ಡಯೆಟ್​​ನಲ್ಲಿರುವಾಗಲೇ ಪದೇ ಪದೇ ಹಸಿವು ಆಗ್ತಿದೆಯಾ?

ತ್ತೀಚಿನ ದಿನಗಳಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಅರಿವು ಹೆಚ್ಚಿದೆ. ಜನರು ಸ್ಥೂಲಕಾಯ ಮತ್ತು ತೂಕ ನಿಯಂತ್ರಣಕ್ಕೆ ಸಾಕಷ್ಟು ಕಸರತ್ತು ಮಾಡುತ್ತಿರುವುದನ್ನು ನೀವು ದೈನಂದಿನ ಜೀವನದಲ್ಲಿ ಕಾಣಬಹುದು. ವೇಟ್ ಲಾಸ್  ತೂಕ ನಿಯಂತ್ರಣ ಇದೆಲ್ಲವೂ ಒಂದು, ಎರಡು ದಿನದ್ದಲ್ಲ.

ನೀವು ನಿರಂತರವಾಗಿ ಮಾಡಬೇಕಾದದ್ದು. ಹೀಗಿರುವಾಗ ಫಿಟ್ ಆಗಿರಲು ಕೆಲವರು ಡಯಟ್ ಮಾಡ್ತಾರೆ. ಇನ್ನು ಕೆಲವರು ವ್ಯಾಯಾಮ ಮಾಡುತ್ತಾರೆ. ಇನ್ನು ಕೆಲವರು ವಾಕಿಂಗ್, ಯೋಗ, ಜಿಮ್ ಹೀಗೆ ಹಲವು ಮಾರ್ಗಗಳ ಮೂಲಕ ತಮ್ಮ ತೂಕ ಕಳೆದುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಸ್ಥೂಲಕಾಯದಿಂದ ವ್ಯಕ್ತಿತ್ವ ಮಂದವಾಗುತ್ತದೆ.
ಫಿಟ್ನೆಸ್ ತುಂಬಾ ಮುಖ್ಯ

ಫಿಟ್ ಆಗಿದ್ದರೆ ಹೆಚ್ಚು ಆಕರ್ಷಕ. ಫಿಟ್ ಮತ್ತು ಆರೋಗ್ಯಕರ ದೇಹ ಸದೃಢ ಜೀವನಕ್ಕೆ ಬೇಕೇ ಬೇಕು. ಇದು ನಿಮ್ಮನ್ನು ರೋಗಗಳಿಂದ ದೂರವಿಡುತ್ತದೆ. ಸರಿಯಾದ ಆಹಾರ ಸೇವನೆಯು ಆರೋಗ್ಯದ ಜೊತೆಗೆ ನಿಮ್ಮ ಆಹಾರದ ಕಡುಬಯಕೆಗಳನ್ನು ಸಹ ನಿಯಂತ್ರಿಸಲು ಸಹಕಾರಿ. ತೂಕ ನಷ್ಟದ ಸಮಯದಲ್ಲಿ ಆಗಾಗ್ಗೆ ಉಂಟಾಗುವ ಹಸಿವನ್ನು ತಡೆಯಲು ದೀರ್ಘಕಾಲ ಹೊಟ್ಟೆ ತುಂಬಿಸಿಡುವ ಪದಾರ್ಥ ಸೇವನೆ ಮುಖ್ಯ.
ಫಿಟ್ನೆಸ್ ಪ್ರಯಾಣದಲ್ಲಿ ಹಸಿವನ್ನು ನಿಯಂತ್ರಿಸುವ ಬದಲು ಆರೋಗ್ಯಕರ ಜ್ಯೂಸ್, ಹಣ್ಣು, ತರಕಾರಿ ಸಲಾಡ್, ಬೀಜಗಳನ್ನು ಸೇವನೆ ಮಾಡಿ. ಇದು ಫಿಟ್ನೆಸ್ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಬಹುದು. ಇಲ್ಲಿ ನಾವು ತೂಕ ನಷ್ಟದ ಜರ್ನಿಯಲ್ಲಿ ಹಸಿವನ್ನು ನಿಯಂತ್ರಿಸಲು ಯಾವ ಆಹಾರ ಸೇವನೆ ಸಹಕಾರಿ ಎಂಬುದನ್ನು ನೋಡೋಣ.

ಆಗಾಗ್ಗೆ ಉಂಟಾಗುವ ಹಸಿವು ನಿಯಂತ್ರಿಸುವ ಆಹಾರಗಳುಓಟ್ಸ್

ಓಟ್ಸ್ ಸೇವನೆಯಿಂದ ದೀರ್ಘಕಾಲ ಹಸಿವು ತಡೆಯಬಹುದು. ಹಾಗಾಗಿ ಇದನ್ನು ಅತ್ಯುತ್ತಮ ತೂಕ ನಷ್ಟದ ಆಹಾರವೆಂದು ಕರೆಯಲಾಗುತ್ತದೆ. ಇದು ತೃಪ್ತಿ ನೀಡುತ್ತದೆ. ಹೊಟ್ಟೆಯನ್ನು ಖಾಲಿ ಮಾಡುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಓಟ್ಸ್ ಕಾರ್ಬೋಹೈಡ್ರೇಟ್‌ಗಳ ಜೊತೆಗೆ ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿದೆ. ಇತರೆ ಧಾನ್ಯಗಳಿಗಿಂತ ಹೆಚ್ಚು ಪ್ರೋಟೀನ್ ಮತ್ತು ಕೊಬ್ಬನ್ನು ಹೊಂದಿದೆ. ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ.

