ಬಸ್ ಸಂಚಾರ ಆರಂಭಿಸಿದ ಕೇವಲ ಮೂರು ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು…!

 

ಡೀಸೆಲ್, ಪೆಟ್ರೋಲ್ ವಾಹನಗಳ ದಟ್ಟಣೆಯಿಂದ ಉಂಟಾಗುತ್ತಿದ್ದ ಪರಿಸರ ಮಾಲಿನ್ಯದಿಂದ ಹೊರ ಬರಲು ದೆಹಲಿ ಸರ್ಕಾರ ದೇಶದ ರಾಜಧಾನಿಯಲ್ಲಿ ಪರಿಚಯಿಸಿರುವ ಎಲೆಕ್ಟ್ರಿಕ್ ಬಸ್ ಗಳ ಸಂಚಾರಕ್ಕೆ ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಸ್ ಸಂಚಾರ ಆರಂಭಿಸಿದ ಕೇವಲ ಮೂರು ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದಾರೆ.

ಈ ಪ್ರಯಾಣಿಕರಲ್ಲಿ 40% ಮಂದಿ ಮಹಿಳೆಯರು ಸೇರಿರುವುದು ವಿಶೇಷವಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಸಾರಿಗೆ ಮಂತ್ರಿ ಕೈಲಾಶ್ ಗೆಹ್ಲೋಟ್ ಅವರು, ನಮ್ಮ 150 ಇ-ಬಸ್ ಗಳಲ್ಲಿ ಕೇವಲ 3 ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಬಣ್ಣಿಸಿದ್ದಾರೆ.

ಈ ಪೈಕಿ 40% ರಷ್ಟು ಮಹಿಳಾ ಪ್ರಯಾಣಿಕರಿರುವುದು ವಿಶೇಷವಾಗಿದ್ದು, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಬಲಪಡಿಸುವತ್ತ ನಾವು ಗಮನಹರಿಸಲಿದ್ದೇವೆ ಎಂದಿದ್ದಾರೆ.

ಮೇ 24 ರಂದು ಕೇಜ್ರಿವಾಲ್ ಈ 150 ಬಸ್ ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದರು ಮತ್ತು ಸಾರ್ವಜನಿಕ ಸಾರಿಗೆ ಅದರಲ್ಲೂ ಇ-ಬಸ್ ಗಳಲ್ಲಿ ಪ್ರಯಾಣಿಸುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೇ 24 ರಿಂದ 26 ರವರೆಗೆ ಮೂರು ದಿನಗಳ ಕಾಲ ಇ-ಬಸ್ ಗಳಲ್ಲಿ ಉಚಿತ ಪ್ರಯಾಣದ ಕೊಡುಗೆ ನೀಡಲಾಗಿತ್ತು.

ಮೊದಲ ದಿನ 12,000 ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸಿದ್ದರೆ, ಎರಡನೇ ದಿನ 28,000 ಮತ್ತು ಮೂರನೇ ದಿನವಾದ ಮೇ 26 ರಂದು 52,000 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಈ ಇ-ಬಸ್ ಪ್ರಯಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಿಎಂ ಕೇಜ್ರಿವಾಲ್, ಇ-ಬಸ್ ನಲ್ಲಿ ಪ್ರಯಾಣಿಸಿ ಸೆಲ್ಫಿ ತೆಗೆದು ಅಪ್ಲೋಡ್ ಮಾಡಿದವರಿಗೆ ಬಹುಮಾನ ಯೋಜನೆಯನ್ನೂ ಪ್ರಕಟಿಸಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಬಸ್ ನಲ್ಲಿ ಪ್ರಯಾಣಿಸುವ ತಮ್ಮ ಸೆಲ್ಫಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಂಡೀಪುರದಲ್ಲಿ ಪ್ರವಾಸಿಗರು ಫೋಟೋ ತೆಗೆಯುವ ಹುಚ್ಚು, ಪ್ರಾಣಿಗಳಿಗೆ ಕಿರಿಕಿರಿ.

Sun May 29 , 2022
  ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial