ಅಪ್ಪು ಸಮಾಧಿ ಮುಂದೆ ಕುಟುಂಬಸ್ಥರ ಕಣ್ಣೀರು:PUNITH RAJKUMAR

ಸ್ಯಾಂಡಲ್‌ವುಡ್‌ನ ಪವರ್​ ಸ್ಟಾರ್​, ಯುವರತ್ನ ಪುನೀತ್​ ರಾಜ್​ಕುಮಾರ್ ​ ನಿಧನರಾಗಿ ಇಂದಿಗೆ ಎರಡು ತಿಂಗಳು ಕಳೆದಿದೆ. ಹೃದಯಾಘಾತದಿಂದ ಪುನೀತ್ ರಾಜಕುಮಾರ್ ಅಕಾಲಿಕ ಮರಣ ಹೊಂದಿ 2ತಿಂಗಳಾದರೂ ಸಹ ಇಂದಿಗೂ ಅವರು ಬದುಕಿಲ್ಲ ಎಂಬ ಸತ್ಯವನ್ನು ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ..

ಹೀಗಾಗಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ತೆರಳಿ ಪುನೀತ್ ರಾಜಕುಮಾರ್ ಅವರ ಸಮಾಧಿ ದರ್ಶನ ಮಾಡುತ್ತಾ ಬಂದಿದ್ದಾರೆ.. ಅಲ್ಲದೇ ಪುನೀತ್ ಸತ್ತು ಇಂದು ಎರಡು ತಿಂಗಳುಗಳು ಕಳೆದಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪುನೀತ್ ಸಮಾಧಿಗೆ ಇಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಅಪ್ಪು ಸಮಾಧಿಗೆ ಪ್ರಾರ್ಥನೆ ಸಲ್ಲಿಸಿದ ಕುಟುಂಬಸ್ಥರು:

ಇಂದು ಬೆಳಗ್ಗೆ ರಾಘವೇಂದ್ರ ರಾಜ್​ಕುಮಾರ್, ಪುನೀತ್ ಪತ್ನಿ ಅಶ್ವಿನಿ, ಮಕ್ಕಳಾದ ದೃತಿ ಪುನೀತ್ ಅವರ ಹಿರಿಯ ಅಕ್ಕ ಲಕ್ಷ್ಮಿ ಹಾಗೂ ಮಾವ ಗೋವಿಂದರಾಜ್, ನಟ ಶಿವರಾಜ್ ಕುಮಾರ್ , ಪ್ರಜ್ವಲ್ ದೇವರಾಜ್ ಸೇರಿದಂತೆ ಕುಟುಂಬದವರು ಹಾಗೂ ಚಿತ್ರರಂಗದ ಅನೇಕ ಗಣ್ಯರು ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿಪ್ರಾರ್ಥನೆ ಸಲ್ಲಿಸಿದ್ದಾರೆ.

ದೇಹದಾನದ ಬಗ್ಗೆ ಜಾಗೃತಿ ಮೂಡಿಸಿದ ರಾಘಣ್ಣ:

ಇನ್ನು ಪುನೀತ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿರುವ ರಾಘವೇಂದ್ರ ರಾಜಕುಮಾರ್ ಅಪ್ಪಾಜಿ ಹುಟ್ಟುಹಬ್ಬದ ದಿನ ನಾನು ಮತ್ತು ಶಿವಣ್ಣ ದೇಹದಾನ ಮಾಡಿದ್ದೇನೆ. ನಮ್ಮ ದೇಹ ಬೆಂಕಿಯಲ್ಲಿ ಅಥವಾ ಮಣ್ಣಲ್ಲಿ ಅಂತ್ಯವಾಗಿ ಹೋಗುವ ಬದಲು, ನಮ್ಮಿಂದ ನಾಲ್ಕು ಜನಕ್ಕೆ ಸಹಾಯ ಆಗುತ್ತೆ ಅನ್ನೋದಾದರೆ ನಾವೇಕೆ ದೇಹದಾನ ಮಾಡಬಾರದು? ನಮ್ಮ ತಂದೆಯವರ ಪ್ರೇರಣೆಯಿಂದ ನಾವು ಇದನ್ನು ಮಾಡಿದ್ದೇವೆ. ಈ ಬಗ್ಗೆ ನೀವು ವಿಚಾರ ಮಾಡಿ. ನಿಮ್ಮ ಮನಸ್ಸಿಗೆ ಸರಿ ಎನಿಸಿ, ನೀವೇ ದೇಹದಾನ ಮಾಡುತ್ತೀರಿ. ಆ ಬಗ್ಗೆ ಯಾರಿಗೂ ನಾವು ಬಲವಂತ ಮಾಡುವುದಿಲ್ಲ ಎಂದು ರಾಘವೇಂದ್ರ ರಾಜ್​ಕುಮಾರ್​ ಮನವಿ ಮಾಡಿಕೊಂಡಿದ್ದಾರೆ .

