ದಕ್ಷಿಣ ಆಫ್ರಿಕಾ ಮಿನಿ ಐಪಿಎಲ್‌ ಅದ್ಧೂರಿ ಆರಂಭಕ್ಕೆ ಕ್ಷಣಗಣನೆ

ಮಿನಿ ಐಪಿಎಲ್‌ ಎಂದೇ ಬಿಂಬಿಸಲಾಗುತ್ತಿರುವ ದಕ್ಷಿಣ ಆಫ್ರಿಕಾ ಟಿ20 (SA 20) ಲೀಗ್‌ಗೆ ಇಂದಿನಿಂದ (ಜನವರಿ 10) ಅದ್ದೂರಿ ಚಾಲನೆ ಸಿಗಲಿದೆ. ಆರು ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿದ್ದು, ಇನ್ನೂ ಒಂದು ತಿಂಗಳು ಅಭಿಮಾನಿಗಳಿಗೆ ಚುಟುಕು ಕ್ರಿಕೆಟ್ ರಸದೌತಣ ಉಣಬಡಿಸಲಿದೆ.ಆರು ಐಪಿಎಲ್ ಫ್ರಾಂಚೈಸಿಗಳು ಎಸ್‌ಎ20 ಲೀಗ್‌ನಲ್ಲಿ ಆರು ತಂಡಗಳ ಮಾಲಿಕತ್ವ ಹೊಂದಿವೆ. ಲೋಗೋ ಮತ್ತು ಆಟಗಾರರ ಜೆರ್ಸಿಗಳು ಐಪಿಎಲ್‌ನಂತೆಯೇ ವಿನ್ಯಾಸ ಮಾಡಲಾಗಿದೆ.ಡೆಲ್ಲಿ ಕ್ಯಾಪಿಟಲ್ಸ್‌ನ ಮಾಲೀಕತ್ವ ಹೊಂದಿರುವ ಜೆಎಸ್‌ಡಬ್ಲ್ಯು ಗ್ರೂಪ್ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವನ್ನು ಹೊಂದಿದ್ದಾರೆ. ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಪರ್ಲ್‌ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಜೋಬರ್ಗ್ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ತಂಡದ ಎಂಐ ಕೇಪ್ ಟೌನ್, ಸನ್‌ರೈಸರ್ಸ್ ಹೈದರಾಬಾದ್ ತಂಡದ ಸನ್‌ರೈಸರ್ಸ್ ಈಸ್ಟರ್ನ್‌ ಕೇಪ್, ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ಡರ್ಬನ್ ಸೂಪರ್ ಜೈಂಟ್ಸ್ ತಂಡಗಳು ಮೊದಲ ಆವೃತ್ತಿಯಲ್ಲಿ ಸೆಣೆಸಲಿವೆ. ಫೆಬ್ರವರಿ 11 ರಂದು ಫೈನಲ್ ಪಂದ್ಯ ನಡೆಯಲಿದ್ದು, ಎಸ್‌ಎ20 ಲೀಗ್‌ಗೆ ತರೆ ಬೀಳಲಿದೆ.ನ್ಯೂಲ್ಯಾಂಡ್ಸ್‌ನ ಕೇಪ್‌ಟೌನ್‌ ಅಂಗಳದಲ್ಲಿ ಎಸ್‌ಎ20 ಲೀಗ್‌ಗೆ ಅದ್ದೂರಿ ಚಾಲನೆ ದೊರೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಎಂಐ ಕೇಪ್‌ಟೌನ್‌ ಮತ್ತು ಪರ್ಲ್ ರಾಯಲ್ಸ್ ಮುಖಾಮುಖಿಯಾಗಲಿವೆ. ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ ಪಂದ್ಯ ಆರಂಭವಾಗಲಿದೆ. ಭಾರತದಲ್ಲಿ ಸ್ಪೋರ್ಟ್ಮ  ತ್ತು ವೈಯಾಕಾಮ್ 18  ಪಂದ್ಯಗಳ ನೇರಪ್ರಸಾರದ ಹಕ್ಕನ್ನು ಪಡೆದುಕೊಂಡಿವೆ. ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದು.ಎರಡೂ ತಂಡಗಳು ಮೇಲ್ನೋಟಕ್ಕೆ ಬಲಿಷ್ಠವಾಗಿದ್ದು, ಯಾವ ತಂಡ ಲೀಗ್‌ನ ಮೊದಲ ಜಯ ದಾಖಲಿಸುತ್ತದೆ ಎನ್ನುವ ಕುತೂಹಲ ಮೂಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೈಶಾಖ- ಕೌಶಿಕ್ ದಾಳಿಗೆ ತತ್ತರಿಸಿದ ರಾಜಸ್ಥಾನ

Tue Jan 10 , 2023
ಮಧ್ಯಮವೇಗಿ ವೈಶಾಖ ವಿಜಯಕುಮಾರ್ ಮತ್ತು ವಿ. ಕೌಶಿಕ್ ಅವರ ಅಮೋಘ ದಾಳಿಯ ಮುಂದೆ ರಾಜಸ್ಥಾನ ತಂಡವು ಕುಸಿಯಿತು.ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರಾಜಸ್ಥಾನ ತಂಡವು 45.3 ಓವರ್‌ಗಳಲ್ಲಿ 129 ರನ್ ಗಳಿಸಿ ಆಲೌಟ್ ಆಯಿತು.ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ರವಾಸಿ ಬಳಗಕ್ಕೆ ಆತಿಥೇಯ ತಂಡದ ವೇಗಿ ವಿದ್ವತ್ ಕಾವೇರಪ್ಪ ಮೊದಲ ಓವರ್‌ನಲ್ಲಿಯೇ ಪೆಟ್ಟು ಕೊಟ್ಟರು. ಆರಂಭಿಕ ಬ್ಯಾಟರ್ […]

Advertisement

Wordpress Social Share Plugin powered by Ultimatelysocial