ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಬಳಿ ಹಣ ಕಬಳಿಸಿದ ರಾಮನಗರ ಲೇಡಿ PSI? ದುಡ್ಡು ಕೇಳಿದ್ದಕ್ಕೆ ದರ್ಪದ ಮಾತು

ರಾಮನಗರ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಬಳಿ ರಾಮನಗರದ ಮಹಿಳಾ ಪಿಎಸ್​ಐ ಹಣ ಕಬಳಿಸಿರುವ ಆರೋಪ ವಿರುದ್ಧ ಕೇಳಿಬಂದಿದೆ.ರಾಮನಗರ ಸಂಚಾರಿ ಠಾಣೆ ಪಿಎಸ್‌ಐ ಸರಸ್ವತಿ ಅವರ ವಿರುದ್ಧ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತ ದಂಪತಿ ನೇರ ಆರೋಪ ಮಾಡಿದ್ದಾರೆ.ಏ.9 ರ ರಾತ್ರಿ ನಗರದ ಬಾಲಗೇರಿಗೆ ಹೋಗುವ ಬ್ರಿಡ್ಜ್ ಬಳಿ ದೇವೆಂದ್ರ ಅವರ ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿತ್ತು. ಇದೇ ವೇಳೆಗೆ ಅದೇ ಬ್ರಿಡ್ಜ್ ಬಳಿ ಪಿಎಸ್‌ಐ ಸರಸ್ವತಿ ರೌಂಡ್ಸ್ ಬಂದಿದ್ದರು.ಅಪಘಾತದಲ್ಲಿ ದೇವೆಂದ್ರ ಅವರ ತಲೆಗೆ ಪೆಟ್ಟಾಗಿ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೇಳೆ ವೈದ್ಯರು ದೇವೆಂದ್ರ ಅವರ ಜೇಬಿನಲ್ಲಿದ್ದ 5700 ರೂ. ಹಣ ಹಾಗೂ ಕೆಲ ಚೀಟಿಗಳನ್ನು ಪಿಎಸ್‌ಐ ಸರಸ್ವತಿ ಅವರಿಗೆ ನೀಡಿದ್ದರು. ಈ ವಿಚಾರವನ್ನು ವೈದ್ಯರು ದೇವೆಂದ್ರ ಪತ್ನಿ ಸುಮಾ ಅವರಿಗೆ ತಿಳಿಸಿದ್ದರು.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತ್ರ ಏ.12 ರಂದು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೇವೆಂದ್ರ ಅವರ ಪತ್ನಿ ಸುಮಾ ಪ್ರಕರಣ ದಾಖಲು ಮಾಡಿದ್ದರು. ಈ ವೇಳೆ ನನ್ನ ಪತಿ ಬಳಿ ಇದ್ದ ಹಣ ಹಾಗೂ ಕೆಲ ಚೀಟಿಗಳು ನಿಮ್ಮ ಬಳಿ ಇದಿಯಂತಲ್ಲ ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ದರ್ಪದಿಂದ ಪ್ರತಿಕ್ರಿಯೆ ನೀಡಿದ ಪಿಎಸ್‌ಐ ಸರಸ್ವತಿ ಹಣ ಖರ್ಚಾಗಿದೆ ನೀನೇ ಇನ್ನೂ ಹೆಚ್ಚಿನ ಹಣ ಕೊಡಬೇಕು ಅಂತಾ ಕೇಳಿದ್ದಾರೆ.ಸರಸ್ವತಿಯ ಬಗ್ಗೆ ಸುಮಾ ನೇರ ಆರೋಪ ಮಾಡಿದ್ದಾರೆ. ದೇವೆಂದ್ರ ಅವರು ಇದು ಅಪಘಾತ ಅಲ್ಲ ದರೋಡೆ ಅಂತಲೂ ಆರೋಪ ಮಾಡುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು ಅಂತಾ ದೇವೆಂದ್ರ ದಂಪತಿ ದಿಗ್ವಿಜಯ ನ್ಯೂಸ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೂನ್ 3ಕ್ಕೆ ತೆರೆಮೇಲೆ ಸಂದೀಪ್ ಉನ್ನಿಕೃಷ್ಣನ್ ಜೀವನಚರಿತ್ರೆ ಮೇಜರ್ ರಿಲೀಸ್...

Thu Jun 2 , 2022
ಬೆಂಗಳೂರಿನಲ್ಲಿ ಸಂದೀಪ್ ಅಭಿಮಾನಿಗಳಿಗಾಗಿ ಫ್ರೀ ಶೋ ಆಯೋಜಿಸಿದ್ದ ಚಿತ್ರತಂಡ ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಕುರಿತಾಗಿ ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೇಜರ್ ಸಿನಿಮಾ‌ ಬರ್ತಾ ಇದೆ. ಇದೇ ತಿಂಗಳ ಮೂರಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಹೀಗಾಗಿ ಇಡೀ ತಂಡ ಬೆಂಗಳೂರಿಗೆ ಆಗಮಿಸಿ ಪ್ರಚಾರ ನಡೆಸಿತು.ತೆಲುಗು ನಟ ಅಡಿವಿ ಶೇಷ್ ಸಂದೀಪ್ ಉನ್ನಿಕೃಷ್ಣನ್ ಪಾತ್ರ ನಿರ್ವಹಿಸುವುದರ ಜೊತೆಗೆ ಸಿನಿಮಾಗೆ ಕಥೆ ಕೂಡ ಬರೆದಿದ್ದು, ಪ್ರಿನ್ಸ್ ಮಹೇಶ್ ಬಾಬು […]

Advertisement

Wordpress Social Share Plugin powered by Ultimatelysocial