ಅಪ್ಪು ಹೆಸರಲ್ಲಿ ಪ್ರತಿವಾರ ಅನ್ನಸಂತರ್ಪಣೆ:

ಇನ್ನು ಪುನೀತ್ ರಾಜಕುಮಾರ್ ಅಕಾಲ ಮರಣ ಹೊಂದಿದ ಬಳಿಕ ಪ್ರತಿನಿತ್ಯ ರಾಜ್ಯದ ಒಂದಲ್ಲಾ ಒಂದು ಹಳ್ಳಿ ಗ್ರಾಮಗಳಲ್ಲಿ ಅವರ ಹೆಸರಲ್ಲಿ ಪುಣ್ಯ ಕಾರ್ಯಗಳು ನಡೆಯುತ್ತದೆ. ಅದೆಷ್ಟೋ ಜನರು ಪ್ರತಿನಿತ್ಯ ಪುನೀತ್ ಹೆಸರು ಹೇಳಿಕೊಂಡು ಹಸಿದವರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ಅದೇ ರೀತಿ ಈಗ ರಾಜಕುಮಾರ್ ಕುಟುಂಬದ ಕಟ್ಟ ಅಭಿಮಾನಿಯಾಗಿರುವ ಲಕ್ಷ್ಮೀನಾರಾಯಣ ಎನ್ನುವವರು, ಪ್ರತಿವಾರ ರಾಘಣ್ಣನ ಕುಟುಂಬದ ಜೊತೆ ಸೇರಿ ಅನ್ನಸಂತರ್ಪಣೆ ಮಾಡಲು ಮುಂದಾಗಿದ್ದಾರೆ..
ಅಲ್ಲದೆ ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ಗೊತ್ತಾಗಬಾರದು ಎನ್ನುವಂತೆ ಬದುಕಿದ್ದ ಪುನೀತ್ ರಾಜಕುಮಾರ್ ಅವರು ಎಲ್ಲರಿಗೂ ಸ್ಪೂರ್ತಿ.. ರಾಜಕುಮಾರ್ ಕುಟುಂಬದ ಸಿನಿಮಾಗಳೇ ನಮಗೆ ಸ್ಫೂರ್ತಿ ನೀಡಿದೆ.ಇವರಿಂದಲೇ ಸಮಾಜಸೇವೆಗೆ ನಮಗೆ ಸ್ಫೂರ್ತಿ ಸಿಕ್ಕಿದೆ.. ಹೀಗಾಗಿ ನಾವು ಪುನೀತ್ ಹೆಸರಲ್ಲಿ ಪ್ರತಿ ವಾರ ಅನ್ನಸಂತರ್ಪಣೆ ಮಾಡುತ್ತೇವೆ. ಅವರೇ ನಮ್ಮ ಕುಟುಂಬದ ದೇವರು ಎಂದು ಪುನೀತ್ ಹೆಸರಲ್ಲಿ ಅನ್ನದಾನ ಮಾಡಲು ಮುಂದಾಗಿರುವ ಲಕ್ಷ್ಮೀನಾರಾಯಣ ಎಂಬ ಅಭಿಮಾನಿ, ಪುನೀತ್ ಮೇಲಿನ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.ಪುನೀತ್ ಪ್ರತಿಮೆ ಮನೆಯಂಗಳದಲ್ಲಿ ಸ್ಥಾಪಿಸಿದ ಅಭಿಮಾನಿ:

