ನೂತನ CoSC ಆಗಿ ಅಧಿಕಾರವಹಿಸಿಕೊಂಡ ಜನರಲ್ ನರವಣೆ

ನೂತನ CoSC ಆಗಿ ಅಧಿಕಾರವಹಿಸಿಕೊಂಡ ಜನರಲ್ ನರವಣೆ

ನವದೆಹಲಿ, ಡಿಸೆಂಬರ್ 16: ನೂತನ CoSC ಆಗಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅಧಿಕಾರವಹಿಸಿಕೊಂಡಿದ್ದಾರೆ.

ಭಾರತೀಯ ಸೇನಾ ಪಡೆಯ ಮೂರೂ ವಿಭಾಗದ ಮುಖ್ಯಸ್ಥ ಹುದ್ದೆಯಾದ ಚೀಫ್‌ ಆಫ್‌ ಸ್ಟಾಫ್‌ ಕಮಿಟಿ ಅಧ್ಯಕ್ಷರಾಗಿ ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಜನರಲ್ ಬಿಪಿನ್‌ ರಾವತ್‌ ಸಾವಿನ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನರವಣೆ ಅವರನ್ನು ನೇಮಕ ಮಾಡಲಾಗಿದೆ.

ಸಶಸ್ತ್ರ ಪಡೆಗಳ ಮುಖ್ಯಸ್ಥ ಹುದ್ದೆ ಸೃಷ್ಟಿಗೂ ಮುನ್ನ ಈ ಹುದ್ದೆ ಇತ್ತು.

ಜನರಲ್ ನರವಣೆ ಬಗ್ಗೆ ಒಂದಷ್ಟು ಮಾಹಿತಿ: ಚೀಫ್ ಆಫ್ ಆರ್ಮಿ ಸ್ಟಾಫ್(COAS) ಜನರಲ್ ಬಿಪಿನ ರಾವತ್ ಅವರನ್ನು 2019ರಲ್ಲಿ ಮೂರು ಸೇನೆಗಳ ಮುಖ್ಯಸ್ಥರನ್ನಾಗಿ(CDS) ನೇಮಕ ಮಾಡಲಾಯಿತು. ಹೀಗಾಗಿ ತೆರವಾದ COAS ಸ್ಥಾನಕ್ಕೆ ಡಿಸೆಂಬರ್ 31, 2019ರಲ್ಲಿ ಮನೋಜ್ ಮುಕುಂದ್ ನರವಣೆಯನ್ನು ನೇಮಕ ಮಾಡಲಾಗಿತ್ತು. ಸರಿಸುಮಾರು 2 ವರ್ಷಗಳ ಕಾಲ COAS ಆಗಿ ಸೇವೆ ಸಲ್ಲಿಸಿದ ಎಂಎಂ ನರವಣೆ ಇದೀಗ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಬಡ್ತಿ ಪಡೆದಿದ್ದಾರೆ.

ಸೇನೆ, ನೌಕಾಪಡೆ ಮತ್ತು ವಾಯಪಡೆಯ ಮುಖ್ಯಸ್ಥರ ಪೈಕಿ ಅತ್ಯಂತ ಹಿರಿಯರು ಚೀಫ್‌ ಆಫ್‌ ಸ್ಟಾಫ್‌ ಕಮಿಟಿ ಅಧ್ಯಕ್ಷರಾಗಿ ನಿಯುಕ್ತಿಗೊಳ್ಳುತ್ತಿದ್ದರು.

ಈ ಹಿಂದೆ ಬಿಪಿನ್‌ ರಾವತ್‌ ಅವರು ಈ ಹುದ್ದೆ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥ ಹುದ್ದೆ ಎರಡನ್ನೂ ನಿರ್ವಹಿಸುತ್ತಿದ್ದರು.

ಇದೀಗ ನರವಣೆ ಈ ಹುದ್ದೆಗೆ ನೇಮಕವಾಗಿರುವ ಹಿನ್ನೆಲೆಯಲ್ಲಿ ಅವರೇ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಬಹುದು ಎಂಬ ಸುದ್ದಿಗೆ ಇನ್ನಷ್ಟು ಬಲ ಬಂದಿದೆ.

ಭಾರತೀಯ ಸೇನಾ ಮುಖ್ಯಸ್ಥರ ಸ್ಥಾನಕ್ಕೆ ನಾಲ್ವರ ಹೆಸರು ಕೇಳಿಬಂದಿತ್ತು. ಇದರಲ್ಲಿ ನರವಣೆ ಹೆಸರು ಮುಂಚೂಣಿಯಲ್ಲಿತ್ತು.

ಇತರ ಮೂವರ ಹೆಸರುಗಳೆಂದರೆ ನಿವೃತ್ತ ಏರ್‌ಚೀಫ್ ಮಾರ್ಷಲ್ ಆರ್‌ಕೆಎಸ್ ಬದೌರಿಯಾ, ವಾಯುಸೇನೆ ಎರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಹಾಗೂ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಹೆಸರುಗಳು ಕೇಂದ್ರ ಸಚಿವ ಸಂಪುಟ ಭದ್ರತಾ ಸಮಿಯಲ್ಲಿ ಚರ್ಚೆಯಾಗಿತ್ತು. ಅಂತಿಮವಾಗಿ ನರವಣೆಗೆ CDS ಸ್ಥಾನ ನೀಡಲಾಗಿದೆ.

ನರವಣೆ ಪರಿಚಯ: ಮಹಾರಾಷ್ಟ್ರ ಮೂಲದ ಎಂಎಂ ನರವಣೆ ತಂದೆ ಮಕುಂದ್ ನರವಣೆ ವಾಯುಸೇನೆಯ ವಿಂಗ್ ಕಮಾಂಡರ್ ಆಗಿ ನಿವೃತ್ತರಾಗಿದ್ದಾರೆ. ತಾಯಿ ಆಲ್ ಇಂಡಿಯಾ ರೇಡಿಯೋದ ವಾಚಕಿಯಾಗಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಸೂಕ್ತ ಸಮಯಕ್ಕೆ ಸಿಗದ ಅಂಬ್ಯಲೆನ್ಸ್ : ನವಜಾತ ಶಿಶು ಸಾವು

Thu Dec 16 , 2021
ಶಿವಮೊಗ್ಗ:ಶಿವಮೊಗ್ಗದ ಸಾಗರ ತಾಲೂಕಿನ ತಮರಿಯಲ್ಲಿ ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುವ ನವಜಾತ ಶಿಶು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ರಾತ್ರಿ ನಡೆದಿದೆ. ನಿನ್ನೆ ತಡರಾತ್ರಿ ಚೈತ್ರಾ ಎಂಬ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಂಬ್ಯುಲೆನ್ಸ್‌ಗೆ ಮನವಿ ಮಾಡಿದರೂ ಯಾರೂ ಸಿಗಲಿಲ್ಲ. ಹೀಗಾಗಿ ನಿನ್ನೆ ರಾತ್ರಿ ಚೈತ್ರಾ ಅವರನ್ನು ಖಾಸಗಿ ವಾಹನದಲ್ಲಿ ತಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಿಳೆ ಹೆಣ್ಣು ಮಗುವಿಗೆ […]

Advertisement

Wordpress Social Share Plugin powered by Ultimatelysocial