ಭಾರತದ ಲಾಭದಾಯಕ ಚಿತ್ರರಂಗ ಯಾವುದೆಂದು ತಿಳಿಸಿದ ಕರಣ್ ಜೋಹರ್

‘ಕುಚ್‌ ಕುಚ್ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್’ ಇನ್ನೂ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶಿಸಿರುವ ಕರಣ್ ಜೋಹರ್, ಎಷ್ಟೊಳ್ಳೆ ನಿರ್ದೇಶಕರೋ ಅಷ್ಟೆ ಒಳ್ಳೆಯ ನಿರ್ಮಾಪಕರು ಸಹ.ಬಾಲಿವುಡ್‌ನ ದೈತ್ಯ ನಿರ್ಮಾಣ ಸಂಸ್ಥೆ ಧರ್ಮಾ ಪ್ರೊಡಕ್ಷನ್‌ನ ಮಾಲೀಕರಾಗಿರುವ ಕರಣ್ ಜೋಹರ್ ಹಲವು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ, ವಿತರಣೆಗಳನ್ನು ಮಾಡುತ್ತಾ ಬಂದಿದ್ದಾರೆ.ಸಿನಿಮಾ ನಿರ್ದೇಶನ, ನಿರ್ಮಾಣ ನಟನೆಯ ಜೊತೆಗೆ ತಮ್ಮ ಟಾಕ್‌ ಶೋ, ಫ್ಯಾಷನ್ ಸೆನ್ಸ್, ಹಾಸ್ಯ ಮತ್ತು ಡೋಂಟ್ ಕೇರ್ ಮಾತುಗಳಿಂದಾಗಿಯೂ ಕರಣ್ ಜೋಹರ್ ಬಹಳ ಖ್ಯಾತರು. ಇತ್ತೀಚೆಗಿನ ಪಾಡ್‌ಕಾಸ್ಟ್‌ ಒಂದರಲ್ಲಿ ಅವರು ಬಾಲಿವುಡ್‌ನ ಯುವನಟರು, ಭಾರತದ ಲಾಭದಾಯಕ ಚಿತ್ರೋದ್ಯಮ ಇತ್ಯಾದಿಗಳ ಬಗ್ಗೆ ಮಾತನಾಡಿದ್ದಾರೆ.ನಟರ ಸಂಭಾವನೆ ಬಗ್ಗೆ ಕರಣ್ ತಕರಾರು ಪೋಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ನಟ ಕರಣ್ ಜೋಹರ್, ಇತ್ತೀಚಿನ ನಟರಿಗೆ ಆಸೆ ಹೆಚ್ಚು ಎಂದಿದ್ದಾರೆ. ”ಐದು ಕೋಟಿಯ ಓಪನಿಂಗ್ ಸಹ ನೀಡಲಾಗದ ಕೆಲವು ನಟರು 20 ಕೋಟಿ ಸಂಭಾವನೆ ಕೇಳುತ್ತಾರೆ” ಎಂದಿರುವ ಕರಣ್ ಜೋಹರ್, ನಾವು ಸ್ಟಾರ್‌ಗಳೆಂಬ ಭ್ರಮೆ ಹಲವರನ್ನು ಕಾಡುತ್ತಿದೆ. ವ್ಯಾಕ್ಸಿನ್ ಇಲ್ಲದ ಕಾಯಿಲೆ ಭ್ರಮೆ ಎಂದಿದ್ದಾರೆ ಕರಣ್ ಜೋಹರ್. ಈ ಮಾತುಗಳನ್ನು ಹೇಳಿದ್ದಕ್ಕೆ ನನ್ನನ್ನು ಕೊಲ್ಲಲೂ ಬಹುದೇನೋ ಎಂದು ಹಾಸ್ಯ ಮಾಡಿದ್ದಾರೆ.ಸಿನಿಮಾ ಬ್ಯುಸಿನೆಸ್‌ ಬಗ್ಗೆಯೂ ಮಾತನಾಡಿರುವ ಕರಣ್ ಜೋಹರ್, ”ನನ್ನ ಹೃದಯ, ಮನಸ್ಸು ಎಲ್ಲವೂ ಹಿಂದಿ ಸಿನಿಮಾಗಳಲ್ಲಿಯೇ ಇದೆ. ಆದರೆ ಒಬ್ಬ ಬ್ಯುಸಿನೆಸ್‌ ಮ್ಯಾನ್ ಆಗಿ ನೋಡುವುದಾದರೆ ಭಾರತದಲ್ಲಿ ಪ್ರಸ್ತುತ ಅತಿ ಹೆಚ್ಚು ಲಾಭದಾಯಕ ಉದ್ಯಮವೆಂದರೆ ಅದು ತೆಲುಗು ಚಿತ್ರರಂಗ” ಎಂದಿದ್ದಾರೆ ಕರಣ್ ಜೋಹರ್. ಆ ಚಿತ್ರರಂಗದ ಸಣ್ಣ ಸಿನಿಮಾಗಳು ಸಹ ಲಾಭ ಮಾಡುತ್ತಿವೆ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸಕೋಟೆ ನಂತರ ದೊಡ್ಡಬಳ್ಳಾಪುರದ ಕಾಂಗ್ರೆಸಿಗರಲ್ಲೂ ಭಿನ್ನಮತ ಸ್ಪೋಟ.

Fri Jan 6 , 2023
ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಭಿನ್ನಮತ ಸ್ಪೋಟ. ಹಾಲಿ ಶಾಸಕ ಟಿ ವೆಂಕಟರಮಣಯ್ಯ ಹಾಗೂ ಬಮೂಲ್ ನಿರ್ದೇಶಕ ಬಿ ಸಿ ಆನಂದ್ ಕುಮಾರ್ ನಡುವೆ ಭಿನ್ನಮತ ಸ್ಪೋಟ ಹಾಲಿ ಕಾಂಗ್ರೆಸ್ ಶಾಸಕ ಟಿ ವೆಂಕಟರಮಣಯ್ಯ ವಿರುದ್ದ ಸಿಡಿದೆದ್ದ ಬಿ ಸಿ ಆನಂದ್ ಕುಮಾರ್ ಬೆಂಬಲಿಗರು. ಸ್ವಾಭಿಮಾನಿ ಕಾಂಗ್ರೆಸ್ ಮುಖಂಡರ ಒಕ್ಕೂಟ ಮಾಡಿ ಹಾಲಿ ಶಾಸಕರ ವಿರುದ್ದ ಆಕ್ರೋಶ ದೊಡ್ಡಬಳ್ಳಾಪುರ […]

Advertisement

Wordpress Social Share Plugin powered by Ultimatelysocial