ಸೇನೆಯ ವಿರುದ್ಧ ಟ್ವೀಟ್:

ಹೊಸದಿಲ್ಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷೆ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್‌ಎ) ಸದಸ್ಯರಾಗಿದ್ದ ಶೆಹ್ಲಾ ರಶೀದ್ (Shehla Rashid) ವಿರುದ್ಧ ಸೇನಾ ವಿರೋಧಿ ಟ್ವೀಟ್‌ಗಳಿಗಾಗಿ ಮೊಕದ್ದಮೆ ದಾಖಲಿಸಲು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಅನುಮತಿ ನೀಡಿದ್ದಾರೆ. ಅಲಾಖ್ ಅಲೋಕ್ ಶ್ರೀವಾಸ್ತವ ಅವರ ದೂರಿನ ಆಧಾರದ ಮೇಲೆ ಹೊಸ ದಿಲ್ಲಿಯ ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಶೆಹ್ಲಾ ರಶೀದ್ ವಿರುದ್ಧ 2019 ರ ಎಫ್‌ಐಆರ್‌ಗೆ ಈ ಅನುಮತಿ ಸಂಬಂಧಿಸಿದೆ. ಜಮ್ಮು ಮತ್ತು ಕಾಶ್ಮೀರದ ಸಶಸ್ತ್ರ ಪಡೆಗಳ ವಿರುದ್ಧ ಶೆಹ್ಲಾ ರಶೀದ್ 2 ಟ್ವೀಟ್‌ ಮಾಡಿದ ನಂತರ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.’ಸಶಸ್ತ್ರ ಪಡೆಗಳು ರಾತ್ರಿಯಲ್ಲಿ ಮನೆಗಳನ್ನು ಪ್ರವೇಶಿಸುತ್ತಿವೆ, ಹುಡುಗರನ್ನು ಎತ್ತಿಕೊಂಡು ಹೋಗುತ್ತಿವೆ, ಮನೆಗಳನ್ನು ಲೂಟಿ ಮಾಡುತ್ತಿವೆ, ಉದ್ದೇಶಪೂರ್ವಕವಾಗಿ ಪಡಿತರವನ್ನು ನೆಲಕ್ಕೆ ಚೆಲ್ಲುತ್ತಿವೆ, ಅಕ್ಕಿಗೆ ಎಣ್ಣೆಯನ್ನು ಬೆರೆಸುತ್ತಿವೆ’ ಎಂದು ಶೆಹ್ಲಾ ರಶೀದ್ ಆಗಸ್ಟ್ 2019 ರಲ್ಲಿ ಟ್ವೀಟ್ ಮಾಡಿದ್ದಾರೆ.

 

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಕ್ಷಿಣ ಆಫ್ರಿಕಾ ಮಿನಿ ಐಪಿಎಲ್‌ ಅದ್ಧೂರಿ ಆರಂಭಕ್ಕೆ ಕ್ಷಣಗಣನೆ

Tue Jan 10 , 2023
ಮಿನಿ ಐಪಿಎಲ್‌ ಎಂದೇ ಬಿಂಬಿಸಲಾಗುತ್ತಿರುವ ದಕ್ಷಿಣ ಆಫ್ರಿಕಾ ಟಿ20 (SA 20) ಲೀಗ್‌ಗೆ ಇಂದಿನಿಂದ (ಜನವರಿ 10) ಅದ್ದೂರಿ ಚಾಲನೆ ಸಿಗಲಿದೆ. ಆರು ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿದ್ದು, ಇನ್ನೂ ಒಂದು ತಿಂಗಳು ಅಭಿಮಾನಿಗಳಿಗೆ ಚುಟುಕು ಕ್ರಿಕೆಟ್ ರಸದೌತಣ ಉಣಬಡಿಸಲಿದೆ.ಆರು ಐಪಿಎಲ್ ಫ್ರಾಂಚೈಸಿಗಳು ಎಸ್‌ಎ20 ಲೀಗ್‌ನಲ್ಲಿ ಆರು ತಂಡಗಳ ಮಾಲಿಕತ್ವ ಹೊಂದಿವೆ. ಲೋಗೋ ಮತ್ತು ಆಟಗಾರರ ಜೆರ್ಸಿಗಳು ಐಪಿಎಲ್‌ನಂತೆಯೇ ವಿನ್ಯಾಸ ಮಾಡಲಾಗಿದೆ.ಡೆಲ್ಲಿ ಕ್ಯಾಪಿಟಲ್ಸ್‌ನ ಮಾಲೀಕತ್ವ ಹೊಂದಿರುವ ಜೆಎಸ್‌ಡಬ್ಲ್ಯು ಗ್ರೂಪ್ ಪ್ರಿಟೋರಿಯಾ ಕ್ಯಾಪಿಟಲ್ಸ್ […]

Advertisement

Wordpress Social Share Plugin powered by Ultimatelysocial