ಈ ವೇಳೆ ವೈದ್ಯೆ ತಾಯಿ ಮನೆಯಲ್ಲಿದ್ರು […]

Advertisement

Wordpress Social Share Plugin powered by Ultimatelysocial