ಕೋಟ್ಯಾಂತರ ಮೌಲ್ಯದ ಆನೆ ದಂತದಿಂದ ತಯಾರಿಸಿದ ಕಲಾಕೃತಿ ಮಾರಾಟ ಯತ್ನ:

ಕೋಟ್ಯಾಂತರ ಮೌಲ್ಯದ ಆನೆ ದಂತದಿಂದ ತಯಾರಿಸಿದ ಕಲಾಕೃತಿ ಮಾರಾಟ ಯತ್ನ: ಐವರು ಆರೋಪಿಗಳನ್ನು ಬಂಧಿಸಿದ ಸಿಐಡಿ ಅರಣ್ಯ ಘಟಕ ಸಿಬ್ಬಂದಿ…

ಆನೆದಂತದಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೆಳಗಾವಿ ಹಾಗೂ ಮಹಾರಾಷ್ಟ್ರ ಮೂಲದ ಐವರು ಆರೋಪಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಸಿ.ಐ.ಡಿ ವಿಶೇಷ ಅರಣ್ಯ ಸಂಚಾರಿ ದಳದ ತಂಡ ಯಶಸ್ವಿಯಾಗಿದೆ.

ಕೊಲ್ಹಾಪುರ ಮೂಲದ ಸಾತ್ ಜಮಾದಾರ್ , ವಿಜಯ ಕುಂಬಾರ, ಸಾಗರ ಪುರಾಣಿಕ, ನಿಪ್ಪಾಣಿಯ ವಿನಾಯಕ ಕಾಂಬ್ಳೆ, ದಾನಾಜಿ ಪಾಟೀಲ್ ಬಂಧಿತ ಆರೋಪಿಗಳಾಗಿದ್ದಾರೆ.‌ ಬಂದಿತರಿಂದ ಆನೆ ದಂತದಿಂದ ತಯಾರಿಸಿದ್ದ 384 ಗ್ರಾಂ ತೂಕದ ಅಲಂಕಾರ ಪೆಟ್ಟಿಗೆ, 112 ಗ್ರಾಂ ತೂಕದ ಕೈಗಡುಗ, 350 ಗ್ರಾಂ ಆಯತಾಕಾರದ ಪೆಟ್ಟಿಗೆ, 279 ಗ್ರಾಂ ಮೊಟ್ಟೆ ಆಕಾರದ ಪೆಟ್ಟಿಗೆ ವಶಕ್ಕೆ ಪಡೆದಿದ್ದಾರೆ. ಇವುಗಳ ಮೌಲ್ಯ ಕೋಟ್ಯಾಂತರ ರೂಪಾಯಿ ಎನ್ನಲಾಗಿದೆ.

ಇನ್ನು ಸಿ.ಐ.ಡಿ ಅರಣ್ಯ ಸಂಚಾರದಳ ತಂಡ ಖಚಿತ ಮಾಹಿತಿ ಮೆರೆಗೆ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ಬಳಿ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದಾಗ, ರಾಜಸ್ಥಾನದ ಒಂದು ಸಂತೆಯಲ್ಲಿ ಸಾಧು ಸಂತರ ಬಳಿ ಖರೀದಿಸಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಇನ್ನು ಈ ಪ್ರಕರಣವನ್ನು ಹುಬ್ಬಳ್ಳಿಯ ಸಿ.ಐ.ಡಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಮುತ್ತಣ ಸರವಗೋಳ, ಸಬ್ ಇನ್ಸ್ಪೆಕ್ಟರ್ ಪ್ರಸಾದ್ ಪಣೇಕರ್, ಎಮ್.ಎ.ಪಾಠಕ್, ಅಶೋಕ ನಾಗರಳ್ಳಿ, ರವೀಂದ್ರ ಗೋನೇನವರ, ಎಸ್.ಹೆಚ್.ಹುಲಗೇರ, ದಿವ್ಯ ನಾಯಕ ತಂಡ ಪತ್ತೆ ಮಾಡಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದೇ ಬಾರಿಗೆ 5 ಮಕ್ಕಳಿಗೆ ಜನ್ಮ ನೀಡಿದ ವಿಶ್ವದ ಮಹಾತಾಯಿ.

Thu Feb 16 , 2023
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಯಾವುದೇ ಮಹಿಳೆಗೆ ತಾಯಿಯಾಗುವುದು ಅತ್ಯಂತ ಸಂತೋಷದಾಯಕ ಭಾವನೆಗಳಲ್ಲಿ ಒಂದಾಗಿದೆ. ಆದರೆ ಒಬ್ಬ ಮಹಿಳೆ ಏಕಕಾಲದಲ್ಲಿ 5 ಮಕ್ಕಳಿಗೆ ಜನ್ಮ ನೀಡಿದರೆ, ಈ ಭಾವನೆಯು ಆಶ್ಚರ್ಯಕರ ಜೊತೆಗೆ ಆಹ್ಲಾದಕರವಾಗಿರುತ್ತದೆ. ಇಂತಹದ್ದೇ ಸುದ್ದಿಯೊಂದು ಪತ್ರಿಕೆಯ ಮುಖಪುಟದಲ್ಲಿ ಸ್ಥಾನ ಪಡೆದಿದೆ. ಸುದ್ದಿ ಸಂಸ್ಥೆ ಎಪಿ ಪ್ರಕಾರ, ‘ಕ್ರಾಕೋವ್ ವಿಶ್ವವಿದ್ಯಾಲಯ’ದ ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ಪೋಲೆಂಡ್ ನಿವಾಸಿಯಾಗಿರುವ 37 ವರ್ಷದ ಮಹಿಳೆ. ಇವರಿಬ್ಬರೂ ಸೇರಿ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದೆ. ಮಹಿಳೆಗೆ ಈಗಾಗಲೇ […]

Advertisement

Wordpress Social Share Plugin powered by Ultimatelysocial