ಇನ್ನು ಇಂದು ಪುನೀತ್ ಅವರ ಎರಡನೇ ತಿಂಗಳ ಪುಣ್ಯಸ್ಮರಣೆ ಇದ್ದರೆ ಅಭಿಮಾನಿಯೊಬ್ಬ ಪುನೀತ್ ಅವರ ಪ್ರೀತಿಗಾಗಿ ಮನೆಯಂಗಳದಲ್ಲಿ ಸಾವಿರಾರು ರೂಪಾಯಿ ಹಣ ಖರ್ಚುಮಾಡಿ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಿದ್ದಾರೆ.ಕೂಡ್ಲಿಗಿ ತಾಲೂಕಿನ ಸಿದ್ದಾಪುರದ ವಡ್ಡರಹಟ್ಟಿಯಲ್ಲಿ ಆರ್.ಟಿ. ನಾಗರಾಜ ಮತ್ತು ಅವರ ಪತ್ನಿ ಮಲ್ಲಮ್ಮ ಅವರ ಅಭಿಮಾನಕ್ಕೆ ಪುನೀತ್ ರಾಜಕುಮಾರ್ ಅವರು ಪುತ್ಥಳಿ ಸಾಕ್ಷಿಯಾಗಿ ಅನೇಕರ ಗಮನ ಸೆಳೆದಿದೆ. ಈ ದಂಪತಿ ತಮ್ಮ ಮನೆಯಂಗಳದಲ್ಲಿಯೇ ಪುತ್ಥಳಿಯನ್ನು ಅನಾವರಣ ಮಾಡಿ ಕನ್ನಡ ನಾಡು, ನುಡಿ, ರಾಜಕುಮಾರ್ ಕುಟುಂಬ ಮತ್ತು ಪುನೀತ್ ಮೇಲಿನ ಅಭಿಮಾನ – ಪ್ರೀತಿಯನ್ನು ಸಾಬೀತು ಮಾಡಿದ್ದಾರೆ.

 ಪ್ರತಿದಿನ ದಂಪತಿಯಿಂದ ಅಪ್ಪುಗೆ ಮೊದಲ ಪೂಜೆ:

ಇನ್ನು ಇದಿಷ್ಟೇ ಮಾತ್ರವಲ್ಲದೇ ಪುನೀತ್ ರಾಜಕುಮಾರ್ ಮೇಲೆ ಅಪಾರ ಗೌರವ ಹಾಗೂ ಪ್ರೀತಿ ಇಟ್ಟುಕೊಂಡಿದ್ದ ಅಭಿಮಾನಿಗಳು ಒಂದಲ್ಲ ಒಂದು ರೀತಿ ಪುನೀತ್ ರಾಜಕುಮಾರ್ ಅವರನ್ನು ಸದಾ ನೆನೆಯುತ್ತಲೇ ಇದ್ದಾರೆ.. ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳುತ್ತಿರುವ ಅಭಿಮಾನಿಗಳು ಪುನೀತ್ ಭಾವಚಿತ್ರ ಹೊತ್ತು ತೆರಳುತ್ತಿದ್ದರೆ, ಹೊಸ ಜೀವನಕ್ಕೆ ಕಾಲಿಡುತ್ತಿರುವ ನವ ಜೋಡಿಗಳು ಸಹ ಪುನೀತ್ ಭಾವಚಿತ್ರದ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಕರುನಾಡಲ್ಲಿ ಪುನೀತ್ ರಾಜಕುಮಾರ್ ಮಹತ್ವ ಎಂಥದ್ದು ಎಂಬುದನ್ನು ಪ್ರತಿನಿತ್ಯ ಸಾಬೀತು ಮಾಡುತ್ತಲೇ ಇದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

EXAMINATION:ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ ಸಾಧ್ಯತೆ: ಬಿ.ಸಿ.ನಾಗೇಶ್

Wed Dec 29 , 2021
ಬೆಂಗಳೂರು: ಪಾಠಗಳು ಇನ್ನೂ ಪೂರ್ಣಗೊಳ್ಳದ ಕಾರಣ ಮಾರ್ಚ್‌ ತಿಂಗಳಿನಲ್ಲಿ ನಡೆಯಬೇಕಿದ್ದ ದ್ವಿತೀಯ ಪಿಯು ಪರೀಕ್ಷೆಗಳು ಏಪ್ರಿಲ್ ಕೊನೆಯ ವಾರಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಬುಧವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಏಪ್ರಿಲ್ ನಂತರ ಪರೀಕ್ಷೆಗಳು ವಿಳಂಬವಾಗುವುದಿಲ್ಲ. ಏಕೆಂದರೆ, ಪರೀಕ್ಷೆ ವಿಳಂಬವಾಗಿದ್ದೇ ಆದರೆ, ಅದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET), ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ವಿದ್ಯಾರ್ಥಿಗಳ ಇತರ […]

Advertisement

Wordpress Social Share Plugin powered by Ultimatelysocial