ಬಾದಾಮಿ

ಪ್ರತಿದಿನ ಬೆಳಿಗ್ಗೆ ನೆನೆಸಿದ ಬಾದಾಮಿ ಸೇವಿಸಿ. ಇದು ಪರಿಪೂರ್ಣ ಪೂರ್ವ ತಾಲೀಮು ಊಟ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿಸಿರಿಸುತ್ತದೆ. ಬಾದಾಮಿ ಸೇವನೆಯಿಂದ ದೇಹವು ಸಾಕಷ್ಟು ಪ್ರೋಟೀನ್ ಮತ್ತು ಮೊನೊಸಾಚುರೇಟೆಡ್ ಕೊಬ್ಬನ್ನು ಪಡೆಯುತ್ತದೆ.

ಇದು ಹೃದಯದ ಆರೋಗ್ಯಕ್ಕೆ ಅಗತ್ಯ. ಬಾದಾಮಿಯು ವಿಟಮಿನ್-ಇನಲ್ಲಿ ಸಮೃದ್ಧ. ಪ್ರಬಲವಾದ ಉತ್ಕರ್ಷಣ ನಿರೋಧಕ ಆಗಿದೆ. ಬಾದಾಮಿ ಸೇವನೆಯು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆಪೌಷ್ಟಿಕತಜ್ಞರ ಪ್ರಕಾರ, ಸಿಹಿ ಗೆಣಸು ವಿಟಮಿನ್ ಎ ಮತ್ತು ವಿಟಮಿನ್ ಸಿ ಜೊತೆಗೆ ವಿಶೇಷ ರೀತಿಯ ಪಿಷ್ಟ ಹೊಂದಿದೆ. ಇದು ಜೀರ್ಣಕಾರಿ ಕಿಣ್ವಗಳನ್ನು ಪ್ರತಿಬಂಧಿಸುತ್ತದೆ. ಹೀಗಾಗಿ ಇದು ದೀರ್ಘಕಾಲ ಹೊಟ್ಟೆ ತುಂಬಿರಿಸುತ್ತದೆ. ಇದು ಹಸಿವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.

ಕಾಫಿ

ಕಾಫಿ ಸೇವನೆಯು ದೀರ್ಘಕಾಲ ಹಸಿವನ್ನು ನಿಯಂತ್ರಿಸುತ್ತದೆ. ಆಹಾರ ತಜ್ಞರು ಸಹ ಆಹಾರದಲ್ಲಿ ಕಾಫಿ ಸೇರಿಸಲು ಶಿಫಾರಸು ಮಾಡುತ್ತಾರೆ.ಕಾಫಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಇಲ್ಲ. ಗ್ಲೈಸೆಮಿಕ್ ಸೂಚ್ಯಂಕವು ಶೂನ್ಯ. ಕೆಫೀನ್ ಹಸಿವನ್ನು ನಿಯಂತ್ರಿಸುತ್ತದೆ. ದಿನಕ್ಕೆ 3 ರಿಂದ 4 ಕಪ್ ಕಾಫಿ ಪ್ರಯೋಜನಕಾರಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರುಕ್ಮಿಣಿದೇವಿ ಅರುಂಡೇಲ್ ಭರತನಾಟ್ಯ ಕಲಾವಿದೆ.

Wed Mar 1 , 2023
  ರುಕ್ಮಿಣಿದೇವಿ ಅರುಂಡೇಲ್ ಅವರು ಥಿಯೋಸೋಫಿಸ್ಟರಾಗಿ, ಭರತನಾಟ್ಯ ಕಲಾವಿದೆಯಾಗಿ, ನೃತ್ಯ ದಿಗ್ದರ್ಶಕರಾಗಿ, ನೃತ್ಯ ಸಂಯೋಜಕರಾಗಿ, ಪ್ರಸಿದ್ಧ ಕಲಾಕ್ಷೇತ್ರ ಹುಟ್ಟುಹಾಕಿದವರಾಗಿ ಭಾರತದಲ್ಲಿ ಜನಜನಿತರು. ರುಕ್ಮಿಣಿದೇವಿ ಅರುಂಡೇಲ್ 1904ರ ಫೆಬ್ರುವರಿ 29ರಂದು ಜನಿಸಿದರು. ಭಾರತಿಯ ಸಾಂಸ್ಕೃತಿಕ ಇತಿಹಾಸದಲ್ಲಿ ಭರತನಾಟ್ಯಕಲೆಯನ್ನು ಅದರ ಮೂಲಸ್ವರೂಪವಾದ ‘ಸಾಧಿರ್’ ಎಂಬ ಪದ್ಧತಿಯಲ್ಲಿ ಪುನರೋತ್ಥಾನಗೈದವರೆಂದು ರುಕ್ಮಿಣಿದೇವಿಯವರನ್ನು ನಮ್ಮ ದೇಶದ ವಿದ್ವಾಂಸರು ಪರಿಗಣಿಸಿದ್ದಾರೆ. ಅಂದಿನ ದಿನಗಳಲ್ಲಿ ಭರತನಾಟ್ಯವೆಂಬುದು ಕೇವಲ ದೇವಸ್ಥಾನಗಳ ಸೇವಾಕರ್ತೆಯರು ಮತ್ತು ದೇವದಾಸಿಯರಿಗೆ ಸೀಮಿತವಾಗಿದ್ದು, ಅದನ್ನು ಭಾರತೀಯ ಸಾಂಸ್ಕೃತಿಕ ರಂಗದ […]

Advertisement

Wordpress Social Share Plugin powered by Ultimatelysocial